

Prisoner:ಮರಣದಂಡನೆಯನ್ನು ಎಲ್ಲಾ ಶಿಕ್ಷೆಗಿಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಅದಾಗ್ಯೂ ಮರಣದಂಡನೆಯನ್ನು ವಿಧಿಸಲು ವಿವಿಧ ದೇಶಗಳಲ್ಲಿ ವಿಭಿನ್ನವಾಗಿ ಮತ್ತು ಕೆಲ ನಿಯಮಗಳಿವೆ. ಅದರಂತೆ ನಮ್ಮ ದೇಶದಲ್ಲಿ ಕೈದಿಗಳಿಗೆ ಯಾವ ರೀತಿಯ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ ಹಾಗೂ ಕೊನೆಯಾದಾಗಿ ಅವರ ಕಿವಿಯಲ್ಲಿ ಏನು ಹೇಳುತ್ತಾರೆ ಎಂಬುವುದು ತಿಳಿಯೋಣ..
ಮರಣದಂಡನೆ ವಿಧಿಸಲು ಪ್ರತಿಯೊಂದು ದೇಶವು ವಿಭಿನ್ನ ಕಾನೂನುಗಳನ್ನು ಹೊಂದಿವೆ. ಕೆಲವು ದೇಶಗಳಲ್ಲಿ ಮರಣದಂಡನೆ ವಿಧಿಸಲು ಗುಂಡಿಕ್ಕಿ ಕೊಲ್ಲಲಾಗುತ್ತೆದೆ. ಇನ್ನೂ ಕೆಲ ದೇಶಗಳಲ್ಲಿ ನೇಣು ಹಾಕಲಾಗುತ್ತದೆ. ಅದರಂತೆ ಭಾರತ, ಮಲೇಷ್ಯಾ, ಬಾರ್ಬಡೋಸ್, ಬೋಟ್ಸ್ವಾನಾ, ಟಾಂಜಾನಿಯಾ, ಜಾಂಬಿಯಾ, ಜಿಂಬಾಬ್ವೆ, ದಕ್ಷಿಣ ಕೊರಿಯಾ ಸೇರಿದಂತೆ ದೇಶಗಳಲ್ಲಿ ಮರಣದಂಡನೆಗೆ ಗಲ್ಲಿಗೇರಿಸುವ ಅವಕಾಶವಿದೆ.
ಆದರೆ ಯೆಮೆನ್, ಟೋಗೊ, ತುರ್ಕಮೆನಿಸ್ತಾನ್, ಥೈಲ್ಯಾಂಡ್, ಬಹ್ರೇನ್, ಚಿಲಿ, ಇಂಡೋನೇಷ್ಯಾ, ಘಾನಾ, ಅರ್ಮೇನಿಯಾ ಮುಂತಾದ ದೇಶಗಳಲ್ಲಿ ಗುಂಡು ಹಾರಿಸುವ ಮೂಲಕ ಮರಣದಂಡನೆ ವಿಧಿಸಲಾಗುತ್ತದೆ. ಕಾರ್ಯ ವಿಭಿನ್ನವಾಗಿದ್ದರೂ ಕೆಲಸ ಒಂದೇ ಎಂಬಂತೆ ಶಿಕ್ಷೆಗೆ ಗುರಿಯಾಗಿರುವ ಕೈದಿಯ ಕಿವಿಯಲ್ಲಿ ಎಲ್ಲಾ ದೇಶಗಳಲ್ಲಿಯೂ ಕೊನೆಯ ಕ್ಷಣದಲ್ಲಿ ಆತನಿಗೆ ಒಂದು ಮಾತನ್ನು ಹೇಳುತ್ತಾರೆ.
ಹೌದು, ಕೈದಿಗೆ ಮರಣದಂಡನೆ ವಿಧಿಸುವ ಸಂದರ್ಭದಲ್ಲಿ ಕೊನೆಯದಾಗಿ ಅವರ ಕಿವಿಯಲ್ಲಿ ಪಿಸುಗೂಡುತ್ತಾರೆ. ಅಲ್ಲದೆ ಇದಕ್ಕೂ ಮುಂಚೆ ಕೈದಿಯ ಕೊನೆಯ ಆಸೆಯನ್ನು ಕೂಡ ಕೇಳುತ್ತಾರೆ. ಇದನ್ನು ನಾವು ಸಿನಿಮಾಗಳಲ್ಲಿ ನೋಡಿರಬಹುದು.
ಕುಣಿಕೆ ಹಾಕುವ ಸಮಯ ಸೇರಿದಂತೆ ಭಾರತದಲ್ಲಿ ಗಲ್ಲಿಗೇರಿಸಬೇಕಾದರೆ ಕೆಲ ನಿಯಮಗಳನ್ನು ಪಾಲಿಸಬೇಕು. ಅಲ್ಲದೆ, ಕೊನೆಯದಾಗಿ 'ನನ್ನನ್ನು ಕ್ಷಮಿಸು ಸಹೋದರ/ ಸಹೋದರಿ ನಾವು ಆದೇಶಗಳ ಗುಲಾಮರು' ಎಂದು ಹೇಳಿ ನೇಣಿಗೆರಿಸುತ್ತಾರೆ.(ಏಜೆನ್ಸೀಸ್)