20 ವರ್ಷದ ಹಿಂದೆ ಈ ವ್ಯಕ್ತಿ ಕೊಟ್ಟಿದ್ದ ಗುಲಾಬಿಯನ್ನು ಇನ್ನು ಇಟ್ಟುಕೊಂಡಿದ್ದಾರೆ ನಟಿ ಜೆನಿಲಿಯಾ

genelia
Published on

ಮುಂಬೈ: ಖ್ಯಾತ ನಟಿ ಜೆನಿಲಿಯಾ ಡಿಸೋಜಾ ರಿತೇಶ್​ ದೇಶಮುಖ್​ ಬಾಲಿವುಡ್​​ನ ಮುದ್ದಾ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಈ ಕ್ಯೂಟ್‌ ಜೋಡಿಯ ಮಧ್ಯೆ ಇರುವ ಪ್ರೀತಿ, ಸಂಬಂಧ ಕುರಿತಾದ ಸುದ್ದಿಯೊಂದು ವೈರಲ್​ ಆಗುತ್ತಿದೆ.

ಕಳೆದ ವರ್ಷ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್‌ನಲ್ಲಿ ಅಭಿಮಾನಿಯೊಬ್ಬರು ಜೆನಿಲಿಯಾ ಅವರಿಗೆ ರಿತೇಶ್ ನೀಡಿದ ನೆಚ್ಚಿನ ಉಡುಗೊರೆಯ ಬಗ್ಗೆ ಕೇಳಿದಾಗ, ಅವರು ಅದೇ ಕೆಂಪು ಗುಲಾಬಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಗುಲಾಬಿ ಹಾಗೂ ಜೆನಿಲಿಯಾ ಅವರಿಗೆ ರಿತೇಶ್ 20 ವರ್ಷಗಳ ಹಿಂದೆ ನೀಡಿದ್ದು, ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.

ರಿತೇಶ್ ದೇಶ್‌ಮುಖ್ ಸಂದರ್ಶನವೊಂದರಲ್ಲಿ ಮಾತನಾಡುವಾಗ, "20 ವರ್ಷಗಳ ಹಿಂದೆ ನಾನು ಜೆನಿಲಿಯಾಗೆ ಒಂದು ಉಡುಗೊರೆ ನೀಡಿದ್ದೇನು. ಇನ್ನೂ ಆ ಉಡುಗೊರೆಯನ್ನು ಇಟ್ಟುಕೊಂಡಿದ್ದಾಳೆ. ನಾನು ಅವಳಿಗೆ ಗುಲಾಬಿಯನ್ನು ನೀಡಿದ್ದೇನೆ, ಅದನ್ನು ಅವಳು ಪುಸ್ತಕದಲ್ಲಿ ಇಟ್ಟುಕೊಂಡಿದ್ದಾಳೆ. ಇದು 20 ವರ್ಷಗಳು ಮತ್ತು ನಮ್ಮಲ್ಲಿ ಇನ್ನೂ ಇದೆ," ಎಂದು ಹೇಳಿದ್ದಾರೆ.

Do you know Genelia still has the first rose that Riteish gifted her 20 years ago

ರಿತೇಶ್ ಮತ್ತು ಜೆನಿಲಿಯಾ 2003 ರಲ್ಲಿ ಮದುವೆಗೆ ನಿರ್ಧರಿಸುವ ಮೊದಲು ನಿಖರವಾಗಿ ಹೇಳಬೇಕೆಂದರೆ ಒಂಬತ್ತು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಅವರ ಡೇಟಿಂಗ್ ಹಂತದ ಬಗ್ಗೆ ಮಾತನಾಡಿದ ರಿತೇಶ್, "ನಾವು ಡೇಟಿಂಗ್ ಮಾಡುವಾಗ ವೀಡಿಯೊ ಕರೆ ಮತ್ತು ಫೋನ್​​ ಮಾಡುವಂತಹ ಯಾವುದೇ ವಿಷಯ ಇರಲಿಲ್ಲ. ಮತ್ತು ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ ಸಂದೇಶಗಳು ತುಂಬಾ ದುಬಾರಿಯಾಗುತ್ತಿದ್ದವು. ನಾನು 30 ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿದ್ದೆ ಮತ್ತು ಜೆನಿಲಿಯಾ ಇಲ್ಲಿ ಸಿನಿಮಾ ಮಾಡುತ್ತಿದ್ದಳು, ಆದ್ದರಿಂದ ನಾವು ಪ್ರತಿದಿನ ಪರಸ್ಪರ ಪತ್ರಗಳನ್ನು ಬರೆಯಲು ನಿರ್ಧರಿಸಿದ್ದೇವೆ. ಆದ್ದರಿಂದ ನಾವು 30 ದಿನಗಳ ನಂತರ ಭೇಟಿಯಾದಾಗ, ನಾವು ಎಲ್ಲಾ 30 ಪತ್ರಗಳನ್ನು ವಿನಿಮಯ ಮಾಡಿಕೊಂಡೆವು ಮತ್ತು ಆ 30 ದಿನಗಳಲ್ಲಿ ನಮಗೆ ಏನಾಯಿತು ಎಂದು ನಂತರ ಓದಿಕೊಂಡಿದ್ದೇವು ಎಂದಿದ್ದಾರೆ.

ಸಿನಿಮಾವೊಂದರ ಚಿತ್ರದ ವೇಳೆ ಮದುವೆಯ ಸೀನ್​ ನಡೆಯುತ್ತಿತ್ತು "ನಾವಿಬ್ಬರೂ ವಧು-ವರರಂತೆ ಕಂಗೊಳಿಸುತ್ತಿದ್ದ ಮದುವೆಯ ಸೀಕ್ವೆನ್ಸ್ ಇತ್ತು, ನಾವು ಕೆಲವು ಫೋಟೋಗಳನ್ನು ಕ್ಲಿಕ್ ಮಾಡಿಕೊಂಡಿದ್ದೇವು. ನಿಜ ಜೀವನದಲ್ಲಿ ಮದುವೆಯಾಗು, ನಾನು ಜೆನಿಲಿಯಾ ಅವರ ಕೊರಳಿಗೆ ಮಂಗಳಸೂತ್ರವನ್ನು ಹಾಕಿದಾಗ ಅದು ಕನಸಿನಂತೆ ಆಯ್ತು. ಇದು ನನಗೆ ಇನ್ನೂ ನೆನಪಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net