ಸೆನ್ಸಾರ್ ಪರಿಣಾಮ; ನಿರ್ದೇಶಕನಾಗಿರುವುದು ಸುಲಭ, ನಿರ್ಮಾಪಕರಾಗುವುದು ಕಷ್ಟ; ಸಿನಿಮಾ ನಿರ್ಮಾಣಕ್ಕೆ ಗುಡ್​ಬೈ ಹೇಳಿದ ವೆಟ್ರಿಮಾರನ್​| Vetrimaran

Vetrimaran
Published on

Vetrimaran: ತಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ವೆಟ್ರಿಮಾನ್ ಸಿನಿಮಾ ನಿರ್ದೇಶಕನಾಗಿರುವುದು ಸುಲಭ, ಆದರೆ ನಿರ್ಮಾಪಕರಾಗಿ ಯಶಸ್ಸು ಪಡೆಯುವುದು ಬಹಳ ಕಷ್ಟ ಎಂದು ಹೇಳಿದ್ದು, ಹೀಗಾಗಿ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆ ಗ್ರಾಸ್​ರೂಟ್ ಕಂಪನಿಯನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ.

ಗ್ರಾಸ್ ರೂಟ್ ಕಂಪನಿ ಬ್ಯಾನರ್ ಅಡಿಯಲ್ಲಿ ಅವರು ನಿರ್ಮಿಸಿದ 'ಬ್ಯಾಡ್ ಗರ್ಲ್' ಚಿತ್ರವು ಚಿತ್ರದ ನಿರ್ಮಾಣ ಪೂರ್ಣಗೊಂಡ ನಂತರವೂ ಸೆನ್ಸಾರ್ ಸಮಸ್ಯೆಗಳನ್ನು ಎದುರಿಸಿತು. ಇದರಿಂದಾಗಿ ಅವರು ಕಾನೂನು ಹೋರಾಟ ನಡೆಸಿ ಸೆನ್ಸಾರ್ ಪ್ರಮಾಣಪತ್ರವನ್ನು ಪಡೆಯಬೇಕಾಯಿತು. ಈ ಕುರಿತು ಇತ್ತೀಚಿತೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಿಡುಗಡೆ ಬಗ್ಗೆ ಮಾತನಾಡಿತ್ತು.

ಈ ವೇಳೆ ಮಾತನಾಡಿರುವ ವೆಟ್ರಿಮಾರನ್, ನಾನು ನಿರ್ಮಿಸಿದ 'ಮಾನುಷಿ' ಮತ್ತು 'ಬ್ಯಾಡ್ ಗರ್ಲ್' ಚಿತ್ರಗಳು ಸೆನ್ಸಾರ್ ಸಮಸ್ಯೆಗಳಿಗೆ ಸಿಲುಕಿದವು. ಅವುಗಳಿಂದ ಹೊರಬರಲು ನಾನು ಕಾನೂನು ಹೋರಾಟ ನಡೆಸಬೇಕಾಯಿತು. ಈ ಪರಿಸ್ಥಿತಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವುದು ತುಂಬಾ ಕಷ್ಟ. ಅದಕ್ಕಾಗಿಯೇ ನಾನು ನನ್ನ ನಿರ್ಮಾಣ ಕಂಪನಿ ಅಡಿಯಲ್ಲಿ ಇನ್ಮುಂದೆ ಯಾವುದೇ ಚಲನಚಿತ್ರಗಳನ್ನು ನಿರ್ಮಿಸುವುದಿಲ್ಲ. 'ಬ್ಯಾಡ್ ಗರ್ಲ್' ನನ್ನ ಕೊನೆಯ ಚಿತ್ರ. ನಾವು 'ಗ್ರಾಸ್ ರೂಟ್ ಫಿಲ್ಮ್ ಕಂಪನಿ'ಯನ್ನು ಮುಚ್ಚುತ್ತಿದ್ದೇವೆ" ಎಂದು ಸುದ್ದಿಗೋಷ್ಠಿಯಲ್ಲೇ ಘೋಷಿಸಿದರು.

ಬ್ಯಾಡ್ ಗರ್ಲ್ ಚಿತ್ರವನ್ನು ವರ್ಷ ಭರತ್ ನಿರ್ದೇಶಿಸಿದ್ದು, ವೆಟ್ರಿಮಾರನ್ ಕಂಪನಿ ಗ್ರಾಸ್​ರೂಟ್ ನಿರ್ಮಿಸಿದೆ. ಅಂಜಲಿ ಶಿವರಾಮನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಶಾಂತಿಪ್ರಿಯಾ, ಶರಣ್ಯ ರವಿಚಂದ್ರನ್ ಮತ್ತು ಇತರರು ಇತರ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ತಿಂಗಳು 5ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರಕ್ಕೆ ಸೆನ್ಸಾರ್ ಬೋರ್ಡ್​ ಯುಎ ಪ್ರಮಾಣ ಪತ್ರ ನೀಡಿದೆ. ಹದಿಹರೆಯದ ಹುಡುಗಿ ಬೆಳೆದಂತೆ ತನ್ನ ಆಸೆಗಳನ್ನು, ಭರವಸೆಗಳನ್ನು ಮತ್ತು ಕನಸುಗಳನ್ನು ಹೇಗೆ ಪೂರೈಸುತ್ತಾಳೆ ಮತ್ತು ಸಮಾಜವು ಅವಳನ್ನು ಹೇಗೆ ನೋಡುತ್ತದೆ ಎಂಬುದನ್ನು ಈ ಚಿತ್ರವು ಪರಿಶೋಧಿಸುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net