25 ಕೋಟಿ ರೂ. ಓಣಂ ಬಂಪರ್​ ಲಾಟರಿ ಗೆದ್ದವರಿಗೆ ಬಿಗ್​ ಶಾಕ್​! ಹಣ ಸಿಗುವುದೇ ಅನುಮಾನ, ಕಾರಣ ಹೀಗಿದೆ….

Kerala Lottery
Published on

ತಿರುವನಂತಪುರಂ: ಈ ವರ್ಷ 25 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದವರಿಗೆ ಬಹುಮಾನದ ಹಣವನ್ನು ನೀಡಬಾರದು. ಅದನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ತಮಿಳುನಾಡು ಮೂಲದವರೊಬ್ಬರು ಕೇರಳ ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದಾರೆ.

ತಮಿಳುನಾಡಿನ ಬೃಂದಾ ಚಾರಿಟೇಬಲ್ ಟ್ರಸ್ಟ್ ಮಾಲೀಕರು ದೂರು ದಾಖಲಿಸಿದ್ದಾರೆ. ತಮಿಳುನಾಡಿನಲ್ಲಿ ಕಾಳಸಂತೆಯಲ್ಲಿ ಮಾರಾಟವಾದ ಟಿಕೆಟ್‌ಗೆ ಪ್ರಥಮ ಬಹುಮಾನ ಬಂದಿದ್ದು, ಕಾನೂನಿನ ಪ್ರಕಾರ ಕೇರಳ ರಾಜ್ಯದ ಲಾಟರಿಗಳನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಬಾರದು ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಲಾಟರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ. ಕೇರಳದ ಬಾವಾ ಏಜೆನ್ಸಿಯಿಂದ ಕಮಿಷನ್ ಆಧಾರದ ಮೇಲೆ ಪಡೆದ ಟಿಕೆಟ್‌ಗಳನ್ನು ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಾರಾಟ ಮಾಡಲಾಗಿದೆ. ಇದೀಗ ಅದಕ್ಕೆ ಪ್ರಥಮ ಬಹುಮಾನ ಬಂದಿದೆ. ಬಹುಮಾನದ ಹಣವನ್ನು ಧರ್ಮಕಾರ್ಯಕ್ಕೆ ಬಳಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

ಬಹುಮಾನ ವಿಜೇತರ ಬಗ್ಗೆ ತನಿಖೆ ನಡೆಸಲು ಲಾಟರಿ ಇಲಾಖೆಯಲ್ಲಿ ವಿಶೇಷ ಸಮಿತಿಯಿದ್ದು, ಎಲ್ಲ ವಿಧಾನಗಳನ್ನು ಅನುಸರಿಸಿದ ನಂತರವೇ ಬಹುಮಾನದ ಹಣವನ್ನು ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಓಣಂ ಬಂಪರ್‌ನ ಮೊದಲ ಬಹುಮಾನವನ್ನು ಕೋಯಿಕ್ಕೋಡ್‌ನ ಪಾಳಯಂನಲ್ಲಿರುವ ಬಾವಾ ಏಜೆನ್ಸಿಯಿಂದ ಮಾರಾಟ ಮಾಡಲಾದ TE 230662 ಟಿಕೆಟ್ ಪಡೆದುಕೊಂಡಿದೆ.

ತಮಿಳುನಾಡಿನ ತಿರುಪುರ್ ಮೂಲದ ಪಾಂಡ್ಯರಾಜ್, ಕುಪ್ಪುಸ್ವಾಮಿ ಮತ್ತು ಕೊಯಮತ್ತೂರು ಮೂಲದ ಸ್ವಾಮಿನಾಥನ್ ಮತ್ತು ರಾಮಸ್ವಾಮಿ ಜಂಟಿಯಾಗಿ ಲಾಟರಿ ಖರೀದಿಸಿದ್ದರು. ಅವರಿ ಪ್ರಥಮ ಬಹುಮಾನವಾಗಿ 25 ಕೋಟಿ ರೂಪಾಯಿ ಬಂದಿದ್ದು, ಕಾಳಸಂತೆಯಲ್ಲಿ ಟಿಕೆಟ್​ ಖರೀದಿ ಮಾಡಿರುವ ಆರೋಪ ಇರುವ ಹಿನ್ನೆಲೆಯಲ್ಲಿ ಕಂಟಕ ಎದುರಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಹಣ ಸಿಗುವುದ ಅನುಮಾನವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net