

headphones ; ಇತ್ತೀಚಿನ ದಿನಗಳಲ್ಲಿ ಜನರು ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳನ್ನು ಬಳಸುವುದು ಸಾಮಾನ್ಯವಾಗ್ಬಿಟ್ಟಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ಬಳಿಯೂ ಫೋನ್ ಇದೆ ಆದ್ದರಿಂದ, ಪ್ರಯಾಣ ಮಾಡುವಾಗ ಹಾಡುಗಳನ್ನು ಕೇಳಲು ಅಥವಾ ಚಲನಚಿತ್ರಗಳು ಮತ್ತು ವಿಡಿಯೋಗಳನ್ನು ವೀಕ್ಷಿಸಲು ಹೆಚ್ಚಾಗಿ ಈ ಹೆಡ್‌ಫೋನ್‌ಗಳನ್ನು ಬಳಸಲಾಗುತ್ತದೆ.
ವೈದ್ಯಕೀಯ ತಜ್ಞರ ಪ್ರಕಾರ, ಒಂದೇ ಕಿವಿಯಲ್ಲಿ ನಿರಂತರವಾಗಿ ಸಂಗೀತ ಕೇಳುವುದು ಹಾನಿಕಾರಕವಲ್ಲ. ಆದರೆ ಧ್ವನಿ ಮಟ್ಟ ಹೆಚ್ಚಿದ್ದರೆ ಮತ್ತು ದೀರ್ಘಕಾಲದವರೆಗೆ ಈ ರೀತಿ ಕೇಳುವುದರಿಂದ, ಅದು ಆ ಕಿವಿಯನ್ನು ಆಯಾಸಗೊಳಿಸಬಹುದು. ಇದು ಆ ಕಿವಿಯಲ್ಲಿ ಧ್ವನಿ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಶ್ರವಣ ನಷ್ಟದ ಅಪಾಯವನ್ನುಂಟುಮಾಡುತ್ತದೆ. ಇನ್ನೊಂದು ಕಿವಿಯಲ್ಲಿ ಶಬ್ದವು ಸ್ವೀಕರಿಸದ ಕಾರಣ, ಮೆದುಳು ಸಮತೋಲಿತ ಧ್ವನಿ ಸಂಕೇತಗಳನ್ನು ಸ್ವೀಕರಿಸುವುದಿಲ್ಲ. ಅಂದರೆ, ಶಬ್ದ ಎಲ್ಲಿಂದ ಬರುತ್ತಿದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಕಷ್ಟಕರವಾಗುತ್ತದೆ.
ಕೆಲವೊಮ್ಮೆ ಜನರು ತಮ್ಮ ಇಯರ್‌ಫೋನ್ ಹಾನಿಗೊಳಗಾದರೆ ಅಥವಾ ಕಳೆದುಹೋದರೆ, ಒಂದು ಕಿವಿಯಲ್ಲಿ ಇಯರ್‌ಫೋನ್ ಬಳಸಿ ಹಾಡುಗಳನ್ನು ಕೇಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಹಾಗಿದ್ರೆ ಈ ಅಭ್ಯಾಸ ಸೂಕ್ತವೇ? ಒಂದು ಕಿವಿಯಲ್ಲಿ ಕೇಳುವುದರಿಂದ ಕಿವಿಗೆ ಏನಾದರೂ ಸಮಸ್ಯೆಯಾಗುತ್ತಾ ಎಂಬುದನ್ನು ತಿಳಿಯೋಣ.
ಮಾರುಕಟ್ಟೆಯಲ್ಲಿ ವೈರ್, ವೈರ್‌ಲೆಸ್ ಇಯರ್‌ಫೋನ್‌ಗಳು ಸೇರಿದಂತೆ ಹಲವಾರು ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳಿವೆ. ಕೆಲವರು ಬ್ರಾಂಡೆಡ್‌ಗಳನ್ನು ಬಳಸುತ್ತಾರೆ ಆದರೆ ಇನ್ನೂ ಕೆಲವರು ಸ್ಥಳೀಯ ಹೆಡ್‌ಫೋನ್‌ಗಳು ಅಥವಾ ಇಯರ್‌ಫೋನ್‌ಗಳನ್ನು ಉಪಯೋಗಿಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
ಒಂದೇ ಕಿವಿಯಿಂದ ನಿರಂತರವಾಗಿ ಕೇಳುವುದರಿಂದ ಆ ಕಿವಿ ಆಯಾಸಗೊಳ್ಳಬಹುದು. ಇದು ಕಿವಿಗಳಲ್ಲಿ ರಿಂಗಿಂಗ್, ಶಬ್ಧ ಬರುವುದು ಅಥವಾ ಅಸ್ವಸ್ಥತೆಯನ್ನು ಉಂಟುಮಾಡಬಹುದು. ದೀರ್ಘಕಾಲದವರೆಗೆ ಹೀಗೆ ಮಾಡುವುದರಿಂದ ಶ್ರವಣದ ಅಸಮತೋಲನ ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತಪ್ಪಿಸಲು ವಾಲ್ಯೂಮ್ ಮಟ್ಟವನ್ನು ಮಧ್ಯಮವಾಗಿ ಇರಿಸಿ. ನೀವು ದೀರ್ಘಕಾಲ ಸಂಗೀತ ಕೇಳುತ್ತಿದ್ದರೆ, ಎರಡೂ ಕಿವಿಗಳಲ್ಲಿ ಇಯರ್‌ಫೋನ್‌ಗಳನ್ನು ಬಳಸಿ ಜೊತೆಗೆ ನಿಮ್ಮ ವಾಲ್ಯೂಮ್ 60% ಮೀರಬಾರದು. ಪ್ರತಿ ಗಂಟೆಗೆ ಕನಿಷ್ಠ 5-10 ನಿಮಿಷಗಳ ವಿರಾಮ ತೆಗೆದುಕೊಳ್ಳಿ. (ಏಜೆನ್ಸೀಸ್)