ಗೌತಮ್ ಅದಾನಿ ಭಾವಿ ಸೊಸೆ ಯಾರು ಗೊತ್ತಾ? ಈಕೆ ಸೂರತ್‌ನ ದೊಡ್ಡ ಉದ್ಯಮಿ ಮಗಳು... Jeet Adani Wedding

Jeet Adani Wedding
Published on

ನವದೆಹಲಿ:  ( Jeet Adani Wedding ) ವಿಶ್ವವಿಖ್ಯಾತ ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರ ಮನೆಯಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ಅವರು ದಿವಾ ಜೈಮೀನ್ ಶಾ ಅವರನ್ನು ಫೆಬ್ರವರಿ 7 ರಂದು ವಿವಾಹವಾಗಲಿದ್ದಾರೆ.

ಜೀತ್ ಅದಾನಿ ಅವರು ದಿವಾ ಜೈಮೀನ್ ಶಾ ಜೋಡಿ ಕಳೆದ ವರ್ಷ ಅಹಮದಾಬಾದ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ವಿವಾಹ ಪೂರ್ವ ಕಾರ್ಯಕ್ರಮವು ಡಿಸೆಂಬರ್ 10-11 ರಂದು ಉದಯಪುರದಲ್ಲಿ ನಡೆಯಿತು. ಈಗ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಆದರೆ ಗೌತಮ್ ಅದಾನಿ ಭಾವಿ ಸೊಸೆ ಯಾರು ಗೊತ್ತಾ?  ನಾವು ಇಂದು ಈ ಕುರಿತಾಗಿ ನಿಮಗೆ ತಿಳಿಸಿ ಕೊಡಲಿದ್ದೇವೆ...

ದಿವಾ ಸೂರತ್‌ನ ದೊಡ್ಡ ಉದ್ಯಮಿ ಜೈಮಿನ್ ಶಾ ಅವರ ಮಗಳು. ಇವರು ಸಿ ದಿನೇಶ್ ಮತ್ತು ಕಂಪನಿ ಪ್ರೈ.ಲಿ. ಅವರ ವ್ಯಾಪಾರ ಸೂರತ್‌ನಿಂದ ಮುಂಬೈವರೆಗೆ ವ್ಯಾಪಿಸಿದೆ. ಕಂಪನಿಯ ವಿತರಣಾ ಕಚೇರಿಗಳು ನೆದರ್‌ಲ್ಯಾಂಡ್ಸ್ ಮತ್ತು ಹಾಂಗ್ ಕಾಂಗ್‌ನಲ್ಲಿವೆ. ಕಂಪನಿಯು 1976 ರಲ್ಲಿ ಚಿನುಭಾಯಿ ದೋಶಿ ಮತ್ತು ದಿನೇಶ್ಭಾಯಿ ಶಾರಿಂದ ಸ್ಥಾಪಿಸಲ್ಪಟ್ಟಿತು ಮತ್ತು ಈಗ ಜೈಮಿನ್ ಶಾ ನಿರ್ದೇಶಕರಾಗಿದ್ದಾರೆ. ದಿವಾ ಜೈಮೀನ್ ಶಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ.  ದಿವಾ ವ್ಯಾಪಾರ ಮತ್ತು ಹಣಕಾಸಿನ ಬಗ್ಗೆ ಉತ್ತಮ ಹಿಡಿತವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ತಂದೆಗೆ ವ್ಯಾಪಾರದಲ್ಲಿಯೂ ಸಹಾಯ ಮಾಡುತ್ತಾಳೆ ಎನ್ನಲಾಗಿದೆ.

ಅದಾನಿ ಅವರ ಮಗ ಜೀತ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿದರು. 2019 ರಲ್ಲಿ ಅದಾನಿ ಗ್ರೂಪ್‌ಗೆ ಸೇರುವ ಮೊದಲು, ಅವರು ಹಣಕಾಸು, ಬಂಡವಾಳ ಮಾರುಕಟ್ಟೆಗಳು ಕೆಲಸ ಮಾಡಿದರು. ಅದಾನಿ ಅದಾನಿ ಪೋರ್ಟ್ಸ್, ಅದಾನಿ ಡಿಜಿಟಲ್ ಲ್ಯಾಬ್‌ಗಳಂತಹ ವಿಭಾಗಗಳ ಕೆಲಸವನ್ನು ಜೀತ್ ನೋಡಿಕೊಳ್ಳುತ್ತಾರೆ.

ಜೀತ್ ಮತ್ತು ದಿವಾ ಅವರ ವಿವಾಹವು ತುಂಬಾ ಅದ್ದೂರಿಯಾಗಿ ನಡೆಯಲಿದ್ದು, ಭಾರತ ಮತ್ತು ವಿದೇಶಗಳ ಅನೇಕ ಸೆಲೆಬ್ರಿಟಿಗಳು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net