

Most Romantic People : ನೀವು ಈ ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ, ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ ಖಂಡಿತವಾಗಿಯೂ ಪ್ರೀತಿಯಲ್ಲಿ ಬೀಳುತ್ತೀರಿ. ಈ ಸೃಷ್ಟಿಯಲ್ಲಿ ಮಾನವರು, ಪ್ರಾಣಿಗಳು ಮತ್ತು ಪಕ್ಷಿಗಳು ಸೇರಿದಂತೆ ಎಲ್ಲ ಜೀವಿಗಳು ಸಂಗಾತಿಯೊಂದಿಗೆ ವಾಸಿಸುತ್ತವೆ. ಏಕಾಂಗಿಯಾಗಿ ವಾಸಿಸುವವರು ತುಂಬಾನೇ ವಿರಳ.
ಮನುಷ್ಯರು, ಪ್ರಾಣಿಗಳು ಮತ್ತು ಇತರ ಜೀವಿಗಳು ತಮ್ಮ ಸಂಗಾತಿಯ ಮೇಲಿನ ಪ್ರೀತಿಯ ಭಾವನೆಯೊಂದಿಗೆ ಸಾಯುವವರೆಗೂ ಒಟ್ಟಿಗೆ ಬದುಕುತ್ತವೆ. ಅಂದಹಾಗೆ, ನಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯನ್ನು ನಾವು ಪ್ರಣಯ ಎಂದು ಕರೆಯುತ್ತೇವೆ. ಪ್ರೀತಿಯ ಭಾವನೆಯ ಜತೆ ಪ್ರಣಯವನ್ನು ವ್ಯಕ್ತಪಡಿಸಿದಾಗ, ಅದು ನಮ್ಮನ್ನು ಹೊಸ ರೀತಿಯ ಜೀವನಕ್ಕೆ ಕರೆದೊಯ್ಯುತ್ತದೆ ಎಂದು ಅನೇಕ ಜನರು ಹೇಳುತ್ತಾರೆ. ಪ್ರೀತಿ ಮತ್ತು ಪ್ರಣಯ ಇದ್ದರೆ ಆ ಸಂಬಂಧ ಗಟ್ಟಿಯಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವೇ ಇಲ್ಲ.
ಅಂದಹಾಗೆ, ಪ್ರೀತಿ ಎಂಬುದನ್ನು ಒಂದು ರೊಮ್ಯಾಂಟಿಕ್ ಭಾವನೆ. ಅಂತಹ ರೊಮ್ಯಾಂಟಿಕ್ ಭಾವನೆಯನ್ನು ಯಾವ ದೇಶದಲ್ಲಿ ಹೆಚ್ಚಾಗಿ ವ್ಯಕ್ತಪಡಿಸುತ್ತಾರೆ ಅನ್ನೋ ಕುತೂಹಲ ಸಹ ಇರುತ್ತದೆ. ಹೀಗಾಗಿ, ಜಗತ್ತಿನ ಅತ್ಯಂತ ರೊಮ್ಯಾಂಟಿಕ್ ಜನರು ವಾಸಿಸುವ ದೇಶಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಜಗತ್ತಿನಲ್ಲಿ ಅತಿ ಹೆಚ್ಚು ರೊಮ್ಯಾಂಟಿಕ್ ಜನರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಇಟಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ವಾಸಿಸುವ ದಂಪತಿಗಳು ತಮ್ಮ ಸಂಗಾತಿಗಳೊಂದಿಗೆ ಅತಿ ಹೆಚ್ಚು ಪ್ರಣಯದಿಂದ ಕೂಡಿರುತ್ತಾರಂತೆ. ಇಲ್ಲಿನ ದಂಪತಿ ಸಂಬಂಧದಲ್ಲಿ ಬದ್ಧತೆಯ ಪ್ರಜ್ಞೆ, ಪ್ರಣಯ ಸಂವಹನ ಮತ್ತು ಪ್ರೀತಿಯ ಜೀವನವನ್ನು ಹೊಂದಿರುತ್ತಾರೆ. ಅವರು ಸಾಮಾನ್ಯವಾಗಿ ತಮ್ಮ ಸಂಗಾತಿಗಳೊಂದಿಗೆ ಪ್ರೀತಿಯ ಜೀವನವನ್ನು ನಡೆಸುತ್ತಾರೆ. ರೋಮ್, ವೆನಿಸ್, ಮತ್ತು ಫ್ಲಾರೆನ್ಸ್‌ನಂತಹ ನಗರಗಳು ತಮ್ಮ ಇತಿಹಾಸ ಮತ್ತು ರೊಮ್ಯಾಂಟಿಕ್ ಡಿನ್ನರ್‌ಗಳಿಂದಾಗಿ ಪ್ರೇಮಿಗಳಿಗೆ ಆಕರ್ಷಕವಾಗಿವೆ. ಇಟಾಲಿಯನ್ ಸಂಸ್ಕೃತಿಯಲ್ಲಿ ಭಾವನಾತ್ಮಕ ಅಭಿವ್ಯಕ್ತಿ ಮತ್ತು ಆತಿಥ್ಯವು ರೊಮಾಂಟಿಕ್ ಗುಣವನ್ನು ಹೆಚ್ಚಿಸುತ್ತದೆ. ಇಲ್ಲಿನ ಭೌಗೋಳಿಕ ಸೌಂದರ್ಯವು ಕೂಡ ಪ್ರೀತಿಗೆ ಪೂರಕವಾಗಿದೆ.
