ಕಾರಿನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಟ್ಟು ಎಲ್ಲಿಯೋ ಹೋಗಬೇಡಿ; ಇಲ್ಲೊಂದು ಕಾರಿನಲ್ಲಿ ಬೆಲೆ ಬಾಳುವ ವಸ್ತುಗಳು ಮಾಯ

car lift
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಶಾಪಿಂಗ್ ಮಾಲ್ ಪಾರ್ಕಿಂಗ್ ಸ್ಥಳದಲ್ಲಿ ಕಾರಿನ ಗಾಜು ಒಡೆದು ದುಷ್ಕರ್ಮಿಗಳು 50 ಸಾವಿರ ರೂ. ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ಬೊಮ್ಮನಹಳ್ಳಿ ನಿವಾಸಿ ಶಮಿಕ್ ಮೈಟಿ ಎಂಬುವರು ಭಾನುವಾರ ರಾತ್ರಿ ವಿದೇಶದಿಂದ ಬಂದಿದ್ದ ಸಹೋದರಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆತರಲು ಕುಟುಂಬದ ಸದಸ್ಯರೊಂದಿಗೆ ಕಾರಿನಲ್ಲಿ ತೆರಳಿದ್ದರು.

ವಿಮಾನ ನಿಲ್ದಾಣದಲ್ಲಿ ಸಹೋದರಿಯನ್ನು ಕರೆದುಕೊಂಡು ಮನೆಗೆ ಕಡೆಗೆ ಬರುವಾಗ ಸೈಕಲ್ ಖರೀದಿಸುವ ಸಲುವಾಗಿ ಚಿಕ್ಕಜಾಲದ ಡೆಕಾಥ್ಲಾನ್ ಮಳಿಗೆಗೆ ತೆರಳಿದ್ದರು. ಕಾರನ್ನು ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಒಳಗೆ ಹೋಗಿದ್ದಾರೆ.

ರಾತ್ರಿ 9.30ಕ್ಕೆ ವಾಪಸ್ ಕಾರಿನ ಬಳಿ ಬಂದಾಗ ಹಿಂಬದಿ ಬಾಗಿಲ ಗಾಜು ಒಡೆದು 50 ಸಾವಿರ ರೂ. ನಗದು, ಆ್ಯಪಲ್ ಲ್ಯಾಪ್‌ಟಾಪ್, ಮೊಬೈಲ್, ಟ್ರಾಲಿ ಬ್ಯಾಗ್, ಶೂಗಳು ಸೇರಿ 5.65 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಡೆಕಾಥ್ಲಾನ್ ಮಳಿಗೆಯ ಪಾರ್ಕಿಂಗ್ ಸ್ಥಳ ಮತ್ತು ಸುತ್ತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net