15 ಸಾವಿರ ರೂ. ಪಡೆದು ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಿ ಭ್ರೂಣವನ್ನು ಕಸದ ತೊಟ್ಟಿಗೆ ಎಸೆದ ವೈದ್ಯ

Rape 18
Published on

ಅಹಮದಾಬಾದ್: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಗರ್ಭಪಾತಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ 19 ವರ್ಷದ ಯುವಕ ಮತ್ತು 59 ವರ್ಷದ ವೈದ್ಯರನ್ನು ಶನಿವಾರ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವೈದ್ಯ ಡಾ. ಚೆತನ್ ಷಾ ಐದು ತಿಂಗಳ ಗರ್ಭಿಣಿಯಾಗಿದ್ದ 15 ವರ್ಷದ ಬಾಲಕಿಗೆ ಗರ್ಭಪಾತ ಮಾಡಿ ನಂತರ ಭ್ರೂಣವನ್ನು ನಗರದ ಕಸದ ಸ್ಥಳದಲ್ಲಿ ಎಸೆದಿದ್ದಾನೆ.

ಮಣಿನಗರ ಪ್ರದೇಶದ ನಿವಾಸಿ ಶಾ ಕಳೆದ 29 ವರ್ಷಗಳಿಂದ ನಗರದ ವಾಟ್ವಾ ಜಿಐಡಿಸಿ ಪ್ರದೇಶದಲ್ಲಿ ‘ಕೆವಲ್ ಮೆಡಿಕೇರ್ ಸೆಂಟರ್’ ಆಸ್ಪತ್ರೆಯನ್ನು ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 6 ರಂದು, ಆತ ಅಪ್ರಾಪ್ತೆಗೆ ಗರ್ಭಪಾತ ಮಾಡಿ ಅದನ್ನು ರಹಸ್ಯವಾಗಿ ಕಸದ ತೊಟ್ಟಿಯಲ್ಲಿ ಎಸೆದಿದ್ದಾನೆ.

ಸುದ್ದಿ ಸಂಸ್ಥೆಯೊಂದರ ವರದಿ ಪ್ರಕಾರ, ಪೊಲೀಸರು ಈಗಾಗಲೇ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ, ತನಿಖಾ ಅಧಿಕಾರಿಗಳು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಶನಿವಾರ ವೈದ್ಯನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 318 (ಮಗುವಿನ ಮೃತ ದೇಹವನ್ನು ರಹಸ್ಯವಾಗಿ ಹೂತುಹಾಕುವುದು ಅಥವಾ ಜನನವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ವಿಲೇವಾರಿ ಮಾಡುವುದು) ಅಡಿ ಅವನ ವಿರುದ್ಧ ಅಪರಾಧ ದಾಖಲಿಸಲಾಗಿದೆ.

ಆರೋಪಿ ವೈದ್ಯನನ್ನು ಬಂಧಿಸಿದ ನಂತರ ಪೊಲೀಸರು ಅಪ್ರಾಪ್ತ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ, ಸುನಿಲ್ ಸರ್ಗರಾ (19) ಎಂಬಾತನನ್ನು ಆಕೆ ಗರ್ಭಧರಿಸಲು ಕಾರಣವಾದ ಆರೋಪದ ಮೇಲೆ ಬಂಧಿಸಲಾಗಿದೆ.

ಆತನ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ಇತರ ಸಂಬಂಧಿತ ವಿಭಾಗಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೈದ್ಯ ಈ ಗರ್ಭಪಾತ ಮಾಡಲು 15 ಸಾವಿರ ರೂ. ವಸೂಲಿ ಮಾಡಿದ್ದ ಎಂದು ಪೊಲಿಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net