Kriti Sanon : ಫ್ಯಾಷನ್ ಶೋನಲ್ಲಿ ಕೃತಿ ಸನೋನ್ ರಾಯಲ್ ವಾಕ್: ಕಪ್ಪು ಲೆಹೆಂಗಾದಲ್ಲಿ ನಟಿಯ ಹಾಟ್ ಲುಕ್!

ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್ ಮತ್ತು ರ‍್ಯಾಂಪ್ ವಾಕ್‌ನಿಂದ ಗಮನ ಸೆಳೆಯುವ ಬಾಲಿವುಡ್ ಬ್ಯೂಟಿ ಕೃತಿ ಸನೋನ್, ದೆಹಲಿಯಲ್ಲಿ ನಡೆದ ಅಭಿನವ್ ಮಿಶ್ರಾ ಅವರ 'ಇಂಟು ದಿ ವೈಲ್ಡ್ 2026' ಫ್ಯಾಷನ್ ಶೋನಲ್ಲಿ ಷೋಸ್ಟಾಪರ್ ಆಗಿ ಹೆಜ್ಜೆ ಹಾಕಿದ್ದಾರೆ.
Kriti Sanon shines at a fashion show in Delhi
ದೆಹಲಿಯ ಫ್ಯಾಷನ್ ಶೋನಲ್ಲಿ ಷೋಸ್ಟಾಪರ್ ಆಗಿ ಮಿಂಚಿದ ಕೃತಿ ಸನೋನ್
Published on: 

Delhi Fashion Show: ದೆಹಲಿಯಲ್ಲಿ ನಡೆದ ಫ್ಯಾಷನ್ ಶೋನಲ್ಲಿ ನಟಿ ಕೃತಿ ಸನೋನ್ ತಮ್ಮ ರಾಯಲ್ ಲುಕ್ ಮೂಲಕ ಮೆರೆದಿದ್ದಾರೆ. ಪ್ರಸಿದ್ಧ ಡಿಸೈನರ್ ಅಭಿನವ್ ಮಿಶ್ರಾ ಅವರ ‘ಇಂಟು ದಿ ವೈಲ್ಡ್ 2026’ ಕಲೆಕ್ಷನ್‌ಗೆ ಕೃತಿ ಷೋಸ್ಟಾಪರ್ ಆಗಿ ಮಿಂಚಿದ್ದಾರೆ.

ನವದೆಹಲಿಯ ಛತ್ತರ್‌ಪುರದ ಹಸಿರು ಪರಿಸರದ ನಡುವೆ ಹೊರಾಂಗಣದಲ್ಲಿ ಈ ಅದ್ದೂರಿ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಮುಂಬರುವ ಹಬ್ಬದ ಋತುವಿಗೆ ಸೂಕ್ತವಾಗುವಂತೆ ಸಾಂಪ್ರದಾಯಿಕ ಭಾರತೀಯ ಕಲಾತ್ಮಕತೆ ಹಾಗೂ ಆಧುನಿಕ ಶೈಲಿಯನ್ನು ಸಂಯೋಜಿಸಿ ಈ ಶೋ ವಿನ್ಯಾಸಗೊಳಿಸಲಾಗಿತ್ತು.

ಕಪ್ಪು ಬಣ್ಣದ ಮಿರರ್-ವರ್ಕ್ ಲೆಹೆಂಗಾದಲ್ಲಿ ಕೃತಿ ಮಿಂಚಿಂಗ್​

ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ ಕೃತಿ ಸನೋನ್, ನಿಯೋ-ಟೆಕ್ ಫ್ಯಾಬ್ರಿಕ್‌ನಿಂದ ತಯಾರಿಸಿದ ಕಪ್ಪು ಬಣ್ಣದ ಮಿರರ್-ವರ್ಕ್ ಲೆಹೆಂಗಾದಲ್ಲಿ ಕಂಗೊಳಿಸಿದರು. ಈ ಲೆಹೆಂಗಾ ಸ್ಕರ್ಟ್‌ನಲ್ಲಿ ಅತ್ಯಾಕರ್ಷಕ ಕೈ ಕಸೂತಿ, ಡಿಸೈನರ್ ಅವರ ಸಿಗ್ನೇಚರ್ ಮಿರರ್ ಕೆಲಸ ಹಾಗೂ ಮೆಟಾಲಿಕ್ ವಿನ್ಯಾಸಗಳಿದ್ದವು. ಇದರೊಂದಿಗೆ ಕುದುರೆಯ ಮೋಟಿಫ್‌ಗಳ (Horse Motifs) ಚಿತ್ರ ಉಡುಪಿಗೆ ಮತ್ತಷ್ಟು ಮೆರುಗು ನೀಡಿತ್ತು.

