

ನವದೆಹಲಿ: ನೀವು ಮನೆಯಲ್ಲೇ ಕುಳಿತು 5 ಲಕ್ಷ ರೂ. ಸಂಪಾದಿಸಬೇಕೆ? ಹಾಗಾದರೆ, ನಿಮಗಿದು ಸುವರ್ಣಾವಕಾಶವೇ ಸರಿ. ನಿಮ್ಮ ಬಳಿ ಕೇವಲ 2 ರೂಪಾಯಿ ( Two Rupee ) ನೋಟಿದ್ದರೆ ಇದು ಸಾಧ್ಯವಾಗಲಿದೆ. ನಿಮಗಿದು ಅಚ್ಚರಿ ಎನಿಸಿದರೂ ಖಂಡಿತವಾಗಿಯು ಇದು ನಿಜ. ನಿಮ್ಮ ಬಳಿ ವಿಶೇಷವಾದ 2 ರೂಪಾಯಿ ನೋಟಿದ್ದರೆ ಈ ರೀತಿ ಮಾಡಿ.
ಹೌದು, ನಿಮ್ಮ ಬಳಿ ಹಳೆಯ ಎರಡು ರೂಪಾಯಿ ನೋಟು ಇದ್ದರೆ ಅದನ್ನು ಬಳಸಿ 5 ಲಕ್ಷ ಗಳಿಸಬಹುದು. ಕೆಲ ಹಳೆಯ ವಸ್ತುಳಿಗೆ ಈ ಆಧುನಿಕ ಜಗತ್ತಿನಲ್ಲಿ ತುಂಬಾ ಬೇಡಿಕೆ ಇದೆ. ಅದರಲ್ಲೂ ಹಳೆಯ ನೋಟುಗಳಿಗಂತೂ ಎಲ್ಲಿಲ್ಲದ ಬೇಡಿಕೆ ಇದೆ. ನಮ್ಮಲ್ಲಿರುವ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲೆಂದೇ ಕೆಲವು ವೆಬ್ಸೈಟ್ಗಳಿವೆ. ಅವುಗಳಲ್ಲಿ ಹಳೆಯ ನಾಣ್ಯ ಮತ್ತು ನೋಟನ್ನು ಮಾರಿ ಹಣ ಪಡೆಯಬಹುದು. ಆದರೆ, ಅದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ನೀವೇನಾದರೂ ತುಂಬಾ ಅದೃಷ್ಟವಂತರಾಗಿದ್ದರೆ, ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷಾಧಿಪತಿ ಆಗಬಹುದು. ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದರೆ ನಿಮಗೂ ಆ ಅವಕಾಶವಿದೆ. ನೀವು ಎಲ್ಲಿಯೂ ಪ್ರಯಾಣಿಸದೆ ಕುಳಿತಲ್ಲೇ ಹಳೆಯ ನೋಟನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಅಂದರೆ, ಆನ್ಲೈನ್ನಲ್ಲಿ ನೋಟುಗಳನ್ನು ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್, ಕಾಯಿನ್ ಬಜಾರ್, ಕ್ವಿಕರ್, Pinterest, OLX ಇತ್ಯಾದಿ ವೆಬ್ಸೈಟ್ಗಳಲ್ಲಿ ಹಳೆಯ ನೋಟುಗಳನ್ನು ಮಾರಾಟ ಮಾಡಬಹುದು.
ಜಾಗತಿಕ ಮಾರುಕಟ್ಟೆಯಲ್ಲಿ 2 ರೂ.ನೋಟಿಗೆ ಬೇಡಿಕೆ ಹೆಚ್ಚಿರುವುದರಿಂದ ಜನರು 5 ಲಕ್ಷದವರೆಗೂ ಹಣ ಕೊಟ್ಟು ಖರೀದಿಸಲು ಆಸಕ್ತಿ ತೋರಿದ್ದಾರೆ. ಆದರೆ, 2 ರೂಪಾಯಿ ನೋಟನ್ನು ಮಾರಾಟ ಮಾಡುವ ಮುನ್ನ ಕೆಲವು ಷರತ್ತುಗಳನ್ನು ಪೂರೈಸಬೇಕು. ಆ ಷರತ್ತುಗಳೇನೆಂದರೆ, ನೋಟಿನಲ್ಲಿರುವ ಕ್ರಮಸಂಖ್ಯೆಯಲ್ಲಿ 786 ನಂಬರ್ ಇರಬೇಕು. ಇಸ್ಲಾಂ ಧರ್ಮದಲ್ಲಿ 786 ಸಂಖ್ಯೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಸಂಖ್ಯೆಯ ನೋಟಿದ್ದರೆ ಕೆಲವರು ಭಾರಿ ಹಣವನ್ನು ಕೊಟ್ಟು ಖರೀದಿ ಮಾಡುತ್ತಾರೆ.
ಇದಿಷ್ಟೇ ಅಲ್ಲದೆ, ನೋಟಿನ ಬಣ್ಣ ಗುಲಾಬಿ ಬಣ್ಣದ್ದಾಗಿರಬೇಕು ಮತ್ತು ಆರ್ಬಿಐ ಮಾಜಿ ಗವರ್ನರ್ ಮನಮೋಹನ್ ಸಿಂಗ್ ಅವರ ಸಹಿಯನ್ನು ಹೊಂದಿರಬೇಕು. ಈ ಎಲ್ಲ ಷರತ್ತುಗಳನ್ನು ನಿಮ್ಮ ನೋಟು ಪೂರೈಸುವುದಾದರೆ, OLX ವೆಬ್ಸೈಟ್ ತೆರೆದು, ನೀವು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಬಳಿಕ ನೋಟಿನ ಎರಡೂ ಬದಿಯ ಫೋಟೋ ತೆಗೆದು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನೀಡಿದರೆ, ಹೇಳಿದ ಕರೆನ್ಸಿ ನೋಟು ಅಗತ್ಯವಿರುವವರು ನಿಮ್ಮನ್ನು ಸಂಪರ್ಕಿಸಿ, ಹಣ ಕೊಟ್ಟು ಖರೀದಿ ಮಾಡುತ್ತಾರೆ. (ಏಜೆನ್ಸೀಸ್)