ಬಾಲಕಿಗೆ ಮುತ್ತಿಟ್ಟ ಸೆಕ್ಯೂರಿಟಿ ಗಾರ್ಡ್‌ಗೆ ಕೊನೆಗೆ ಏನಾಯಿತು ಗೊತ್ತಾ..!

COURT
Published on

ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಮುತ್ತಿಟ್ಟ ಸೆಕ್ಯೂರಿಟಿ ಗಾರ್ಡ್‌ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಟಿಎಸ್‌ಸಿ-1ನೇ ನ್ಯಾಯಾಲಯ ತೀರ್ಪು ನೀಡಿದೆ.

ಮಲ್ಲೇಶ್ವರದ ಚಿದಾನಂದ (35) ಅಪರಾಧಿ. ಮೂರು ವರ್ಷ ಜೈಲು, 25 ಸಾವಿರ ರೂ. ದಂಡ ಮತ್ತು ನೊಂದ ಬಾಲಕಿಗೆ ಡಿಎಸ್‌ಎಸ್‌ಎಯಿಂದ 25 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾ. ಕೆ.ಎನ್. ರೂಪಾ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

2022ರ ಮೇ 22ರಂದು ಮಲ್ಲೇಶ್ವರದಲ್ಲಿ ಉಪನಯನ ಕಾರ್ಯಕ್ರಮ ನಡೆಯುತ್ತಿತ್ತು. ಏಳು ವರ್ಷದ ಬಾಲಕಿ ತನ್ನ ಪಾಲಕರೊಂದಿಗೆ ಹೋಗಿದ್ದಳು. ನೆಲಮಹಡಿಯಲ್ಲಿ ಬಾಲಕಿ ಆಟವಾಡುತ್ತಿದ್ದಾಗ ಅಪರಾಧಿ, ಮಗುವಿನ ಗಲ್ಲಕ್ಕೆ ಮುತ್ತುಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದ. ನೊಂದ ಬಾಲಕಿಯ ತಂದೆ ಮಲ್ಲೇಶ್ವರ ಠಾಣೆಗೆ ದೂರು ಸಲ್ಲಿಸಿದ್ದರು.

ತನಿಖೆ ಕೈಗೊಂಡ ಅಂದಿನ ತನಿಖಾಧಿಕಾರಿ ಚಂದ್ರಶೇಖರ್, ಚಿದಾನಂದನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಚಿದಾನಂದನನ್ನು ಅಪರಾಧಿ ಎಂದು ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net