ಅಗತ್ಯವಿಲ್ಲದಿದ್ದರೂ ಕಂಡ-ಕಂಡದ್ದನ್ನು ಕೊಳ್ಳುವ ಚಟವಿದೆಯೇ? ಜೇಬು ಖಾಲಿಯಾಗೋದನ್ನು ತಡೆಯುವುದು ಹೇಗೆ? | Impulse Buying

ಬೇಕಿಲ್ಲದಿದ್ದರೂ ಆಕರ್ಷಕ ವಸ್ತುಗಳನ್ನು ನೋಡಿದ ತಕ್ಷಣ ಕೊಳ್ಳುವ ಅಭ್ಯಾಸದಿಂದ ಹಣ ಪೋಲಾಗುತ್ತಿದೆಯೇ? ಇದಕ್ಕೆ ಕಾರಣಗಳೇನು ಮತ್ತು ಇದನ್ನು ತಡೆಯುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
The habit of buying unnecessary items
ಅವಶ್ಯಕತೆ ಇಲ್ಲದಿದ್ದರೂ ವಸ್ತುಗಳನ್ನು ಕೊಳ್ಳುವ ಅಭ್ಯಾಸವಿದೆಯೇ?
Published on: 

Smart Shopping: ನಮಗೆ ಯಾವ ವಸ್ತುವಿನ ಅಗತ್ಯವೂ ಇರುವುದಿಲ್ಲ, ಆದರೂ ಅಂಗಡಿಗಳಲ್ಲಿ ಅಥವಾ ಮೊಬೈಲ್‌ನಲ್ಲಿ ಆನ್‌ಲೈನ್ ನೋಡ್ತಾ ಇದ್ದಾಗ ಅದನ್ನ ನೋಡಿದ ತಕ್ಷಣ ಕೊಳ್ಳಬೇಕು ಅನ್ನೋ ಹುಚ್ಚು ನಿಮ್ಮಲ್ಲೂ ಇದೆಯೇ? ಇದನ್ನು ವಿಜ್ಞಾನದಲ್ಲಿ 'ಇಂಪಲ್ಸ್ ಬೈಯಿಂಗ್' (Impulse Buying) ಅಂತ ಕರೀತಾರೆ.

ನಮಗೆ ಗೊತ್ತಿಲ್ಲದಂಗೆ ನಮ್ಮ ಮನಸ್ಸು ಮತ್ತು ಭಾವನೆಗಳು ಕೆಲವು ಕಾರಣಗಳಿಂದ ನಮ್ಮಿಂದ ಹೀಗೆಲ್ಲಾ ಮಾಡಿಸುತ್ತವೆ. ಆ ಅಸಲಿ ಕಾರಣಗಳು ಯಾವುವು ಮತ್ತು ಇದನ್ನು ತಡೆಯೋದು ಹೇಗೆ ಅಂತ ಇಲ್ಲಿ ನೋಡೋಣ ಬನ್ನಿ.

1.ಆಕರ್ಷಕ ವಿನ್ಯಾಸ ಮತ್ತು ಬಣ್ಣಗಳು

ಮನುಷ್ಯನ ಮೆದುಳು ಸಹಜವಾಗಿಯೇ ಅಂದವಾದ ಮತ್ತು ಹೊಳೆಯುವ ವಸ್ತುಗಳಿಗೆ ಬೇಗನೆ ಮರುಳಾಗುತ್ತದೆ. ವಸ್ತುಗಳ ಪ್ಯಾಕಿಂಗ್, ಡಿಸೈನ್ ಅಥವಾ ಅಂಗಡಿಯಲ್ಲಿ ಜೋಡಿಸಿಟ್ಟಿರೋ ಸ್ಟೈಲ್ ಕಣ್ಣಿಗೆ ಬಿದ್ದ ಕೂಡಲೇ ಮೆದುಳಿನಲ್ಲಿ ಒಂದು ತರಹದ ಉತ್ಸಾಹ ಹುಟ್ಟಿಕೊಳ್ಳುತ್ತದೆ. ಆ ಕ್ಷಣದ ಖುಷಿಗೋಸ್ಕರ ನಾವು ಆ ವಸ್ತುವನ್ನು ಕೊಂಡುಬಿಡುತ್ತೇವೆ.

