ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ನಟ ಅಬ್ಬಾಸ್​ ಇದೀಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಗೊತ್ತಾ? | Abbas

dk (1)
Published on

ಮುಂಬೈ: 90ರ ದಶಕದಲ್ಲಿ ಯುವತಿಯರ ನಿದ್ದೆಗಡೆಸಿದ ನಟ, 'ಶಾಂತಿ ಶಾಂತಿ ಶಾಂತಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಮಿರ್ಜಾ ಅಲಿ ಅಬ್ಬಾಸ್(Abbas) ಯಾರಿಗೆ ಗೊತ್ತಿಲ್ಲ ಹೇಳಿ.

ಒಂದು ಕಾಲದ ಸಿನಿಮಾರಂಗದಲ್ಲಿ ಯಶಸ್ಸಿನ ಉತ್ತಂಗದಲ್ಲಿದ್ದ ನಟ ಅಬ್ಬಾಸ್​ ಎಲ್ಲಿ ಮರೆಯಾದರು ಎಂದು ಇಂದಿಗೂ ಎಲ್ಲರಿಗೂ ಕಾಡುವ ಪ್ರಶ್ನೆ! ಅಬ್ಬಾಸ್​ ಎಲದ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಮತ್ತು ಸಿನಿಮಾರಂಗದಿಂದ ಏಕೆ ದೂರು ಸರಿದರು ಎಂಬೆಲ್ಲಾ ಕಾಡುವ ಪ್ರಶ್ನೆಗೆ ಉತ್ತರ ತಿಳಿಯೋಣ ಬನ್ನಿ..

90ರ ದಶಕದ ನಟ ಈ ಅಬ್ಬಾಸ್

ಹಿರಿಯ ನಟರಾದ ರಜನಿಕಾಂತ್​​​, ಕಮಲ್​ ಹಾಸನ್​ ತಮಿಳಿನಲ್ಲಿ 40ರ ದಶಕದ ಸಿನಿಮಾರಂಗವನ್ನು ಎತ್ತರಕ್ಕೆ ಕೊಂಡೊಯ್ಯದ ಖ್ಯಾತಿ ಅವರಿಗೆ ಸಲ್ಲುತ್ತದೆ. ಬಳಿಕ ತಮಿಳು ಚಿತ್ರೋದ್ಯವನ್ನುಮತ್ತೊಂದು ಯಶಸ್ಸಿನ ಮಜುಲು ಕಡೆಗೆ ಕರೆದೊಯ್ಯದ ಖ್ಯಾತಿ 90ರ ದಶಕದ ನಟರಿಗೆ ಸಲ್ಲುತ್ತದೆ. ಈ 90ರ ದಶಕದ ನಟರಾದ ವಿಜಯ್​, ಅಜಿತ್​ ಕುಮಾರ್​, ಅರವಿಂದ್​ ಸ್ವಾಮಿ ಸೇರಿದಂತೆ ಆರ್​.ಮಾಧವನ್ ಮತ್ತು ಮಿರ್ಜಾ ಅಲಿ ಅಬ್ಬಾಸ್​.

ಅಬ್ಬಾಸ್​ ಸಿನಿಮಾ ಪಯಣ..

ಮೂಲತ ಪಶ್ಚಿಮಬಂಗಾಳದವರಾದ ಅಬ್ಬಾಸ್​, 1994ರಲ್ಲಿ ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್​ಗೆ ಪ್ರವೇಶ ಮಾಡಿದ್ದರು. ಬಳಿಕ 1996ಲ್ಲಿ ಚಿತ್ರರಂಗಕಕ್ಕೆ ಪಾದಾರ್ಪಣೆ ಮಾಡಿದರು. ಇವರು ನಟಿಸಿದ ಮೊದಲ ಸಿನಿಮಾ 'ಕಾದಲ್​ ದೇಶಂ' ಅದ್ಬುತ ಯಶಸ್ಸು ಪಡೆಯಿತು.ಒಂದು ಉತ್ತಮ ಯಶಸ್ಸಿನೊಂದಿಗೆ ಎಲ್ಲರ ಚಿರಪರಿಚಿತರಾದ ಅಬ್ಬಾಸ್​​ ಅಲ್ಲಿಂದ ತೆಲುಗಿನ ಪ್ರಿಯಾ ಓ ಪ್ರಿಯಾ. ರಾಜಾ ಮತ್ತು ರಾಜಹಂಸ ಚಿತ್ರಗಳು ಯಶ ಕಂಡವು. ಇನ್ನು ತಮಿಳಿನಲ್ಲಿ ಕನ್ನೆ ಜಾತಿ, ಪೊಟ್ಟುಂತೊಟ್ಟು, ಪಡಯಪ್ಪ ಮತ್ತು ಸ್ವಯಂವರಂ ಸಿನಿಮಾ ಭಾರೀ ಯಶಸ್ಸು ಕಂಡವು. ಅಂದಿನ ಸ್ಟಾರ್​ ಹಿರೋಗಳ ಪೈಕಿ ಉತ್ತಂಗದಲ್ಲಿದ್ದರು ಸ್ಟಾರ್​ ಅಬ್ಬಾಸ್​.

