

ಹೊಳೆಹೊನ್ನೂರು: ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಹಾಗೂ ಹೊಳಲೂರು ಸಮುದಾಯ ಆಸ್ಪತ್ರೆಯಲ್ಲಿ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.
ಹೊಳಲೂರಿನಲ್ಲಿ ಹೊರ ರೋಗಿಗಳ ವಿಭಾಗ ಸಂಪೂರ್ಣ ಬಂದ್ ಮಾಡಲಾಗಿತ್ತು. ಹೊಳೆಹೊನ್ನೂರಿನಲ್ಲಿ ಮಾಮೂಲಿಯಂತೆ ವೈದ್ಯರು ಹಾಗೂ ದಾದಿಯರು ಸೇವೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದರು.
ಉಳಿದಂತೆ ಗ್ರಾಮೀಣ ಭಾಗದ ಕೆಲವೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಾಗಿಲು ತೆರೆಯಲಿಲ್ಲ. ಕೆಲವೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆಗೆ ಹಾಜರಾಗಲಿಲ್ಲ. ಹಿರಿಯ ಶ್ರಶೂಕಿಯರು ಚಿಕಿತ್ಸೆ ನೀಡಿದರು. ಹೊಳೆಹೊನ್ನೂರು, ಕಲ್ಲಿಹಾಳ್, ಆನವೇರಿ ಭಾಗದಲ್ಲಿ ಖಾಸಗಿ ಕ್ಲಿನಿಕ್‌ಗಳಲ್ಲಿ ಜನ ಜಂಗುಳಿ ಸ್ವಲ್ಪ ಹೆಚ್ಚಾಗಿತ್ತು.