ಕರೆಂಟ್​ ಇಲ್ಲದೆ ಮೊಬೈಲ್​​ ಟಾರ್ಚ್​​ನಲ್ಲೇ ರೋಗಿಗೆ ಚಿಕಿತ್ಸೆ ನೀಡಿದ ವೈದ್ಯ; ಮುಂದೇನಾಯ್ತು ಗೊತ್ತಾ?

madyapradesh hospital
Published on

ಮಧ್ಯ ಪ್ರದೇಶ: ಜಿಲ್ಪಾ ಆಸ್ಪತ್ರೆಯಲ್ಲಿ ಕತ್ತಲಿನಲ್ಲೇ ರೋಗಿಗೆ ಚಿಕಿತ್ಸೆ ನೀಡಲಾಗಿದೆ. ಮಧ್ಯ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದ ಘಟನೆ.

ಮೊಬೈಲ್​ ಫ್ಲಾಷ್​ ಲೈಟ್​ನಲ್ಲಿ ರೋಗಿಯನ್ನು ಉಪಚರಿಸಲಾಗಿದೆ. ಸದ್ಯ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ದೃಶ್ಯವನ್ನು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.ಸಿಧಿ ಆಸ್ಪತ್ರೆಯಲ್ಲಿ ವಿದ್ಯುತ್​ ವ್ಯತ್ಯಯವಾಗಿ ಕೊನೆಗೆ ಮೊಬೈಲ್​ ಟಾರ್ಚ್​ ಬಳಸಿ ರೋಗಿಯನ್ನು ಶುಶ್ರೂಷೆ ಮಾಡಲಾಗಿದೆ.

ಸಿಧಿ ಜಿಲ್ಲೆಯ ನಿವಾಸಿಗಳು 7 ಗಂಟೆಗಳ ಕಾಲ ವಿದ್ಯುತ್​ ಕಡಿತವನ್ನು ಅನುಭವಿಸಿದ್ದಾರೆ. ಈ ಸಮಯದಲ್ಲಿ ಜಿಲ್ಪಾಸ್ಪತ್ರೆಗೂ ವಿದ್ಯುತ್​ ಸಮಸ್ಯೆ ಎದುರಾಗಿದೆ. ಪರಿಣಾಮ ಅಪಘಾತದಲ್ಲಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ರೋಗಿಯನ್ನು ಮೊಬೈಲ್​ ಟಾರ್ಚ್​ ಬಳಸಿ ಚಿಕಿತ್ಸೆ ನೀಡಲಾಗಿದೆ. ಈ ವಿಡಿಯೋ ವೈರಲ್​​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net