ಇಬ್ಬರು ಮಕ್ಕಳ ಮೇಲೆ ಭಯಾನಕವಾಗಿ ದಾಳಿ ಮಾಡಿದ ನಾಯಿ; ಬಾಲಕರು ಆಸ್ಪತ್ರೆಗೆ ದಾಖಲು

Child 14 March 20
Published on

ಕುಣಿಗಲ್: ಬೀದಿ ನಾಯಿ ದಾಳಿಗೆ ಇಬ್ಬರು ಪುಟ್ಟ ಮಕ್ಕಳು ತೀವ್ರವಾಗಿ ಗಾಯಗೊಂಡ ದುರ್ಘಟನೆ ಇಲ್ಲಿನ ವಾರ್ಡ್​ ನಂ.2ರ ನೀಲತ್ತಹಳ್ಳಿ ಕ್ರಾಸ್​ನಲ್ಲಿ ನಡೆದಿದೆ.

ಪ್ರಥ್ವಿಕ್​ (4) ಹಾಗೂ ಮಹಮದ್​ ಆಸೀಫ್​ ಗಾಯಗೊಂಡ ಮಕ್ಕಳು. ಪ್ರಥ್ವಿಕ್​ ಶನಿವಾರ ಮಧ್ಯಾಹ್ನದ ಹೊತ್ತಲ್ಲಿ ತಾಯಿ ಜತೆ ಮನೆಯ ಎದುರು ಆಟವಾಡುತ್ತಿದ್ದ. ಏಕಾಏಕಿ ನಾಯಿ ದಾಳಿ ಮಾಡಿದೆ. ಪ್ರಥ್ವಿಕ್​ನ ತಲೆಭಾಗಕ್ಕೆ ತೀವ್ರ ಗಾಯವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತನನ್ನು ಕಚ್ಚಿದ ನಾಯಿ ಅಲ್ಲೇ ಸಮೀಪದ ಇನ್ನೊಂದು ಮನೆಯ ಬಾಲಕ ಮಹಮದ್ ಆಸೀಫ್​ನ ಹಣೆಗೆ ಕಚ್ಚಿ ಗಾಯಗೊಳಿಸಿದೆ.

ಈ ನಾಯಿ ಎರಡು ಮೂರುದಿನಗಳಿಂದಲೂ ಮೇಕೆಗಳು ಮತ್ತು ಮಕ್ಕಳನ್ನು ಕಚ್ಚಿ ಗಾಯಗೊಳಿಸುತ್ತಲೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net