ದರ್ಶನ್ ಗ್ಯಾಂಗ್‌ಗೆ ಡಿಎನ್‌ಎ ಟೆಸ್ಟ್

Darshan
Published on

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣ ಸಂಬಂಧ ವೈಜ್ಞಾನಿಕ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ನಟ ದರ್ಶನ್ ಗ್ಯಾಂಗ್‌ಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ.

ಬುಧವಾರ ಅನ್ನಪೂಣೇಶ್ವರಿನಗರ ಠಾಣೆಯಿಂದ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದ ರಕ್ತ ಮತ್ತು ಕೂದಲು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಎಲ್ಲ ಆರೋಪಿಗಳಿಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೇಣುಕಸ್ವಾಮಿ ಮರಣೋತ್ತರ ಪರೀಕ್ಷೆ ಮತ್ತು ಶವ ಪಂಚನಾಮೆ ವೇಳೆ ಶವದ ಮೇಲಿದ್ದ ಬಟ್ಟೆ ಮತ್ತು ಲಿವರ್‌ನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಆರೋಪಿಗಳು ಬಳಸಿದ್ದ ಮತ್ತು ಶವ ಸಾಗಿಸಿದ ಸ್ಕಾರ್ಪಿಯೋ ಕಾರ್ ಮತ್ತು ಮಹೇಂದ್ರ ಜೀಪ್‌ನಲ್ಲಿ ಕೂದಲು ಮತ್ತು ರಾಸಾಯನಿಕ ಕುರುಹುಗಳನ್ನು ಎ್ಎಸ್‌ಎಲ್ ತಜ್ಞರು ಸಂಗ್ರಹಿಸಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ಹತ್ಯೆಯಾದ ರೇಣುಕಸ್ವಾಮಿ ಶವವನ್ನು ಸೆಕ್ಯೂರಿಟಿ ಗಾರ್ಡ್ ರೂಮ್‌ನಲ್ಲಿ ಹಾಕಲಾಗಿತ್ತು. ಅಲ್ಲಿ ರಕ್ತದ ಕಲೆ ಪತ್ತೆಯಾಗಿದ್ದು, ಎ್ಎಸ್‌ಎಲ್ ತಜ್ಞರು ಸಂಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net