2.ಭಾವನಾತ್ಮಕ ಸಂಪರ್ಕ (Emotional Buying)

ಸಾಕಷ್ಟು ಬಾರಿ ನಾವು ಬೇಸರದಲ್ಲಿದ್ದಾಗ, ಸಖತ್ ಟೆನ್ಷನ್‌ನಲ್ಲಿದ್ದಾಗ ಅಥವಾ ಅತಿ ಖುಷಿಯಿದ್ದಾಗ ಶಾಪಿಂಗ್ ಮಾಡ್ತೀವಿ. ಹೊಸ ವಸ್ತು ಕೊಂಡುಕೊಂಡರೆ ನಮ್ಮ ಮೂಡ್ ಚೇಂಜ್ ಆಗುತ್ತೆ. ವಸ್ತುವನ್ನು ನೋಡಿದ ತಕ್ಷಣ, "ಇದನ್ನ ಕೊಂಡುಕೊಂಡ್ರೆ ನಾನು ಇನ್ನು ಹೆಚ್ಚು ಖುಷಿಯಾಗಿರಬಹುದು" ಅನ್ನೋ ಭ್ರಮೆ ಹುಟ್ಟುತ್ತದೆ.

Unnecessary spending of money
ಬೇಕಿಲ್ಲದಿದ್ದರೂ ಕೈಯಲ್ಲಿರೋ ದುಡ್ಡು ಖರ್ಚಾಗ್ತಿದೆಯೇ?

3.ಕೈ ತಪ್ಪಿಹೋಗುತ್ತೆ ಅನ್ನೋ ಭಯ (FOMO)

ಅಂಗಡಿಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ‘ಇದೇ ಕೊನೆಯ ದಿನ’ ಅಥವಾ ‘ಸೀಮಿತ ಆಫರ್​’ (Limited Stock) ಅಂತ ಬೋರ್ಡ್ ಹಾಕಿರೋದನ್ನ ನೋಡಿದ ಕೂಡಲೇ, ‘ಈಗಲೇ ಕೊಳ್ಳಲಿಲ್ಲ ಅಂದ್ರೆ ಆಮೇಲೆ ಸಿಗಲ್ಲ’ ಅಥವಾ ‘ಬೇರೆಯವರು ತಗೊಂಡು ಹೋಗ್ತಾರೆ’ ಅನ್ನೋ ಸಣ್ಣ ಭಯ ಶುರುವಾಗುತ್ತದೆ. ಈ ಆತಂಕವೇ ನಮಗೆ ಬೇಕಿಲ್ಲದಿದ್ದರೂ ಹಣ ಖರ್ಚು ಮಾಡೋಕೆ ದೂಡುತ್ತದೆ.

