ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!

Pub-crime-1
Published on

ಚೆನ್ನೈ: ಸಾಕುನಾಯಿಗೂ ಕರೆಯಲಿಕ್ಕೆ ಎಂದು ಹೆಸರಿರುತ್ತದೆ ನಿಜ. ಅದಾಗ್ಯೂ ಅಕ್ಕಪಕ್ಕದ ಮನೆಯವರೂ ತಮ್ಮ ನಾಯಿಯನ್ನು ಹೆಸರು ಹೇಳಿಯೇ ಕರೆಯಬೇಕು ಎಂದು ಅಪೇಕ್ಷಿಸುವುದು ಅತಿರೇಕ. ಅಂಥದ್ದೇ ಒಂದು ಅತಿರೇಕದಲ್ಲಿ ನಾಯಿಯನ್ನು ನಾಯಿ ಎಂದು ಕರೆದಿದ್ದಕ್ಕೆ ಅದರ ಮಾಲೀಕ ಪಕ್ಕದ ಮನೆಯವನನ್ನು ಕೊಂದುಬಿಟ್ಟಿದ್ದಾನೆ.

ನಾಯಿಯೊಂದನ್ನು ನಾಯಿ ಎಂದಿದ್ದಕ್ಕೆ ರಾಯಪ್ಪಂ ಎಂಬ 62 ವರ್ಷದ ವ್ಯಕ್ತಿ ಅನ್ಯಾಯವಾಗಿ ಕೊಲೆಯಾಗಿದ್ದಾನೆ. ಕೊಲೆ ಆರೋಪದ ಮೇಲೆ ಪಕ್ಕದ ಮನೆಯ ತಾಯಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್​ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ತಮಿಳುನಾಡಿನ ತಡಿಕೊಂಬು ಪೊಲೀಸ್ ಠಾಣೆ ವ್ಯಾಪ್ತಿಯ ಉಳಗಂಪಟ್ಟಿಕೊಟ್ಟಂ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿ ನಿರ್ಮಲಾ ಫಾತಿಮಾ ರಾಣಿ ಹಾಗೂ ಆಕೆಯ ಮಕ್ಕಳಾದ ಡೇನಿಯಲ್ ಮತ್ತು ವಿನ್ಸೆಂಟ್ ನೆಲೆಸಿದ್ದರು. ಈಕೆ ಹಾಗೂ ಈಕೆಯ ಮಕ್ಕಳು ನಾಯಿಯೊಂದನ್ನು ಸಾಕಿದ್ದು, ಆ ನಾಯಿಯನ್ನು ಯಾರೂ ಎಂದು ಕರೆಯಬಾರದು ಎಂದು ತಾಕೀತು ಮಾಡಿದ್ದರು. ಅಕ್ಕಪಕ್ಕದವರು ಹಾಗೆ ಕರೆದರೆ ಸಿಟ್ಟಾಗುತ್ತಿದ್ದರು.

ಇತ್ತೀಚೆಗೆ ರಾಯಪ್ಪಂ ತಮ್ಮ ಮನೆ ಪಕ್ಕದ ವಾಟರ್​ ಪಂಪ್​ನಲ್ಲಿನ ಮೋಟಾರ್ ಆಫ್ ಮಾಡಲು ಬರುವಂತೆ ಮೊಮ್ಮಗನನ್ನು ಕೂಗಿ ಕರೆದಿದ್ದ. ಹಾಗೆ ಬರುವಾಗ ದೊಣ್ಣೆ ಹಿಡಿದುಕೊಂಡು ಬಾ, ನಾಯಿ ಸಿಕ್ಕೀತು ಎಂದೂ ಹೇಳಿದ್ದ. ಅಲ್ಲೇ ಸುಳಿದಾಡುತ್ತಿದ್ದ ಡೇನಿಯಲ್ ಇದನ್ನು ಕೇಳಿ ರಾಯಪ್ಪಂ ಮೇಲೆರಗಿದ್ದ. ನಾಯಿ ಅಂತ ಕರಿಬೇಡ ಎಂದು ಎಷ್ಟು ಸಲ ಹೇಳಿಲ್ಲ ಎಂದು ಆತನ ಎದೆಮೇಲೆ ಗುದ್ದಿದ್ದ. ಆಗ ಕೆಳಕ್ಕೆ ಬಿದ್ದ ರಾಯಪ್ಪಂ ತೀವ್ರ ಅಸ್ವಸ್ಥಗೊಂಡಿದ್ದ. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಮೃತಪಟ್ಟಿದ್ದ. ರಾಯಪ್ಪಂ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಫಾತಿಮಾ ಮತ್ತು ಮಕ್ಕಳನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net