'ಜೈಲರ್'​ ನಂತರ ಕಮಲ್​ ಹಾಸನ್​ ಜತೆ ಸಿನಿಮಾ ಮಾಡಲು ನಿರ್ದೇಶಕ ನೆಲ್ಸನ್​ ಸಜ್ಜು?

Untitled design - 2023-08-18T135152.347
Published on

ತಮಿಳುನಾಡು: ತಮಿಳು ಚಿತ್ರರಂಗದ ಯುವ ನಿರ್ದೇಶಕ ನೆಲ್ಸನ್ ದಿಲೀಪ್‌ ಕುಮಾರ್, ಇತ್ತೀಚೆಗಷ್ಟೇ ವಿಶ್ವದಾದ್ಯಂತ ಬಿಡುಗಡೆಗೊಂಡ 'ಜೈಲರ್'​ ಚಿತ್ರದ ಮುಖೇನ ಇದೀಗ ಭಾರತೀಯ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದಾರೆ. ಸಿನಿ ವರದಿಯ ಪ್ರಕಾರ, ನೆಲ್ಸನ್​ ತಮ್ಮ ಮುಂದಿನ ಚಿತ್ರವನ್ನು ಕಮಲ್​ ಹಾಸನ್​ ಅವರೊಂದಿಗೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಸೂಪರ್​ಸ್ಟಾರ್​, ತಲೈವಾ ನಟನೆಯ ಜೈಲರ್‌ ಚಿತ್ರ ಜಾಗತಿಕವಾಗಿ ಬ್ಲಾಕ್‌ಬಸ್ಟರ್ ಹಿಟ್​ ಆಗಿದೆ. ಕಲೆಕ್ಷನ್​ನಲ್ಲಿ ಈಗಾಗಲೇ 400 ಕೋಟಿ ರೂ.ಗಳ ಮೈಲಿಗಲ್ಲು ದಾಟಿದ್ದು, ವಾರಾಂತ್ಯದ ವೇಳೆಗೆ 500 ಕೋಟಿ ಕ್ಲಬ್‌ ಸೇರಲಿದೆ. ಸದ್ಯ ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದೀಗ ನಿರ್ದೇಶಕ ನೆಲ್ಸನ್ ತಮ್ಮ ಮುಂದಿನ ನಿರ್ದೇಶನದತ್ತ ಮುಖಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.

ಜೈಲರ್​ ಬಿಡುಗಡೆಯಾದ ವೇಳೆ ಕಮಲ್​ ಹಾಸನ್​ ತಮಗೆ ಕರೆ ಮಾಡಿ ಅಭಿನಂದಿಸಿದರು ಎಂದು ನೆಲ್ಸನ್ ಈ ಹಿಂದೆ ಹೇಳಿಕೊಂಡಿದ್ದರು. ಸದ್ಯ ಈ ವಿಷಯಗಳ ಬೆನ್ನಲ್ಲೇ ಯುವ ನಿರ್ದೇಶಕ ಜೈಲರ್​ ನಂತರ ಕಮಲ್​ ಹಾಸನ್​ ಅವರೊಂದಿಗೆ ದೊಡ್ಡ ಬಜೆಟ್​ನ ಚಿತ್ರ ಮಾಡಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಿದೆ. ಆದ್ರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net