

ಕೊಳ್ಳೇಗಾಲ: ಪಟ್ಟಣದ ದಕ್ಷಿಣ ಬಡಾವಣೆಯಲ್ಲಿರುವ ಹನೂರು ಕ್ಷೇತ್ರ ಮಾಜಿ ಶಾಸಕ ಆರ್.ನರೇಂದ್ರ ಅವರ ನಿವಾಸಕ್ಕೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಅವರು ಭೇಟಿ ನೀಡಿದರು.
ನಂಜನಗೂಡಿನಲ್ಲಿ ನಡೆದ ಚಾಮರಾಜನಗರ ಮಾಜಿ ಸಂಸದ ದಿ.ದ್ರುವನಾರಾಯಣ್ ಅವರ 64ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಕನಕಪುರಕ್ಕೆ ತೆರಳುವ ಮುನ್ನ ಯಳಂದೂರಿನಲ್ಲಿರುವ ಅವರ ಜಮೀನು ವೀಕ್ಷಣೆ ಮಾಡಿದರು. ನಂತರ ಕೊಳ್ಳೇಗಾಲದ ಮಾಜಿ ಶಾಸಕ ಆರ್.ನರೇಂದ್ರ ಅವರ ಮನೆಗೆ ಭೇಟಿ ನೀಡಿ ಚಹಾ ಕುಡಿದರು. ಈ ವೇಳೆ ಕೆಲ ಕಾಲ ಕಾಂಗ್ರೆಸ್ ಮುಖಂಡರ ಜತೆ ಚರ್ಚಿಸಿ ಅನಂತರ ಕನಕಪುರಕ್ಕೆ ತೆರಳಿದರು.
ಈ ವೇಳೆ ಮಾಜಿ ಶಾಸಕ ಆರ್.ನರೇಂದ್ರ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ನಿರ್ದೇಶಕ ತಾರೀಖ್ ಅಹಮ್ಮದ್, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಕೊಪ್ಪಳಿ ಮಹದೇವ ನಾಯಕ, ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಚೇತನ್ ದೊರೈ ಹಾಗೂ ಮುಖಂಡರು ಇದ್ದರು.