

ನವದೆಹಲಿ:ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ಸಮಿತ್ ಅವರನ್ನು ಏಕದಿನ ಮತ್ತು ನಾಲ್ಕು ದಿನದ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಅಂಡರ್ 19 ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಗಸ್ಟ್ 31ರಂದು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಬಹು-ಫಾರ್ಮ್ಯಾಟ್ ಸರಣಿಯ ವೇಳಾ ಪಟ್ಟಿಯೊಂದಿಗೆ ಅಂಡರ್ 19 ತಂಡವನ್ನು ಪ್ರಕಟಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂಡರ್ 19 ಸರಣಿಯು ಸೆಪ್ಟೆಂಬರ್ 21ರಿಂದ ಪ್ರಾರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಮತ್ತು ಎರಡು, ನಾಲ್ಕು ದಿನಗಳ ಪಂದ್ಯಗಳು ನಡೆಯಲಿವೆ.
ದ್ರಾವಿಡ್ ಮಗ ಸಮಿತ್ ಇತ್ತೀಚೆಗೆ ಮೊದಲ ಹಿರಿಯ ಪುರುಷರ ಟಿ20 ಪಂದ್ಯಾವಳಿಯಲ್ಲಿ ಮಹಾರಾಜಿ ಟಿ20 ಟ್ರೋಪಿಯಲ್ಲಿ ಆಡಿದ್ದರು. ಮೈಸೂರು ವಾರಿಯರ್ಸ್ ತಂಡದ ಭಾಗವಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಈತ 7 ಇನ್ನಿಂಗ್ಸ್ನಲ್ಲಿ 114 ಸ್ಟ್ತೈಕ್ ರೇಟ್ನಲ್ಲಿ 82 ರನ್ ಗಳಿಸಿದ್ದಾರೆ.
ಭಾರತ ಅಂಡರ್ 19 ಏಕದಿನ ತಂಡ: ರುದ್ರ ಪಟೇಲ್ (ಗುಜರಾತ್), ಸಾಹಿಲ್ ಪರಾಖ್ (ಮಹಾರಾಷ್ಟ್ರ, ಕಾರ್ತಿಕೇಯ ಕೆಪಿ (ಕರ್ನಾಟಕ), ಮೊಹಮ್ಮದ್ ಅಮಾನ್- ನಾಯಕ (ಉತ್ತರ ಪ್ರದೇಶ), ಕಿರಣ್ ಚೋರ್ಮಲೆ (ಮಹಾರಾಷ್ಟ್ರ) ,ಅಭಿಗ್ಯಾನ್ ಕುಂದು- ವಿಕೆಟ್ ಕೀಪರ್ (ಮುಂಬೈ), ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ), ಸಮಿತ್ ದ್ರಾವಿಡ್ (ಕರ್ನಾಟಕ), ಯುಧಾಜಿತ್ ಗುಹಾ (ಪಶ್ಚಿಮ ಬಂಗಾಳ), ಸಮರ್ಥ ಎನ್ (ಕರ್ನಾಟಕ), ನಿಖಿಲ್ ಕುಮಾರ್ (ಚಂಡೀಗಢ), ಚೇತನ್ ಶರ್ಮಾ (ರಾಜಸ್ಥಾನ್), ಹಾರ್ದಿಕ್ ರಾಜ್ (ಕರ್ನಾಟಕ) ,ರೋಹಿತ್ ರಾಜಾವತ್ (ಮಧ್ಯ ಪ್ರದೇಶ), ಮೊಹಮ್ಮದ್ ಇನಾನ್ (ಕೇರಳ)
ಭಾರತ ಅಂಡರ್ 19 ಟೆಸ್ಟ್ (4 ದಿನದಾಟ) ತಂಡ: ವೈಭವ್ ಸೂರ್ಯವಂಶಿ (ಬಿಹಾರ), ನಿತ್ಯ ಪಾಂಡ್ಯ (ಬಿಹಾರ), ವಿಹಾನ್ ಮಲ್ಹೋತ್ರಾ (ಪಂಜಾಬ್), ಸೋಹಮ್ ಪಟವರ್ಧನ್- ನಾಯಕ (ಮಧ್ಯ ಪ್ರದೇಶ), ಕಾರ್ತಿಕೇಯ ಕೆಪಿ (ಕರ್ನಾಟಕ), ಸಮಿತ್ ದ್ರಾವಿಡ್ (ಕರ್ನಾಟಕ), ಅಭಿಗ್ಯಾನ್ ಕುಂದು- ವಿಕೆಟ್ ಕೋಪರ್ (ಮುಂಬೈ), ಹರ್ವಂಶ್ ಸಿಂಗ್ ಪಂಗಾಲಿಯಾ- ವಿಕೆಟ್ ಕೀಪರ್ (ಸೌರಾಷ್ಟ್ರ), ಚೇತನ್ ಶರ್ಮಾ (ರಾಜಸ್ಥಾನ್),ಸಮರ್ಥ್ ಎನ್ (ಕರ್ನಾಟಕ),ಆದಿತ್ಯ ರಾವತ್ (ಉತ್ತರಾಖಂಡ್), ನಿಖಿಲ್ ಕುಮಾರ್ (ಚಂಡೀಗಢ್), ಅನ್ಮೋಲ್ಜೀತ್ ಸಿಂಗ್ (ಪಂಜಾಬ್), ಆದಿತ್ಯ ಸಿಂಗ್ (ಉತ್ತರ ಪ್ರದೇಶ), ಮೊಹಮ್ಮದ್ ಇನಾನ್ (ಕೇರಳ).