ಮಹಿಳೆ ತಲೆಗೆ ಶಸ್ತ್ರಚಿಕಿತ್ಸೆ ಮಾಡಿ 77 ಸೂಜಿಗಳ ತೆರವು!

stetho
Published on

ಭುವನೇಶ್ವರ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ತಲೆಬುರುಡೆಗೆ ಮಂತ್ರವಾದಿಯೊಬ್ಬ ಸೂಜಿಗಳನ್ನು ಚುಚ್ಚಿದ್ದು, ಇದೀಗ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಬುರ್ಲಾದ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ( ವಿಮ್ಸಾರ್ ) ವೈದ್ಯರು ರೇಷ್ಮಾ ಬೆಹೆರಾ(19) ತಲೆಬುರುಡೆಯಿಂದ ಒಟ್ಟು 77 ಸೂಜಿಗಳನ್ನು ಹೊರತೆಗೆದಿದ್ದಾರೆ.

ಬಾಳಿಂಗಿರ್ ಜಿಲ್ಲೆಯ ರೇಷ್ಮಾ ಅನಾರೋಗ್ಯದಿಂದ ಬಳಲುತ್ತಿದ್ದು, ಮಾಂತ್ರಿಕ ಸಂತೋಷ್ ತೇಜರಾಜ್ ರಾಣಾನನ್ನು ಸಂಪರ್ಕಿಸಿದ್ದಾಳೆ. ಈತ ಆಕೆಯ ತಲೆಗೆ ನಿರಂತರವಾಗಿ 70 ಸೂಜಿಗಳನ್ನು ಚುಚ್ಚಿದ್ದಾನೆ. ಇದರ ಪರಿಣಾಮವಾಗಿ ಆಕೆಗೆ ವಿಪರೀತ ತಲೆನೋವು ಉಂಟಾಗಿ ಕಡೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶುಕ್ರವಾರ ವೈದ್ಯರು ಸಿಟಿ ಸ್ಕ್ಯಾನ್​ ಪರೀಕ್ಷೆ ನಡೆಸಿದ ಬಳಿಕ ಒಂದೂವರೆ ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿ ತಲೆಬುರುಡೆಯಲ್ಲಿದ್ದ ಎಲ್ಲ ಸೂಜಿಗಳನ್ನು ಹೊರತೆಗೆಯಲಾಯಿತು. ಮೆದುಳಿಗೆ ಸೂಜಿಗಳು ಚುಚ್ಚಿಕೊಳ್ಳದ ಕಾರಣ ಆಕೆ ಬದುಕುಳಿದಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಪೊಲೀಸರು ಮಾಂತ್ರಿಕನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net