ಬಳ್ಳಾರಿ ಸೆರೆಮನೆಯಲ್ಲಿ ದರ್ಶನ್​ಗೆ​​ ವೆಸ್ಟರ್ನ್​ ಟಾಯ್ಲೆಟ್ ಸೌಲಭ್ಯಕ್ಕೆ ಬೇಡಿಕೆ; ದಚ್ಚುಗೆ ಕಾಡ್ತಿದೆ ಬೆನ್ನು ಮೂಳೆ ಸಮಸ್ಯೆ

Darshan
Published on

ಬೆಂಗಳೂರು:  ಸ್ನೇಹಿತೆ ಪವಿತ್ರಾ ಗೌಡ ಅವರಿಗೆ  ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪದಲ್ಲಿ  ದರ್ಶನ್​  ಹಾಗೂ ಅವರ  ಗ್ಯಾಂಗ್​ ಸೆರೆವಾಸದಲ್ಲಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ಇದೀಗ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಈ ಬೆನ್ನಲ್ಲೆ ಮತ್ತೆ ದರ್ಶನ್​ ಕುರಿತಾಗಿ ಕೆಲವು ಸುದ್ದಿಗಳು ಮುನ್ನೆಲೆಗೆ ಬಂದಿವೆ.

ದರ್ಶನ್​ ಈಗಾಗಲೇ ಜೈಲಾಧಿಕಾರಿ ಬಳಿ ಕೆಲವೊಂದು ಮನವಿ ಮಾಡಿಕೊಂಡಿದ್ದಾರಂತೆ. ಈ ಕುರಿತಾಗಿ ಕೆಲವೊಂದು ಸಂಗತಿಯನ್ನು ಡಿಐಜಿ ಟಿಪಿ ಶೇಷಾ ಮಾಧ್ಯಮದವರೊಂದಿಗೆ ಹೇಳಿದ್ದಾರೆ.

DIG TP ಶೇಷಾ ಮಾತನಾಡಿ, ದರ್ಶನ್​​ಗೆ ಬೆನ್ನು ಮೂಳೆ ಸಮಸ್ಯೆ ಇದೆ. ವೆಸ್ಟರ್ನ್​​ ಟಾಯ್ಲೆಟ್​​ ಸೌಲಭ್ಯ ಕೇಳಿದ್ದಾರೆ. ಮೆಡಿಕಲ್ ರಿಪೋಟ್ ನೋಡಿ ಕ್ರಮ ವಹಿಸುತ್ತೀವಿ. ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಇದ್ದಾರೆ. 15 ಸೆಲ್‌ಗಳ ಪೈಕಿ ಬೇರೆ ಬೇರೆ ಸ್ಥಳದಲ್ಲಿ ನಾಲ್ಕು ಜನ ಖೈದಿಗಳಿದ್ದಾರೆ. ದರ್ಶನ ಅಕ್ಕಪಕ್ಕ ಯಾರು ಇಲ್ಲ. ದರ್ಶನ ಶೇಲ್ ಮುಂದೆ ಮೂರು ಸಿಸಿ ಕ್ಯಾಮಾರಾ ಇದೆ. ದರ್ಶನ ಮೇಲೆ ನಿಗಾ ಜಾಸ್ತಿದೆ ಎಂದು ಹೇಳಿದ್ದಾರೆ.

ದರ್ಶನ್​​ಗೆ ಬೆನ್ನು ನೋವು ಇರುವ ಕಾರಣ, ಮೋಷನ್ ಸಮಸ್ಯೆಯಿಂದ ದರ್ಶನ ಊಟ ಬೇಡ ಅಂತಿದ್ದಾರೆ. ಜೈಲು ಊಟ ಸರಿಯಾಗಿ ನೀಡಲಾಗ್ತಿದೆ. ಸದ್ಯ ಜೈಲಾಧಿಕಾರಿಗಳ ಬಳಿ ಸರ್ಜಿಕಲ್ ಚೇರ್‌ಗೆ ದರ್ಶನ್​​ ಮನವಿ ಮಾಡಿದ್ದಾರೆ. ಮೆಡಿಕಲ್ ರಿಪೋರ್ಟ್ ಬಳಿಕ ಏನು ನಿರ್ಣಯ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೀವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net