ಮತ್ತೆ ಇಳಿಯಿತು ಚಿನ್ನದ ದರ! ಈಗ ಎಷ್ಟಾಗಿದೆ ಗೊತ್ತೇ?

gold
Published on

ಬೆಂಗಳೂರು: ನೀವು ಚಿನ್ನಾಭರಣ ಪ್ರಿಯರಾಗಿದ್ದರೆ ಇದು ನಿಮಗೆ ಶುಭ ಮಂಗಳವಾರ. ಕಳೆದ ತಿಂಗಳಿನಿಂದ ಇಳಿಕೆ ಮುಖದಲ್ಲಿ ಸಾಗುತ್ತಿರುವ ಚಿನ್ನದ ದರದಲ್ಲಿ ಮಂಗಳವಾರದಂದು ಭಾರೀ ಇಳಿಕೆ ಕಂಡುಬಂದಿದೆ. ಹಾಗಾದರೆ ರಾಜಧಾನಿ ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಎಷ್ಟಿದೆ ಎಂದು ತಿಳಿಯುವುದಕ್ಕೆ ಈ ಸುದ್ದಿ ಓದಿ.

ಬೆಂಗಳೂರಿನಲ್ಲಿ ಮಂಗಳವಾರದಂದು 22 ಕ್ಯಾರೆಟ್​ ಚಿನ್ನದ ದರದಲ್ಲಿ 350 ರೂಪಾಯಿ (10 ಗ್ರಾಂ.ಗೆ) ಇಳಿಕೆ ಕಂಡಿದೆ. 24 ಕ್ಯಾರೆಟ್​ ಚಿನ್ನದ ದರದಲ್ಲಿ 380 ರೂಪಾಯಿ ಇಳಿಕೆ ಉಂಟಾಗಿದೆ. ಈ ಮೂಲಕ 22 ಕ್ಯಾರೆಟ್​ ಚಿನ್ನದ ದರ 41,650 ರೂಪಾಯಿಗೆ ಹಾಗೂ 24 ಕ್ಯಾರೆಟ್ ಚಿನ್ನದ ದರ 45,440 ರೂಪಾಯಿಯಷ್ಟಾಗಿದೆ. ಕಳೆದ ಮಂಗಳವಾರ ಈ ದರ ಕ್ರಮವಾಗಿ 42,100 ರೂಪಾಯಿ ಹಾಗೂ 45,930 ರೂಪಾಯಿಯಷ್ಟಿತ್ತು.

ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದ್ದು ಒಂದು ಕೆಜಿ ಬೆಳ್ಳಿ ದರ 66,700 ರೂಪಾಯಿಗೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್​ ಚಿನ್ನದ ದರ 10 ಗ್ರಾಂಗೆ 43,996 ರೂಪಾಯಿ ಹಾಗೂ 24 ಕ್ಯಾರೆಟ್​ ಚಿನ್ನದ ದರ 47,780 ರೂಪಾಯಿಯಷ್ಟಾಗಿದೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net