

ನವದೆಹಲಿ: ಮದುವೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಇಲ್ಲಿಯವರೆಗೆ ನೀವು ಕೇವಲ ಮನುಷ್ಯರ ಮದುವೆಗಳನ್ನು ನೋಡಿರಬೇಕು. ಆದರೆ ಇಂದು ನಾವು ನಿಮಗೆ ನಾಯಿಗಳ ಮದುವೆಯ ವಿಡಿಯೋ ತೋರಿಸಲಿದ್ದೇನೆ.
ಇಲ್ಲೋಂದು ಕುಟುಂಬವು ಮನೆ ಮಕ್ಕಳನ್ನು ಮದುವೆ ಮಾಡುವಂತೆ ಸಾಂಪ್ರದಾಯಿಕವಾಗಿ ಶ್ವಾನಗಳ ಮದುವೆ ಮಾಡಿದ್ದಾರೆ. ಈ ಮದುವೆಯಲ್ಲಿ ಬಹಳಷ್ಟು ಜನರು ಭಾಗವಹಿಸಿದ್ದರು ಮತ್ತು ಎಲ್ಲಾ ಹಿಂದೂ ಸಂಪ್ರದಾಯಗಳೊಂದಿಗೆ ಶ್ವಾನ ಜೋಡಿಯ ವಿವಾಹ ವಿಧಿವಿಧಾನಗಳು ನೆರವೇರಿದವು. ಮದುವೆಯಾಗುತ್ತಿರುವ ನಾಯಿಮರಿಗಳ ಹೆಸರು ರಿಯೋ ಮತ್ತು ರಿಯಾ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಆಶ್ಚರ್ಯವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?:
ವಿಧಿವಿಧಾನಗಳ ಪ್ರಕಾರ ನಾಯಿಗಳಿಗೆ ಮದುವೆ ಮಾಡಲಾಯಿತು
ಎಲ್ಲಕ್ಕಿಂತ ಮೊದಲು ಎಲ್ಲರೂ ತಮ್ಮ ಪ್ರೀತಿಯ ರಿಯಾ ಎಂಬ ಶ್ವಾನವನ್ನು ವಧುವನ್ನು ಕರೆದುಕೊಂಡು ಬರುವಂತೆ ಹೂವಿನ ಪಲ್ಲಕ್ಕಿಯಲ್ಲಿ ಕರೆ ತಂದಿದ್ದಾರೆ. ರಿಯೋ ಎಂಬ ಹೆಸರಿನ ನಾಯಿ ( ವರ ) ಕೂಡ ಚಿಕ್ಕ ಕಾರಿನಲ್ಲಿ ಬರುತ್ತೆ. ರಿಯೊದ ಮೆರವಣಿಗೆಯಲ್ಲಿ ಕೆಲವರು ಕುಣಿದು ಕುಪ್ಪಳಿಸುತ್ತಾ ಆಗಮಿಸಿದ್ದಾರೆ. ನಂತರ ಎರಡೂ ಶ್ವಾನ ದಂಪತಿ ಮಾಲೆ ಬದಲಿಸಿಕೊಳ್ಳುತ್ತಾರೆ. ಇದರ ನಂತರ, ವರನ ಶೂಗಳನ್ನು ಕದಿಯುವ ಆಚರಣೆಯನ್ನು ಸಹ ನಡೆಸಲಾಗುತ್ತದೆ. ಇದರ ನಂತರ, ರಿಯಾ ಮತ್ತು ರಿಯೊ ಎಂಬ ನಾಯಿಗಳನ್ನು ಅವುಗಳ ಮಾಲೀಕರು ತಮ್ಮ ಮಡಿಲಲ್ಲಿ ಹೊತ್ತುಕೊಂಡು ಏಳು ಹೆಜ್ಜೆ ನಡೆದು ಸಪ್ತಪದಿ ತುಳಿಯುತ್ತಾರೆ. ಈ ಸಮಯದಲ್ಲಿ, ಪಂಡಿತ್ ಜಿ ಅವರು ಮದುವೆಗೆ ಮಂತ್ರಗಳನ್ನು ಪಠಿಸುತ್ತಾರೆ.ಕೊನೆಗೆ ರಿಯಾಳ ವಿದಾಯ ಕ್ಷಣ ಬರುತ್ತದೆ. ಅಲಂಕೃತವಾದ ಪಲ್ಲಕ್ಕಿಯಲ್ಲಿ ರಿಯಾಳನ್ನು ಬೀಳ್ಕೊಡಲಾಗುತ್ತದೆ. ಸಾಮಾನ್ಯವಾಗಿ ನಾಲ್ಕು ಜನ ಸೇರಿ ಅವನ ಪಲ್ಲಕ್ಕಿಯನ್ನು ಎತ್ತಿಕೊಂಡು ತೆಗೆದುಕೊಂಡು ಹೋಗುತ್ತಾರೆ.
ಈ ವೈರಲ್ ವೀಡಿಯೊವನ್ನು VBT ವರ್ಲ್ಡ್ ಹೆಸರಿನ Instagram ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದನ್ನು 76 ಲಕ್ಷ ಜನರು ವೀಕ್ಷಿಸಿದ್ದಾರೆ ಮತ್ತು ಸುಮಾರು 4 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ವೀಡಿಯೋದಲ್ಲಿ ಈ ಕುಟುಂಬದ ದುಂದುವೆಚ್ಚದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಾಯಿ ಆಟಗಳಿಗೆ ಇವರು ಖರ್ಚು ಮಾಡಿದ ಹಣದಲ್ಲಿ ಬಡವನ ಮಗಳ ಮದುವೆ ಮಾಡಬಹುದಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.