ರಾಮನಾಮ ಜಪಿಸುತ್ತಿರುವ ಶ್ವಾನ! ವಿಡಿಯೋ ವೈರಲ್! Dog Video

dog video
Published on

ನವದೆಹಲಿ: ರಾಮ ( Ram ) ಎಂಬ ಎರಡಕ್ಷರವನ್ನು ಪಠಿಸುವುದರಿಂದ ಮನಸ್ಸಿಗೆ ಅತೀವ ಆನಂದವಾಗುತ್ತದೆ. ರಾಮನ ನಾಮಸ್ಮರಣೆಯಿಂದ ಪಾಪಗಳು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಮನೆಯ ಹಿರಿಯರು ತಮ್ಮ ಮಕ್ಕಳಿಗೆ ರಾಮನಾಮ... ಮಂತ್ರ (Rama Nama Mantra ) ಹೇಳಿಕೊಡುತ್ತಾರೆ.

ನಾಯಿಯೊಂದು ( Dog Video ) ಅದರ ಮಾಲೀಕರು ಹೇಳಿದಂತೆ ರಾಮನಾಮವನ್ನು ಜಪಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​​ ಆಗಿದೆ.  ನೆಟಿಜನ್‌ಗಳು  ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವೀಡಿಯೋದಲ್ಲಿ ಏನಿದೆ?:   ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಮುದ್ದಿನ ನಾಯಿಗೆ ರಾಮನ ಹೆಸರನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿಕೊಡುತ್ತಿದ್ದಾರೆ. ಶ್ವಾನ ಕೂಡಾ.. ರಾಮ..ರಾಮ ಎಂದು ಹೇಳಿದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋವನ್ನು @ranvijayT90 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋಗೆ ನೆಟಿಜನ್‌ಗಳು ಮೆಚ್ಚುಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net