ಕಮಲ್​ ಹಾಸನ್​ಮತ್ತು ಶಾರುಕ್​ಖಾನ್​ ಅಭಿನಯದ 'ಹೇ ರಾಮ್​​' ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ ಅಬ್ಬಾಸ್​ ಈ ಸಿನಿಮಾದ ಮೂಲಕ ಮತ್ತೊಂದು ದೊಡ್ಡ ಯಶಸ್ಸು ಕಂಡುಕೊಂಡರು. ಬಳಿಕ ನಟಿ ಐಶ್ವರ್ಯ ರೈ ಜತೆಗೂಡಿ 'ಕಂಡುಕೋಡೆನ್​ ಕಂಡುಕೋಡೆನ್​' ಲವ್​ ಆ್ಯಂಡ್​ ಎಂಟರ್​ಟೈನ್​ಮೆಂಟ್​ ಚಿತ್ರದ ಮೂಲಕ ಬಿಗ್​ ಹಿಟ್​ ಕಂಡುಕೊಂಡಿದ್ದರು. ಬಳಿಕ ಬೇರೆ ಬೇರೆ ಭಾಷೆಯಲ್ಲಿ ನಟಿಸಿದ ಅಬ್ಬಾಸ್​ ಸಿನಿಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಅಲ್ಲಿಂದ 2002ರೊತ್ತಿಗೆ ಅಬ್ಬಾಸ್​ ಫೇಲ್ಯೂವರ್​ ನಟರಾಗಿ ಉಳಿದು ಬಿಟ್ಟರು.

ಅಬ್ಬಾಸ್​ ಸಿನಿ ಪಯಾಣ ಅಂತ್ಯ

2002ರ ಬಳಿಕ ಅಲ್ಲೊಂದು ಇಲ್ಲೊಂದು ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ನಟಿಸುತ್ತಿದ್ದ ಅಬ್ಬಾಸ್​ ಬಳಿಕ ತನಗಿಂತ ಚಿಕ್ಕ ನಟರ ಜತೆ ಪಾತ್ರ ಮಾಡುತ್ತಿದ್ದರು. ಆದರೆ, ಏಕಾಏಕಿ 2011ರಲ್ಲಿ ಯೂಟ್ಯೂಬ್​ ಚಾನೆಲ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ  ಸಿನಿಮಾದಿಂದ ದೂರ ಉಳಿಯುವುದಾಗಿ ಹೇಳಿಕೆ ನೀಡಿದ್ದರು. ಇದರ ನ್ಯೂಜಿಲ್ಯಾಂಡ್​ಗೆ ತೆರಳಿದರು.

2023ರಲ್ಲಿ ಭಾರತಕ್ಕೆ ಬಂದ ಅಬ್ಬಾಸ್​

2015ರಲ್ಲಿ ನ್ಯೂಜಿಲ್ಯಾಂಡ್​​ಗೆ ತೆರಳಿದ ಅಬ್ಬಾಸ್​ ಅ ದೇಶದಲ್ಲಿ ಬಹಳ ಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಬಳಿಕ ಹಣವೆಲ್ಲಾ ಖಾಲಿಯಾಗಿ ಮೆಕಾನಿಕ್​ ತರಬೇತುದಾರ, ಪ್ಲಂಬರ್ ಆಗಿ, ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡಿರುದಾಗಿ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ. ಇದೆಲ್ಲಾ ಆದ ಬಳಿಕ 2023ರಲ್ಲಿ ಭಾರತಕ್ಕೆ ಅಬ್ಬಾಸ್​ ಮರಳಿದರು. ಸಿನಿಮಾದಲ್ಲಿ ಮತ್ತೆ ನಟಿಸುವುದಾಗಿ ಹೇಳಿಕೊಂಡಿದ್ದರು. ಆದರೆ, ಈವರೆಗೂ ಯಾವ ಸಿನಿಮಾಗಳಿಕೆ ಸಹಿ ಹಾಕಿಲ್ಲ. ಇದೀಗ ಚೈನ್ನೈನಲ್ಲಿ ವಾಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net