ಪದೇಪದೆ Reels​​ ನೋಡುವ ವ್ಯಸನ ಎಷ್ಟು ಅಪಾಯಕಾರಿ ಗೊತ್ತೆ?; ಇದನ್ನು ಯುವ ಜನಾಂಗ ತಿಳಿದುಕೊಳ್ಳಲೇಬೇಕು

dk - 2025-02-24T171211.193
Published on

Reels:ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್​ ವ್ಯಸನದ ಜತೆಗೆ ರೀಲ್ಸ್​ ಸ್ಕ್ರೋಲ್​ ಮಾಡುವ ಚಟ ಯುವ ಜನಾಂಗಕ್ಕೆ ಹೆಚ್ಚಿದೆ. ಒಂದರಿಂದ ಒಂದದುವರೆ ನಿಮಿಷ ರೀಲ್​ ನೋಡುವ ಚಟ ಗಂಟೆಗಟ್ಟಲೇ ಕಳೆಯುತ್ತಿದೆ. ಇದರಿಂದ ನಾವು ಇಂಟರ್ನೆಟ್​ ವ್ಯಸನಕ್ಕೆ ಬಿದ್ದಿದ್ದೇವೆ ಎಂದರ್ಥ. ರೀಲ್ಸ್​ ನೋಡುವ ವ್ಯಸನ ಮಾನಸಿಕವಾಗಿ ಮತ್ತು ದೈಹಿಕವಾಗಿ ಮಾತ್ರವಲ್ಲದೆ ಇಡೀ ದೇಹದ ಆರೋಗ್ಯವನ್ನು ಅಪಾಯಕ್ಕೆ ದೂಡುತ್ತದೆ. ಹೀಗಾಗಿ ಈ ರೀಲ್ಸ್​ ಚಟದಿಂದ ಹೊರಬರೊದೇಗೆ? ಬಿಡುವ ಮಾರ್ಗಗಳೇನು? ಎಂಬುದು ತಿಳಿಯೋಣ.

ಯುವಕರು ಮಾತ್ರವಲ್ಲದೆ ಮಕ್ಕಳು, ವೃದ್ಧರು ರೀಲ್ಸ್​ ನೋಡುವಲ್ಲಿ ಅಧಿಕ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇನ್ನು ಒಂದು ವರದಿಯ ಪ್ರಕಾರ, ದೇಶದ ಪ್ರತಿಯೊಬ್ಬ ಸ್ಮಾರ್ಟ್​ಪೋನ್​ ಬಳಕೆದಾರ ಸರಾಸರಿ 2.5 ಗಂಟೆಗಳ ಕಾಲ ಸಮಯವನ್ನು ರೀಲ್ಸ್​ ನೋಡುವುದರಲ್ಲೇ ಕಳೆಯುತ್ತಿದ್ದಾನೆ ಎಂದು ಅತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ. ರೀಲ್ಸ್​ ನೋಡುವುದು ಇದೇ ರೀತಿ ಮುಂದುವರೆದರೆ, 3 ರಿಂದ 4 ತಾಸುಗಳ ಕಾಲ ರೀಲ್ಸ್​ ನೋಡುವ ವ್ಯಸನವಾಗುತ್ತಿದೆ. ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಅನೇಕ ರೋಗಗಳ ಅಪಾಯ ಹೆಚ್ಚುತ್ತದೆ. ಇದರಿಂದ ರೀಲ್ಸ್​ ಬಿಡುವ ಮಾರ್ಗವೇನು ಎಂದು ತಿಳಿಯಿರಿ.

ರೀಲ್ಸ್​ ನೋಡುವ ಚಟ ಎಷ್ಟು ಅಪಾಯಕಾರಿ

1. ಪದೇಪದೆ ರೀಲ್ಸ್​ ನೋಡುವುದರಿಂದ ಕಿರಿಕಿರಿ ಶುರುವಾಗುತ್ತದೆ. ನಿದ್ರೆ ಮತ್ತು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ.

2. ಆತ್ಮವಿಶ್ವಾಸ ಕಡಿಮೆಯಾಗಿ ಕೋಪ ಹೆಚ್ಚಾಗುತ್ತದೆ.

3. ಒತ್ತಡ-ಖಿನ್ನತೆ ಹೆಚ್ಚಾಗುತ್ತದೆ. ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.

4. ಮನಸ್ಸು ನಿಜ ಜೀವನದ ಬಗ್ಗೆ ಬೇಗನೆ ಬೇಸರಗೊಳ್ಳುತ್ತದೆ. ರೀಲ್ ಜೀವನ ಮಾತ್ರ ನಿಜವೆಂದು ತೋರುತ್ತದೆ.

5. ಪೋಷಕರೊಂದಿಗಿನ ಸಂಬಂಧಗಳು ಹಾಳಾಗುತ್ತವೆ. ಸಂವಹನ ಅಂತರ ಹೆಚ್ಚುತ್ತಿದೆ. ನಿಮ್ಮನ್ನು ಇತರರೊಂದಿಗೆ ಹೋಲಿಸಲು ಪ್ರಾರಂಭಿಸಿತ್ತೆ.

ರೀಲ್ಸ್​ ನೋಡುವ ಚಟ ಬಿಡೊದೇಗೆ?

1. ಕೆಲಸ ಮಾಡುವಾಗ, ಸಭೆಯಲ್ಲಿರುವಾಗ ಅಥವಾ ಚಾಲನೆ ಮಾಡುವಾಗ ನಿಮ್ಮ ಫೋನ್‌ನ ಡೇಟಾವನ್ನು ಆಫ್ ಮಾಡಿ.

2. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದ್ದರೆ ಡೇಟಾವನ್ನು ಆಫ್ ಮಾಡಿ ಮತ್ತು ಮೊಬೈಲ್ ಅನ್ನು ನಿಮ್ಮಿಂದ ದೂರವಿಡಿ.

3. ಮಲಗುವಾಗ ಫೋನ್ ಅನ್ನು ಹಾಸಿಗೆಯಿಂದ ದೂರವಿಡಿ.

4. ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಸಾಮಾಜಿಕ ಮಾಧ್ಯಮ ಅಧಿಸೂಚನೆಗಳನ್ನು ಆಫ್ ಮಾಡಿ.

5. ಸಾಮಾಜಿಕ ಮಾಧ್ಯಮ ಅಧಿಸೂಚನೆಗಳನ್ನು ಸ್ಮಾರ್ಟ್‌ಫೋನ್‌ನ ಬದಲು ಕಂಪ್ಯೂಟರ್‌ನಲ್ಲಿ ಆನ್‌ನಲ್ಲಿ ಇರಿಸಿ.

6. ನಿಗದಿತ ಮತ್ತು ನಿರ್ದಿಷ್ಟ ಸಮಯದವರೆಗೆ ಮಾತ್ರ ರೀಲ್‌ಗಳನ್ನು ವೀಕ್ಷಿಸಿ.

7. ರೀಲ್ಸ್ ವ್ಯಸನವನ್ನು ತಪ್ಪಿಸಲು ಕ್ರೀಡೆ, ಅಧ್ಯಯನ, ಸಂಗೀತ ಅಥವಾ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net