ಕಾಣೆಯಾದ ಐಎಎಸ್ ಅಧಿಕಾರಿಯ ನಾಯಿ; ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ಪೊಲೀಸರು!

Dog Miss Poster
Published on

ನವದೆಹಲಿ: ಐಎಎಸ್ ಅಧಿಕಾರಿಯೊಬ್ಬರ ನಾಯಿ ನಾಪತ್ತೆಯಾಗಿದೆ. ಇದೀಗ ಕಾಣೆಯಾಗಿರುವ ನಾಯಿಗಾಗಿ ಪೊಲೀಸರು ಎರಡು ದಿನದಿಂದ ಹುಡುಕಾಟ ನಡೆಸುತ್ತಿದ್ದಾರೆ. ಗ್ವಾಲಿಯರ್‌ನ ಬಿಲುವಾ ಪ್ರದೇಶದಿಂದ ನಾಯಿ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಸದ್ಯ ಎರಡು ದಿನ ಕಳೆದರೂ ನಾಪತ್ತೆಯಾಗಿರುವ ನಾಯಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು, ನಾಯಿ ಕಾಣೆಯಾದ ಬಗ್ಗೆ ಮಾಹಿತಿ ಬರೆದಿರುವ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.

ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯ ಎರಡು ನಾಯಿಗಳನ್ನು ದೆಹಲಿಯಿಂದ ಭೋಪಾಲ್‌ಗೆ ಕರೆದೊಯ್ಯಲಾಗುತ್ತಿತ್ತು. ನಾಯಿಯನ್ನು ಕರೆದೊಯ್ಯುತ್ತಿದ್ದ ಸಿಬ್ಬಂದಿ ಊಟಕ್ಕಾಗಿ ಡಾಬಾದ ಬಳಿ ಕಾರು ನಿಲ್ಲಿಸಿದ್ದಾರೆ. ಸಿಬ್ಬಂದಿ ಊಟ ಮಾಡುತ್ತಿದ್ದಾಗ ಎರಡೂ ನಾಯಿಗಳು ಕಾರಿನಿಂದ ಜಿಗಿದು ಓಡಿ ಹೋಗಿವೆ. ಇದನ್ನೂ ಓದಿ: ನಿದ್ರೆಗೆ ಜಾರಿದ ಸಿದ್ದರಾಮಯ್ಯ; ತಟ್ಟಿ ಎಬ್ಬಿಸಿದ ಡಿಕೆಶಿ!

ಸತತ ಹುಡುಕಾಟದ ನಂತರ ಕಾಣೆಯಾಗಿರುವ ಎರಡು ನಾಯಿಗಳಲ್ಲಿ ಒಂದು ನಾಯಿ ಪತ್ತೆಯಾಗಿದೆ. ಇದೀಗ ನಾಪತ್ತೆಯಾಗಿರುವ ಇನ್ನೊಂದು ನಾಯಿಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರೆದಿದೆ. ಸದ್ಯ ಪೊಲೀಸರು ಗ್ವಾಲಿಯರ್ ಮೃಗಾಲಯದ ಸಿಬ್ಬಂದಿಯನ್ನು ಕರೆದೊಯ್ದು ನಾಯಿಯನ್ನು ಹುಡುಕುತ್ತಿದ್ದಾರೆ. ಕಾಣೆಯಾದ ನಾಯಿಯನ್ನು ಹುಡುಕಿಕೊಟ್ಟವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಉಪವಿಭಾಗಾಧಿಕಾರಿ ವಿವೇಕ್ ಶರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net