

snakes; ಪ್ರಪಂಚದಾದ್ಯಂತ ಸುಮಾರು 3900 ಜಾತಿಯ ಹಾವುಗಳು ಕಂಡುಬರುತ್ತವೆ. ಜಗತ್ತಿನಲ್ಲಿ ಸುಮಾರು 200 ದೇಶಗಳಿವೆ ಅದರಲ್ಲಿ ಕೆಲವು ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಅನೇಕ ರೀತಿಯ ಹಾವುಗಳು ಕಂಡುಬರುತ್ತವೆ. ಮಾನವರು ಭೂಮಿಯ ಮೇಲೆ ಅಸ್ತಿತ್ವದಲ್ಲಿರುವುದಕ್ಕಿಂತ ಮೊದಲಿನಿಂದಲೂ ಹಾವುಗಳು ಭೂಮಿಯ ಮೇಲೆ ವಾಸಿಸುತ್ತಿವೆ ಎಂದು ಹೇಳಲಾಗುತ್ತದೆ.
ಕೆಲವು ಜಾತಿಯ ಹಾವುಗಳು ತುಂಬಾ ವಿಷಕಾರಿಯಾಗಿವೆ. ಅದರಲ್ಲಿ ಅನೇಕ ದೇಶಗಳು ಹಾವುಗಳ ಬಗ್ಗೆ ದಂತಕಥೆಗಳನ್ನು ಹೊಂದಿವೆ. ಯಾವ ದೇಶಗಳಲ್ಲಿ ಹೆಚ್ಚು ಹಾವುಗಳಿವೆ ಮತ್ತು ಯಾವ ದೇಶಗಳಲ್ಲಿ ಹಾವುಗಳೇ ಇಲ್ಲ ಎಂಬುದನ್ನು ತಿಳಿಯೋಣ.
ವಿಶ್ವದಲ್ಲೇ ಅತಿ ಹೆಚ್ಚು ಹಾವು ಪ್ರಭೇದಗಳನ್ನು ಬ್ರೆಜಿಲ್ ಹೊಂದಿದೆ ಎಂದು ಹೇಳಲಾಗಿದೆ. 400ಕ್ಕೂ ಹೆಚ್ಚು ಜಾತಿಗಳು ಇಲ್ಲಿ ವಾಸಿಸುತ್ತವೆಯಂತೆ. ಈ ದೇಶವು ಅಮೆಜಾನ್ ಮಳೆಕಾಡಿನ ಭಾಗವಾಗಿದ್ದು, ಇದು ಜೀವವೈವಿಧ್ಯದ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿನ ಬೆಚ್ಚಗಿನ ಹವಾಮಾನ, ದಟ್ಟವಾದ ಕಾಡುಗಳು ಮತ್ತು ನೀರಿನ ಸಂಪನ್ಮೂಲಗಳು ಹಾವುಗಳ ವಾಸ ಸ್ತಾನವನ್ನು ಹೆಚ್ಚಿಸಿವೆ ಎಂದು ಹೇಳಲಾಗಿದೆ. ವಿಶ್ವದ ಅತ್ಯಂತ ವಿಷಕಾರಿ ಹಾವು ಬುಷ್‌ಮಾಸ್ಟರ್ ಕೂಡ ಇಲ್ಲಿ ಕಂಡುಬರುತ್ತದೆ.
ಸ್ನೇಕ್ ಐಲ್ಯಾಂಡ್ ದ್ವೀಪವು ಬ್ರೆಜಿಲ್ ಕರಾವಳಿಯಿಂದ ದೂರದಲ್ಲಿದೆ. ಇಲ್ಲಿಗೆ ಮನುಷ್ಯರು ಭೇಟಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಸಣ್ಣ ದ್ವೀಪವು ಸಾವಿರಾರು ಅಪಾಯಕಾರಿ ವಿಷಪೂರಿತ ಹಾವುಗಳಿಗೆ ನೆಲೆಯಾಗಿದೆ. ವಿಶೇಷವಾಗಿ 'ಗೋಲ್ಡನ್ ಲ್ಯಾನ್ಸ್‌ಹೆಡ್ ವೈಪರ್' ಎಂಬ ಜಾತಿಯ ಹಾವು ಇಲ್ಲಿ ಮಾತ್ರ ಕಂಡುಬರುತ್ತದೆ. ಇಲ್ಲಿ ಪ್ರತಿ ಚದರ ಮೀಟರ್‌ಗೆ ಒಂದು ಹಾವು ಇರುತ್ತದೆ ಎಂದು ಹೇಳಲಾಗುತ್ತದೆ.
ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಹಾವುಗಳು ಕಂಡುಬರುತ್ತವೆಯಾದರೂ, ಕೆಲವು ದೇಶಗಳಲ್ಲಿ ಒಂದೇ ಒಂದು ಹಾವು ಕೂಡ ನೈಸರ್ಗಿಕವಾಗಿ ಕಂಡುಬರುವುದಿಲ್ಲ.
1. ಐರ್ಲೆಂಡ್: ಐರ್ಲೆಂಡ್‌ನಲ್ಲಿ ಹಾವುಗಳು ಕಂಡುಬರುವ ಒಂದೇ ಒಂದು ಸ್ಥಳವಿಲ್ಲ ಎನ್ನಲಾಗಿದೆ. ಹಾವುಗಳು ಕಂಡುಬರದ ಏಕೈಕ ಯುರೋಪಿಯನ್ ದೇಶ ಇದಾಗಿದೆ. ಕೊನೆಯ ಹಿಮಯುಗದ ಬಳಿಕ, ಯುರೋಪಿನಲ್ಲಿ ಮಂಜುಗಡ್ಡೆ ಕರಗಿದಾಗ, ಯುರೋಪಿನ ಹೆಚ್ಚಿನ ಭಾಗಗಳಲ್ಲಿ ಹಾವುಗಳು ಹರಡಲು ಪ್ರಾರಂಭಿಸಿದವು. ಆದರೆ ಐರ್ಲೆಂಡ್ ಒಂದು ದ್ವೀಪವಾಗಿರುವುದರಿಂದ ಮುಖ್ಯ ಭೂಭಾಗದಿಂದ ಪ್ರತ್ಯೇಕಿಸಲ್ಪಟ್ಟಿತು. ಹಾವುಗಳು ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ.
2. ಐಸ್ಲ್ಯಾಂಡ್: ಇದು ಜ್ವಾಲಾಮುಖಿ ಮತ್ತು ಅತ್ಯಂತ ಶೀತ ದ್ವೀಪ. ಇಲ್ಲಿನ ತಾಪಮಾನ ಮತ್ತು ಪರಿಸರವು ಹಾವುಗಳು ಬದುಕಲು ಸೂಕ್ತವಲ್ಲ ಹಾಗಾಗಿ ಇಲ್ಲಿ ಹಾವುಗಳು ಕಾಣುವುದಿಲ್ಲ.
3. ನ್ಯೂಜಿಲೆಂಡ್: ನ್ಯೂಜಿಲೆಂಡ್‌ನಲ್ಲಿ ಭೂ ಹಾವುಗಳಿಲ್ಲ. ಇಲ್ಲಿನ ಕರಾವಳಿ ನೀರಿನಲ್ಲಿ ಕೆಲವೇ ಸಮುದ್ರ ಹಾವುಗಳು ಕಂಡುಬರುತ್ತವೆ. ಅವು ಕೂಡ ಬಹಳ ಅಪರೂಪ.
4. ಗ್ರೀನ್ಲ್ಯಾಂಡ್: ಈ ಪ್ರದೇಶವು ತುಂಬಾ ತಂಪಾಗಿದ್ದು ಮಂಜುಗಡ್ಡೆಯಿಂದ ಆವೃತವಾಗಿದೆ ಹಾಗಾಗಿ ಇಲ್ಲಿ ಹಾವುಗಳು ಬದುಕಲು ಅಸಾಧ್ಯ.
(ಏಜೆನ್ಸೀಸ್)
5. ಅಂಟಾರ್ಕ್ಟಿಕಾ: ಹಾವುಗಳು ಸೇರಿದಂತೆ ಯಾವುದೇ ಸರೀಸೃಪಗಳು ಕಂಡುಬರದ ಏಕೈಕ ಖಂಡ ಇದಾಗಿದೆ. ಇಲ್ಲಿನ ತಾಪಮಾನ -40°C ಗಿಂತ ಕಡಿಮೆಯಿದ್ದು, ಇದು ಸರೀಸೃಪಗಳಿಗೆ ಮಾರಕವಾಗಿದೆ.