4.ಕಲ್ಪನಾ ಲೋಕದಲ್ಲಿ ಬದುಕುವುದು

ಯಾವುದಾದರೂ ಒಂದು ವಸ್ತು ಚೆಂದ ಕಂಡಾಗ, ‘ನಾವು ಮುಂದೊಂದು ದಿನ ಹೀಗೆ ಇರ್ತೀವಿ’ ಅಂತ ಅದಕ್ಕೆ ತಕ್ಕಂತೆ ಕಲ್ಪನೆ ಮಾಡ್ಕೊತೀವಿ. ಉದಾಹರಣೆಗೆ: ಸುಂದರವಾದ ಡೈರಿ ಕಂಡರೆ ‘ಇನ್ನುಮುಂದೆ ಪ್ರತಿದಿನ ಡೈರಿ ಬರೆಯುತ್ತೇನೆ’ ಅಂತ ಅಂದುಕೊಳ್ಳುವುದು, ಅಥವಾ ಫಿಟ್‌ನೆಸ್ ಬ್ಯಾಂಡ್ ಕಂಡರೆ ‘ಇಂದಿನಿಂದಲೇ ಪ್ರತಿದಿನ ಓಡೋಕೆ ಹೋಗ್ತೀನಿ’ ಅಂತ ಯೋಚಿಸುವುದು. ನಾವು ಆ ವಸ್ತುವನ್ನು ಇಷ್ಟಪಡುವುದಕ್ಕಿಂತ, ಆ ವಸ್ತು ನಮ್ಮ ಬಳಿ ಇದ್ದರೆ ನಾವು ಹೆಂಗೆ ಕಾಣಬಹುದು ಅನ್ನೋದನ್ನು ಹೆಚ್ಚು ಪ್ರೀತಿಸುತ್ತೇವೆ.

5.ಸಾಮಾಜಿಕ ಪ್ರತಿಷ್ಠೆ ಮತ್ತು ಟ್ರೆಂಡ್

ಸಾಮಾಜಿಕ ಜಾಲತಾಣಗಳಲ್ಲಿ (ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಇತ್ಯಾದಿ) ಯಾವುದೋ ಒಂದು ವಸ್ತು ಟ್ರೆಂಡ್‌ ಆಗಿದೆ ಅಂದ್ರೆ ಸಾಕು, ಅದನ್ನ ನಾವು ಹೊಂದಿದ್ರೆ ನಮ್ಮ ಗೌರವ ಹೆಚ್ಚಾಗುತ್ತದೆ ಅಥವಾ ನಾವು ಬಹಳ ಮಾಡರ್ನ್ ಆಗಿ ಕಾಣುತ್ತೇವೆ ಅಂತ ಅಂದುಕೊಂಡು ಮುಗಿಬಿದ್ದು ಕೊಳ್ಳುತ್ತೇವೆ.

ಇದನ್ನೂ ಓದಿ: Kriti Sanon : ಫ್ಯಾಷನ್ ಶೋನಲ್ಲಿ ಕೃತಿ ಸನೋನ್ ರಾಯಲ್ ವಾಕ್: ಕಪ್ಪು ಲೆಹೆಂಗಾದಲ್ಲಿ ನಟಿಯ ಹಾಟ್ ಲುಕ್!

ಇದಕ್ಕೆಲ್ಲಾ ಪರಿಹಾರ ಏನು?

ಯಾವುದೇ ಚಂದದ ವಸ್ತು ಕಂಡ ತಕ್ಷಣ ೨೪ ಗಂಟೆಗಳ ನಿಯಮವನ್ನು ಬಳಸಿ. ಅಂದರೆ, ಆ ವಸ್ತುವನ್ನು ತಕ್ಷಣ ಆನ್‌ಲೈನ್ ಕಾರ್ಟ್‌ಗೆ ಹಾಕಿ ಬಿಡಿ ಅಥವಾ ಅಂಗಡಿಯಲ್ಲಿದ್ದರೆ ಹಾಗೇ ಬಿಟ್ಟು ಒಂದು ದಿನ (24-Hour Rule) ಕಾದು ನೋಡಿ. ಮಾರನೇ ದಿನವೂ ನಿಮಗೆ ಆ ವಸ್ತುವಿನ ಅವಶ್ಯಕತೆ ನಿಜವಾಗಿಯೂ ಇದೆ ಅಂದ್ರೆ ಮಾತ್ರ ಕೊಳ್ಳಿ. ಹೆಚ್ಚಿನ ಸಲ ಮಾರನೇ ದಿನ ಆ ವಸ್ತುವಿನ ಮೇಲಿನ ವ್ಯಾಮೋಹ ತಾನಾಗಿಯೇ ಮಾಯವಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net