ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ: ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದ್ಯಾರಿಗೆ?

Untitled-design-2024-06-14T123303.066
Published on

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ನಟ ದರ್ಶನ್​ ಕೇಸ್​ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್​,​ ಈ‌ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಈ ಪ್ರಕರಣದ ಬಗ್ಗೆ ‌ನಾವು ರೆಸ್ಪಾನ್ಸ್ ಸಹ ಮಾಡುತ್ತಿಲ್ಲ. ಇಲ್ಲಿ ಯಾವ ಒತ್ತಡವೂ ಇಲ್ಲ, ಏನು ಇಲ್ಲ, ಇದರ ಕುರಿತು ನಾನು ವಿಚಾರಿಸಿದ್ದೇನೆ. 13 ಜನ ಆರೋಪಿಗಳು ವಿಚಾರಣೆಯಲ್ಲಿದ್ದಾರೆ ಎಂದರು.

"ಬೆಳಗ್ಗೆಯಿಂದ ಟಿವಿಯವರು ಕ್ಯಾಮರಾ ಹಾಕೊಂಡು ಅಲ್ಲಿಯೇ ಕುಳಿತಿದ್ದಾರೆ. ಪೊಲೀಸರಿಗೆ ಆರಾಮದಾಯಕವಾಗಿ ಕೆಲಸ ಮಾಡಲು ಅವಕಾಶ ಬೇಕು. ಆ ದೃಷ್ಟಿಯಿಂದ ರಕ್ಷಣೆಗೆ ಶಾಮಿಯಾನ ಹಾಕಿಸಿಕೊಂಡಿದ್ದಾರೆ. ನಮ್ಮ ಸಚಿವರು ಇದರಲ್ಲಿ ಭಾಗಿಯಾಗಿಲ್ಲ. ಯಾರು ಈ‌ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ" ಎಂದಿದ್ದಾರೆ.

"ಬಿ.ಎಸ್​ವೈ ಪ್ರಕರಣದಲ್ಲಿ ನಾನು ಜಾಸ್ತಿ ತಿಳಿದುಕೊಳ್ಳಲು ಹೋಗಿಲ್ಲ. ಕಾಂಗ್ರೆಸ್ ಯಾರ ಮೇಲೂ ದ್ವೇಷ ಮಾಡಲ್ಲ. ನನಗೆ ಅವರನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ರಾಹುಲ್ ಗಾಂಧಿ ಕಷ್ಟ ಅವರಿಗೆ, ಅವರ ಮೇಲೆ ಕೇಸ್ ಹಾಕಿದ್ದು ಯಾವ ರಾಜಕಾರಣ? ದ್ವೇಷದ ರಾಜಕಾರಣ ಮಾಡುತ್ತಿರುವುದು ಬಿಜೆಪಿಯವರು. ರಾಹುಲ್ ಏನು ಎಐಸಿಸಿ ಅಧ್ಯಕ್ಷರೇ? ಅವರೇನು ಜಾಹೀರಾತು ಕೊಟ್ಟಿದ್ದರೇ? ಜಾಹೀರಾತು ಕೊಟ್ಟಿದ್ದು ಕೆಪಿಸಿಸಿ" ಎಂದರು.

"ಎಂಎಲ್​ಸಿ ಹಾಗೂ ಬಿಜೆಪಿ ಅಡ್ವೊಕೇಟ್ ಅಸೋಸಿಯೇಶನ್ ಅಧ್ಯಕ್ಷರ ಕೈಯಲ್ಲಿ ಕೇಸ್ ಹಾಕಿಸಿದ್ದಾರೆ.‌ ನಾವು ಅಂತಹ ನೀಚ ರಾಜಕಾರಣ ಮಾಡಲ್ಲ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net