Kriti Sanon's Fashion Magic
ಕೃತಿ ಸನೋನ್ ಫ್ಯಾಷನ್ ಜಾದೂ

ಇದಕ್ಕೆ ಜೋಡಿಯಾಗಿ ಕೃತಿ, ಆಳವಾದ ನೆಕ್‌ಲೈನ್ (Plunging Neckline) ಹೊಂದಿದ್ದ ಶೈನಿಯಾದ ಸಿಲ್ವರ್ ಬ್ಲೌಸ್ ಧರಿಸಿದ್ದರು. ಹೆಗಲ ಮೇಲೆ ಶೋಲ್ಡರ್ ಕೇಪ್ ಮಾದರಿಯಲ್ಲಿ ಹಾಕಿಕೊಂಡಿದ್ದ ಕಪ್ಪು ಪಾರದರ್ಶಕ (Sheer) ದುಪಟ್ಟಾ ನೆಲ ಮುಟ್ಟುತ್ತಾ ಸಾಗುತ್ತಿದ್ದು, ರ‍್ಯಾಂಪ್ ವಾಕ್ ವೇಳೆ ದೇವತೆಯಂತೆ ಕಂಗೊಳಿಸುವಂತೆ ಮಾಡಿತ್ತು.

ಆಕರ್ಷಕ ಜ್ಯುವೆಲ್ಲರಿ ಮತ್ತು ಮೇಕಪ್

ಹಸಿರು ಕಲ್ಲುಗಳ ಗೋಲ್ಡ್ ಚೋಕರ್, ಮ್ಯಾಚಿಂಗ್ ಆಭರಣಗಳು ಹಾಗೂ ಆಕರ್ಷಕ ಮೇಕಪ್ ಶೈಲಿಯೊಂದಿಗೆ ಕೃತಿ ಸನೋನ್ ಮಿರವಣಿಗೆಯಂತೆ ಕಂಗೊಳಿಸಿದರು. ಸ್ಮೋಕಿ ಐಸ್ ಮತ್ತು ಓಪನ್ ಹೇರ್ ಸ್ಟೈಲ್ ಅವರ ಲುಕ್‌ಗೆ ಅಂದ ತಂದಿತ್ತು.

Kriti's elegant look in a black lehenga
ಕಪ್ಪು ಲೆಹೆಂಗಾದಲ್ಲಿ ಕೃತಿ ಎಲಿಗಂಟ್ ಲುಕ್

ಇದನ್ನೂ ಓದಿ: ಅಳಿವಿನಂಚಿನ ತಳಿಗೆ ಹೊಸ ಜೀವ: ಕಳ್ಳರ ಸಂಚಿನಿಂದ ಪಾರಾಗಿ ಕಾಡಿನಲ್ಲಿ ಮಗುವಿಗೆ ಜನ್ಮ ನೀಡಿದ ಹೆಣ್ಣು ಗೊರಿಲ್ಲಾ! | Lulingu Gorilla

ಪ್ರಕೃತಿಯ ಮಡಿಲಲ್ಲಿ ಆಯೋಜಿಸಲಾಗಿದ್ದ ಈ ಶೋನಲ್ಲಿ ಲೆಹೆಂಗಾಗಳ ಜತೆಗೆ ಟ್ರೆಂಚ್ ಕೋಟ್‌ಗಳು, ವೈಡ್-ಲೆಗ್ ಟ್ರೌಸರ್ಸ್‌ ಮತ್ತು ಕಾಫ್ಟಾನ್‌ಗಳಂತಹ ಹೊಸ ಟ್ರೆಂಡ್‌ನ ಉಡುಪುಗಳು ಪ್ರದರ್ಶನಗೊಂಡವು. ಝರ್ದೋಜಿ ಮತ್ತು ಲೇಸರ್-ಕಟ್ ಕೆಲಸಗಳ ಮೂಲಕ ಸಾಂಪ್ರದಾಯಿಕ ಕಲೆಗೆ ಮಾಡರ್ನ್ ಸ್ಪರ್ಶ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net