ಸೋನಾಕ್ಷಿ - ಜಹೀರ್ ನಡುವೆ ವಯಸ್ಸಿನ ಅಂತರ! ನಟಿ ಎಷ್ಟು ವರ್ಷ ದೊಡ್ಡವಳು ಗೊತ್ತೇ..?

sonakshi
Published on

ಮುಂಬೈ: ಬಾಲಿವುಡ್‌ನ ಶಾಟ್ ಗನ್ ಶತ್ರುಘ್ನ ಸಿನ್ಹಾ ಮತ್ತು ನಟಿ ಪೂನಂ ಅವರ ಪುತ್ರಿ ಸೋನಾಕ್ಷಿ ಸಿನ್ಹಾ ಚಿತ್ರರಂಗಕ್ಕೆ ನಟಿಯಾಗಿ ಕಾಲಿಟ್ಟು ವಿಶೇಷ ಮನ್ನಣೆ ಗಳಿಸಿದ್ದಳು. ಈ ಚೆಲುವೆ ಗೆಳೆಯ ಜಹೀರ್ ಇಕ್ಬಾಲ್ ನೊಂದಿಗಿನ ತನ್ನ ಏಳು ವರ್ಷದ ಪ್ರೇಮವನ್ನು ಮದುವೆಯೊಂದಿಗೆ ಕೊನೆಗೊಳಿಸಿದ್ದಾಳೆ.

ಇಬ್ಬರೂ ಗಾಢವಾಗಿ ಪ್ರೀತಿಸುತ್ತಿದ್ದರು. ಮನೆಯಲ್ಲಿ ಒಪ್ಪದ ಕಾರಣ ಇಬ್ಬರೂ ಸಬ್​ರಿಜಿಸ್ಟರ್​ ಆಫೀಸಿನಲ್ಲಿ ಮದುವೆ ರಿಜಿಸ್ಟರ್ ಮಾಡಿಸಿ ಸರಳ ವಿವಾಹದೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಇಷ್ಟವಿಲ್ಲದ ಕಾರಣ ಮದುವೆಗೆ ಬಂದಿರಲಿಲ್ಲ. ಸಲ್ಮಾನ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವದಂಪತಿಗಳಿಗೆ ಆಶೀರ್ವಾದ ಮಾಡಿದ್ದರು.

ಜಹೀರ್ ಇಕ್ಬಾಲ್ ಕೂಡ ಸಿನಿಮಾ ನಟ. ‘ಡಬಲ್ ಎಕ್ಸೆಲ್’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಕ್ಷಣದಿಂದಲೇ ಅವರ ನಡುವೆ ಪ್ರೀತಿ ಚಿಗುರೊಡೆದಿತ್ತು.

ಏನೇ ಇದ್ದರೂ ಪ್ರೇಮಿಗಳು ಈಗ ಒಂದಾಗಿದ್ದಾರೆ. ಅವರ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಾಮೆಂಟ್ಸ್​ ಸಹ ಹಾಕುತ್ತಿದ್ದಾರೆ. ಆದರೆ ಇದರ ಜೊತೆಗೆ ಈ ಜೋಡಿಯ ನಡುವಿನ ವಯಸ್ಸಿನ ಅಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ವೈರಲ್ ಆಗುತ್ತಿದೆ.

ಸೋನಾಕ್ಷಿ ಸಿನ್ಹಾ ಅವರಿಗಿಂತ ಜಹೀರ್ ಎರಡು ವರ್ಷ ಚಿಕ್ಕವರು. ಸೋನಾಕ್ಷಿಗೆ ಸದ್ಯ 37 ವರ್ಷ. ಜಹೀರ್‌ಗೆ 35 ವರ್ಷ. ಈ ವರ್ಷ ಡಿಸೆಂಬರ್ 10 ರಂದು ಜಹೀರ್ 36 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅದೇನೇ ಇರಲಿ, ನೆಟ್ಟಿಗರು ಈ ಜೋಡಿಯ ಅಂತರ್ಧರ್ಮೀಯ ವಿವಾಹಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾ ಮಂಡಿ’ ಸಿನಿಮಾದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net