6 ಸೆಂ.ಮೀ ಉದ್ದದ ಬೀಗವನ್ನೇ ನುಂಗಿದ ಮಾನಸಿಕ ಅಸ್ವಸ್ಥ: ನಾಲ್ಕು ಗಂಟೆಗಳ ಆಪರೇಷನ್​ನಿಂದಾಗಿ ಬದುಕುಳಿದ

mental
Published on

ರಾಂಚಿ: ಗೃಹ ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥನೊಬ್ಬ ಆರು ಸೆಂ.ಮೀ. ಉದ್ದದ ಬೀಗವನ್ನು ನುಂಗಿರುವ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ. ಅದೃಷ್ಟವಶಾತ್​ ವೈದ್ಯರ ಪ್ರಯತ್ನದಿಂದಾಗಿ ಆತ ಬದುಕುಳಿದಿದ್ದಾನೆ.

ಜಿತೇಂದ್ರ ಕುಮಾರ್​ (22) ಕೆಲ ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು ಆತನ ಮನೆಯವರು ಆತನಿಂದ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣದಿಂದಾಗಿ ಗೃಹ ಬಂಧನದಲ್ಲಿರಿಸಿಕೊಂಡಿದ್ದರು. ಇತ್ತೀಚೆಗೆ ಒಂದು ದಿನ ಮಧ್ಯ ರಾತ್ರಿಯ ಸಮಯದಲ್ಲಿ ಕೈಗೆ ಸಿಕ್ಕ ಬೀಗವನ್ನು ಜಿತೇಂದ್ರ ನುಂಗಿದ್ದಾನೆ. ಆರು ಸೆಂ.ಮೀ. ಉದ್ದವಿದ್ದ ಬೀಗ ಗಂಟಲಿನಲ್ಲಿ ಸಿಕ್ಕಿಕೊಂಡಿದ್ದು ಆತನಿಗೆ ಉಸಿರಾಟದ ತೊಂದರೆಯುಂಟಾಗಿದೆ.

ತಕ್ಷಣವೇ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಂಡೋಸ್ಕೊಪಿ ವಿಧಾನದಿಂದ ಬೀಗವನ್ನು ಹೊರಗೆ ತೆಗೆಯುವ ಪ್ರಯತ್ನ ಮಾಡಲಾಗಿದೆ. ಆದರೆ ಅದು ಸಾಧ್ಯವಾಗದಿದ್ದಾಗ ಸತತ ನಾಲ್ಕು ಗಂಟೆಗಳ ಕಾಲ ಆಪರೇಷನ್​ ಮಾಡಿ ಬೀಗವನ್ನು ಹೊರತೆಗೆಯಲಾಗಿದೆ.

ಸದ್ಯ ಜಿತೇಂದ್ರ ಕುಮಾರ್ ಆರೋಗ್ಯ ಚೇತರಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net