

Tickets : ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಕ್ಕಳಿಗೆ ಆಫ್ ಟಿಕೆಟ್ ಅನ್ನು ಕಂಡಕ್ಟರ್ ತೆಗೆದುಕೊಳ್ಳೋದು ಸಾಮಾನ್ಯವಾಗಿ ಎಲ್ಲರು ಗಮನಿಸಿರುತ್ತೆವೆ.ಆದರೆ, ಯಾವ ವಯಸ್ಸಿಗೆ ಎಷ್ಟು? ಟಿಕೆಟ್ ಕೊಳ್ಳಬೇಕು ಎಂಬುದು ಸೇರಿ ವಿಮಾನ, ರೈಲುಗಳಲ್ಲಿ ಮಕ್ಕಳಿಗೆ ಟಿಕೆಟ್ ಕೊಳ್ಳಬೇಕೆ ಎಂಬುದು ಬಹತೇಕರಿಗೆ ಗೊತ್ತಿಲ್ಲ. ಇದೀಗ ಯಾವ ವಯಸ್ಸಿನ ಮಕ್ಕಳಿಗೆ ಪ್ರಯಾಣದ ದರ(ಟಿಕೆಟ್) ಇದೆ ಎಂಬುದು ತಿಳಿಯೋಣ.
ಭಾರತದಲ್ಲಿ ದಿನನಿತ್ಯ ಬಸ್ಸು, ರೈಲು ಹಾಗೂ ವಿಮಾನ ಸೇರಿದಂತೆ ಇತರ ಸಾರಿಗೆಗಳ ಸಹಾಯದಿಂದ ಕೋಟ್ಯಾಂತರ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುತ್ತಾರೆ. ಈ ಕೋಟ್ಯಾಂತರ ಪ್ರಯಾಣಿಕರಲ್ಲಿ ಪಾಲಕರ ಜತೆ ಲಕ್ಷಾಂತರ ಚಿಕ್ಕ-ಚಿಕ್ಕ ಮಕ್ಕಳು ಕೂಡ ಪ್ರಯಾಣಸುತ್ತವೆ. ಚಿಕ್ಕ ಮಕ್ಕಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. ಸರ್ಕಾರ ಮತ್ತು ಎರ್ಲೈನ್ಸ್ ಮಕ್ಕಳ ಪ್ರಯಾಣ ಶುಲ್ಕ ದರ ವಿಚಾರದಲ್ಲಿ ನಿಯಮಗಳೇನು ಹೇಳುತ್ತವೆ ನೋಡೋಣ.
ವಿಮಾನ ಪ್ರಯಾಣ ದರ
ಒಂದ ಚಿಕ್ಕ ಮಗು ವಿಮಾನದಲ್ಲಿ ಪ್ರಯಾಣದಲ್ಲಿ ಮಾಡಿದರೆ 2 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕ(ಟಿಕೆಟ್ ದರ) ವಿಧಿಸುದಿಲ್ಲ. ಸಾಮಾನ್ಯವಾಗಿ ಎಲ್ಲಾ ವಿಮಾನಗಳಲ್ಲಿ ಬಹತೇಕ ಇದೇ ನಿಯಮವಿರುತ್ತದೆ. ಕೆಲ ವಿಮಾಗಳಲ್ಲಿ ಆಫರ್ ಸಲುವಾಗಿ ಮೂರರಿಂದ ನಾಲ್ಕು ವರ್ಷದ ವರೆಗೆ ಶುಲ್ಕ ವಿಧಿಸಲ್ಲ.
ರೈಲು ಪ್ರಯಾಣ ದರ
ರೈಲಿನ ವಿಚಾರಕ್ಕೆ ಬರುವುದಾರೆ ಕುಟುಂಬದ ಜತೆಯಲ್ಲಿರುವ ಮಗುವಿಗೆ 5 ವರ್ಷದೊಳಗೆ ಮಗುವಿಗೆ ಟಿಕೆಟ್ ಖರೀಸುವ ಅವಶ್ಯಕತೆ ಇಲ್ಲ. ಪ್ರತ್ಯೇಕ ಅಸನ(ಸೀಟ್) ಮಗುವಿಗೆ ಬೇಕಿದ್ರೆ ಮಾತ್ರ ಆಫ್ ಟಿಕೆಟ್ ಖರೀದಿಸಬೇಕುನ ಎಂದು ರೈಲ್ವೆ ನಿಯಮ ಹೇಳುತ್ತದೆ. ಮಗುವಿಗೆ 12 ವರ್ಷ ಮೆಲ್ಪಟ್ಟಿದ್ದರೆ ಮಾತ್ರ ಪೂರ್ಣ ಟಿಕೆಟ್ ಕೊಳ್ಳಬೇಕು.
ಬಸ್ ಪ್ರಯಾಣ ದರ
ಸರ್ಕಾರಿ ಮತ್ತು ಖಾಸಗಿ ಬಸ್ಗಳ ಟಿಕೆಟ್ ವಿಷಯದಲ್ಲಿ ವಿಭಿನ್ನ ನಿಯಮಗಳು ಇರಬಹುದು. ಸಾಮಾನ್ಯವಾಗಿ 5 ವರ್ಷದವರೆಗಿನ ಮಕ್ಕಳಿಗೆ ಆಸನಗಳಿಲ್ಲದಿದ್ದರೆ, ಪ್ರಯಾಣ ದರವನ್ನು ಪಾವತಿಸಲಾಗುವುದಿಲ್ಲ. ಆದರೆ, 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕಡಿಮೆ ಬೆಲೆಗೆ ಟಿಕೆಟ್ ನೀಡಲಾಗುತ್ತದೆ. ಪ್ರಯಾಣಿಸುವ ಮೊದಲು, ನೀವು ಈ ವಿಷಯವನ್ನು ವಿಮಾನಯಾನ ಸಂಸ್ಥೆ ಮತ್ತು ಬಸ್ ನಿರ್ವಾಹಕರೊಂದಿಗೆ ಪರಿಶೀಲಿಸಬೇಕು. ರೈಲು ನಿಯಮಗಳನ್ನು ಭಾರತೀಯ ರೈಲ್ವೆ ಜಾರಿಗೊಳಿಸುತ್ತಿದ್ದು. ಇದು ಎಲ್ಲಾ ರೈಲುಗಳಲ್ಲಿ ಅನ್ವಯಿಸುತ್ತದೆ.(ಏಜೆನ್ಸೀಸ್)