ಫ್ರಾನ್ಸ್‌ನಲ್ಲಿ ವಾಸಿಸುವ ಪ್ರೇಮಿಗಳು ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಏಕೆಂದರೆ ಅವರ ಪ್ರೇಮ ಭಾಷೆ ತುಂಬಾ ಸುಂದರವಾಗಿದೆ. ಅವರು ಇತರರಿಗಿಂತ ಹೆಚ್ಚು ಪ್ರೀತಿಯಲ್ಲಿ ಬೀಳುತ್ತಾರೆ. ಅವರು ಚಾಕೊಲೇಟ್ ಮತ್ತು ವೈನ್ ಅನ್ನು ಇಷ್ಟಪಡುತ್ತಾರೆ ಮತ್ತು ಅವರ ಜೀವನಶೈಲಿಯೂ ತುಂಬಾ ಸಂತೋಷವಾಗಿದೆ. ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ರೋಮ್ಯಾಂಟಿಕ್ ಆಗಿರುತ್ತಾರೆ. ಇನ್ನು "ಪ್ರೀತಿಯ ನಗರಿ" ಎಂದು ಕರೆಯಲ್ಪಡುವ ಫ್ರಾನ್ಸ್, ರೊಮಾಂಟಿಕ್ ವಾತಾವರಣ, ಕೆಫೆಗಳು, ಸೀನ್ ನದಿ ಮತ್ತು ಐಫೆಲ್ ಟವರ್‌ನಂತಹ ಸ್ಥಳಗಳಿಂದಾಗಿ ಜಗತ್ತಿನಾದ್ಯಂತ ರೊಮಾಂಟಿಕ್ ಗುಣಕ್ಕೆ ಹೆಸರುವಾಸಿಯಾಗಿದೆ. ಫ್ರೆಂಚ್ ಸಾಹಿತ್ಯ ಮತ್ತು ಚಲನಚಿತ್ರಗಳು ಪ್ರೀತಿಯನ್ನು ಭಾವನಾತ್ಮಕವಾಗಿ ಚಿತ್ರಿಸುತ್ತವೆ.
ಬ್ರೆಜಿಲ್‌ನಲ್ಲಿ ಜನಿಸಿದ ಜನರು ಪ್ರಣಯಭರಿತರು ಮತ್ತು ತಮ್ಮ ಸಂಗಾತಿಗೆ ಸದಾ ಹತ್ತಿರವಾಗಿರುತ್ತಾರೆ. ಅವರು ತಮ್ಮ ಪ್ರೀತಿಯನ್ನು ತೋರಿಸಲು ಹಿಂಜರಿಯುವುದಿಲ್ಲ. ಅವರು ಯಾವಾಗಲೂ ಸಂತೋಷಕ್ಕೆ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಯಾವುದೇ ಖುಷಿಯ ಕ್ಷಣವನ್ನು ಹಬ್ಬದಂತೆ ಆಚರಿಸುತ್ತಾರೆ. ಹೀಗಾಗಿ, ರೊಮ್ಯಾಂಟಿಕ್ ವಿಷಯದಲ್ಲಿ ಬ್ರೆಜಿಲಿಯನ್ನರು ಮೂರನೇ ಸ್ಥಾನವನ್ನು ಪಡೆಯುತ್ತಾರೆ.
ಫ್ಲಮೆಂಕೊ ನೃತ್ಯ, ಭಾವನಾತ್ಮಕ ಸಂಗೀತ ಮತ್ತು ಸೆವಿಲ್ಲೆಯಂತಹ ರೊಮ್ಯಾಂಟಿಕ್ ಸ್ಥಳಗಳಿಂದ ಸ್ಪೇನ್ ರೊಮಾಂಟಿಕ್ ದೇಶವೆಂದು ಪರಿಗಣಿತವಾಗಿದೆ. ಸ್ಪ್ಯಾನಿಷ್ ಜನರ ಉತ್ಸಾಹಭರಿತ ಸ್ವಭಾವವು ಇದಕ್ಕೆ ಕಾರಣವಾಗಿರಬಹುದು. ಇಲ್ಲಿನ ಜನರು ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರಂತೆ.
ಆದರೆ, ರೊಮಾಂಟಿಕ್ ಎಂಬ ಗುಣವು ವೈಯಕ್ತಿಕವಾಗಿರುತ್ತದೆ ಮತ್ತು ಯಾವುದೇ ದೇಶದ ಜನರು ತಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ರೊಮಾಂಟಿಕ್ ಆಗಿರಬಹುದು. ಆದರೆ, ಭೌಗೋಳಿಕ ಸನ್ನಿವೇಶ ಮತ್ತು ಅಲ್ಲಿನ ಜನರ ಜೀವನಶೈಲಿಯನ್ನು ಆಧರಿಸಿ ಈ ಮೇಲಿನ ನಗರಗಳನ್ನು ಹೆಚ್ಚು ರೊಮ್ಯಾಂಟಿಕ್ ಎಂದು ಹೇಳಲಾಗಿದೆ.