ಚರ್ಮದ ಮೇಲೆ ಎಷ್ಟೊಂದು ಬ್ಯಾಕ್ಟೀರಿಯಾಗಳಿವೆ ಗೊತ್ತಾ?

bacteria
Published on
ಬ್ಯಾಕ್ಟೀರಿಯಾಗಳ ಬಗ್ಗೆ ಇಂದಿಗೂ ಸಂಶೋಧನೆ ನಡೆಯುತ್ತಲೇ ಇದೆ. ಅದೂ ಅಲ್ಲದೆ, ಬ್ಯಾಕ್ಟೀರಿಯಾಗಳ ಸಂಖ್ಯೆಯೂ ಅಧಿಕ. ನಮ್ಮ ದೇಹದಲ್ಲಿ ಮುನ್ನೂರಕ್ಕೂ ಹೆಚ್ಚು ಜಾತಿಯ ಒಟ್ಟು ಐವತ್ತರಿಂದ ನೂರು ಲಕ್ಷ ಕೋಟಿ (ನೂರು ಟ್ರಿಲಿಯನ್) ಬ್ಯಾಕ್ಟೀರಿಯಾಗಳಿವೆ. ಅತಿ ಹೆಚ್ಚು ಕಂಡು ಬರುವುದು ದೊಡ್ಡ ಕರುಳಿನಲ್ಲಿ. ನಮ್ಮ ಒಂದು ಇಂಚು ಅಗಲದ ಚರ್ಮದಲ್ಲಿ ಅಂದಾಜು ಒಂದು ಲಕ್ಷ ಬ್ಯಾಕ್ಟೀರಿಯಾ ಇರುತ್ತವೆ, ಒಂದು ಚಮಚ ಫಲವತ್ತಾದ ಮಣ್ಣಿನಲ್ಲಿ 100 ಕೋಟಿ ಬ್ಯಾಕ್ಟೀರಿಯಾ ಇರುತ್ತವೆ. ನಾವು ಉಪಯೋಗಿಸುವ ಮೊಬೈಲ್ ಫೋನ್​ನ ಒಂದಿಂಚು ಜಾಗದಲ್ಲಿ ಅಂದಾಜು 25,000 ಬ್ಯಾಕ್ಟೀರಿಯಾ ಇರುತ್ತವೆ. ಅಡುಗೆ ಮಾಡಿದ ಪಾತ್ರೆಗಳು, ತಟ್ಟೆ, ನಾವು ತೊಡುವ ಬಟ್ಟೆ, ಹಾಸಿಗೆಯಲ್ಲಿ, ಹೊದಿಕೆಗಳು ಮುಂತಾದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಸರಿಯಾಗಿ ತೊಳೆಯದಿದ್ದರೆ ಕೆಟ್ಟ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಕೀಟಗಳು ಇಮ್ಮಡಿಗೊಂಡು ರೋಗ ಬರುತ್ತದೆ. ಆದ್ದರಿಂದ ನಾವು ಉಪಯೋಗಿಸುವ ವಸ್ತುಗಳನ್ನು ಆಗಾಗ್ಗೆ ತೊಳೆದು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಊಟಕ್ಕೂ ಮೊದಲು ಸೋಪಿನಿಂದ ಕೈಯನ್ನು, ಬೆರಳು ಮತ್ತು ಉಗುರುಗಳ ಮಧ್ಯೆ, ಚೆನ್ನಾಗಿ ತೊಳೆದು ಊಟಮಾಡಬೇಕು.

ಈ ಬ್ಯಾಕ್ಟೀರಿಯಾಗಳು ಬದುಕುವುದು ಕೇವಲ 15 ನಿಮಿಷ ಮಾತ್ರ.

ಬ್ಯಾಕ್ಟೀರಿಯಾಗಳು ಮೊಟ್ಟೆ ಇಡುತ್ತವೆಯೇ? ಇಲ್ಲ ಮರಿ ಹಾಕುತ್ತವೆಯೇ? ಒಂದು ಬ್ಯಾಕ್ಟೀರಿಯಾ ಹುಟ್ಟಿ ಬೆಳೆದು 15 ನಿಮಿಷಕ್ಕೆ ಎರಡು ಬ್ಯಾಕ್ಟೀರಿಯ ಆಗಿ ಇಬ್ಭಾಗವಾಗುತ್ತದೆ. ಅಂದರೆ, ಪ್ರತಿ 15 ನಿಮಿಷಕ್ಕೆ ಇಮ್ಮಡಿಯಾಗುತ್ತವೆ. ಒಂದು ಎರಡಾಗುತ್ತವೆ, ಎರಡು ನಾಲ್ಕಾಗುತ್ತವೆ, ನಾಲ್ಕು ಎಂಟಾಗುತ್ತವೆ. ಹೀಗೆ ಒಂದು ದಿವಸಕ್ಕೆ ಒಂದು ಬ್ಯಾಕ್ಟೀರಿಯಾದಿಂದ ಒಂದು ಕೋಟಿಗೂ ಹೆಚ್ಚು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಬ್ಯಾಕ್ಟೀರಿಯಾ ಇಲ್ಲದೇ ಇದ್ರೆ ನಮಗೆ ಮೊಸರು, ಬ್ರೆಡ್ ಸಿಗುವುದಿಲ್ಲ. ಇವುಗಳ ಡಿಎನ್​ಎಯಿಂದ ಈ ಭೂಮೀಲಿ ಜೀವಿಗಳು ಹುಟ್ಟಿದ್ದು ನಂತರ ಇವುಗಳ ಸಹಾಯದಿಂದಲೇ ಜೀವಿಗಳು ವೃದ್ಧಿಯಾಗಿದ್ದು. ಇವಕ್ಕೆ ಜೀವ ಕೊಡೋ ಶಕ್ತೀನೂ ಇದೆ, ಜೀವ ತೆಗೆಯೋ ಶಕ್ತೀನೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net