ರಾಣಿ ಅಬ್ಬಕ್ಕಾ ಚಿತ್ರದಲ್ಲಿ ನಟಿಸಲಿದ್ದಾರೆಯೇ ಅನುಷ್ಕಾ ಶೆಟ್ಟಿ? ಪೋಸ್ಟರ್​​ ವೈರಲ್​​

ra
Published on

ತೆಲುಗಿನ ಸೂಪರ್‌ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ ಶೆಟ್ಟಿ ನಂತರ ಯಶಸ್ಸಿನ ಮೆಟ್ಟಿಲಲ್ಲೇ ನಿಂತಿದ್ದಾರೆ. ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿ ಅಭಿಮಾನಿಗಳ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಾಕಷ್ಟು ಸ್ಟಾರ್‌ ಜೊತೆ ತೆರೆಹಂಚಿಕೊಂಡ ನಟಿ ರಾಜಮೌಳಿ ನಿರ್ದೇಶನದ 3 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರೋದು ವಿಶೇಷ.


ಕೊರೋನಾ ಬರುವ ಮುನ್ನ ಮಂಸೋರೆ ರಾಣಿ ಅಬ್ಬಕ್ಕ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಲು ರೆಡಿಯಾಗಿದ್ದರು. ಆದರೆ ಅಷ್ಟರಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಅದು ಆಗಲಿಲ್ಲ. ಆ ಚಿತ್ರದಲ್ಲಿ ಖ್ಯಾತ ನಟಿ, ಕಡಲೂರ ಚೆಲುವೆ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಅಬ್ಬಕ್ಕ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಪೋಸ್ಟರ್‌ ವೈರಲ್‌ ಆಗಿದ್ದು ಇದನ್ನು ನೋಡಿದ ನೆಟ್ಟಿಗರು ಕನ್‌ಫ್ಯೂಸ್ ಆಗಿದ್ದಾರೆ.


ಇದು ಮಂಸೋರೆ ನಿರ್ದೇಶನದ 'ರಾಣಿ ಅಬ್ಬಕ್ಕ' ಸಿನಿಮಾ ಪೋಸ್ಟರ್ ಅಲ್ಲ. ಇದು ಅನುಷ್ಕಾ ಶೆಟ್ಟಿ ಅಬ್ಬಕ್ಕ ಅವತಾರದಲ್ಲಿ ಹೇಗೆ ಕಾಣಬಹುದು ಎಂದು ಗ್ರಾಫಿಕ್ಸ್ ಡಿಸೈನರ್ ದೀಪೇಶ್ ಉಪ್ಪಾಲ ಡಿಸೈನ್‌ ಮಾಡಿರುವ AI ಆರ್ಟ್ ವರ್ಕ್. ಸದ್ಯ ಈ ಪೋಸ್ಟರ್​​​ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದ್ದು, ಅನುಷ್ಕಾ ಅಭಿಮಾನಿಗಳು ಖುಷ್​​ ಆಗಿದ್ದಾರೆ. ಆದ್ರೆ ಇದು AI ಆರ್ಟ್​ ಅನ್ನೋದು ಇದೀಗ ತಿಳಿದು ಬಂದಿದೆ.


ನುಷ್ಕಾ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಯಾವುದೂ ಸಾಧ್ಯವಾಗಲಿಲ್ಲ. ರಾಣಿ ಅಬ್ಬಕ್ಕ ಪಾತ್ರದಲ್ಲಿ ಕರಾವಳಿ ಸುಂದರಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ತುಳುನಾಡಿನ ರಾಣಿ ಅಬ್ಬಕ್ಕ ಅವರ ಜೀವನದ ಕುರಿತು ಸಿನಿಮಾ ಮಾಡಲು ಸಾಕಷ್ಟು ಜನ ಪ್ರಯತ್ನಪಟ್ಟಿದ್ದಾರೆ ಅದರಲ್ಲಿ ನಿರ್ದೇಶಕ ಮಂಸೋರೆ ಕೂಡ ಒಬ್ಬರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net