

ನ್ಯೂಯಾರ್ಕ್: ಅಮೆರಿಕದ ನಾರ್ಥ್ ಕರೋಲಿನಾದಲ್ಲಿ ವಾಸವಿರುವ ಕುಟುಂಬವೊಂದರ ಶ್ವಾನವು ನಿಂಬೆ ಹಣ್ಣಿನ ಬಣ್ಣದ ಮರಿಗೆ ಜನ್ಮ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ವಿಶೇಷವೆಂದೆರೆ ಶ್ವಾನದ ಮರಿಗೆ ಬಾಲಿವುಡ್ ಕಾಲ್ಪನಿಕ ಚಿತ್ರ "ಹಲ್ಕ್" ಎಂದು ಹೆಸರಿಡಲಾಗಿದೆ. ಹೇವುಡ್ ಕಂಟ್ರಿಯಲ್ಲಿರುವ ಶನಾ ಸ್ಟೆಮೇ ಎಂಬುವರೇ ಶ್ವಾನದ ಮಾಲೀಕರಾಗಿದ್ದು, ಜಿಪ್ಸಿ ಹೆಸರಿನ ತಮ್ಮ ನಾಯಿಯು ಶುಕ್ರವಾರ ಮುಂಜಾನೆ 8 ಮರಿಗಳಿಗೆ ಜನ್ಮ ನೀಡಿದೆ.
ಜಿಪ್ಸಿಯ ಮೊದಲ ಮೂರು ಹೆರಿಗೆ ಸುಲಭವಾಗಿ ನಡೆಯಿತು. ಆದರೆ, ನಿಂಬೆ ಹಣ್ಣಿನ ಬಣ್ಣದಿಂದ ಕೂಡಿದ ನಾಲ್ಕನೇ ಮರಿಯ ಹೆರಿಗೆ ಸಮಯದಲ್ಲಿ ಸ್ವಲ್ಪ ಕಷ್ಟವಾಯಿತು. ನೋಡಲು ಅದು ವಿಲಕ್ಷಣವಾಗಿತ್ತು. ಆದರೆ ಎಲ್ಲ ಮರಿಗಳು ಆರೋಗ್ಯವಾಗಿವೆ ಎಂದು ಶನಾ ಸ್ಟೆಮೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶ್ವಾನದ ಮರಿಯು ನಿಂಬೆ ಬಣ್ಣಿದಿಂದ ಕೂಡಿರುವುದಕ್ಕೆ ಪರಿಣಿತರು ಸಾಮಾನ್ಯ ವಿವರಣೆಯನ್ನೇ ನೀಡಿದ್ದಾರೆ. ಜಿಪ್ಸಿ ಹೊಟ್ಟೆಯೊಳಗಿನ ದ್ರವವು ಗರ್ಭಾವಸ್ಥೆಯಲ್ಲಿ ಬಿಳಿ ನಾಯಿಯ ತುಪ್ಪಳಕ್ಕೆ ಅಂಟಿಕೊಂಡಿರಬೇಕಷ್ಟೇ ಎಂದು ವೆನೆಸ್ವಿಲ್ಲೆಯಲ್ಲಿರುವ ಜುನಾಲುಸ್ಕ ಪಶುವೈದ್ಯಾಲಯದ ಮ್ಯಾನೇಜರ್ ಸುಜಾನ್ನೆ ಸಿಯಾಂಸಿಯುಲಿ ತಿಳಿಸಿದ್ದಾರೆ. (ಏಜೆನ್ಸೀಸ್)