ಜುಲೈ 2ಕ್ಕೆ ಡಿಕೆಶಿ ಪದಗ್ರಹಣ ಫಿಕ್ಸ್? ...ಈ ಸ್ಥಳದಲ್ಲೇ ಪ್ರತಿಜ್ಞಾವಿಧಿ ಸ್ವೀಕಾರ

kpcc dks pooje
Published on

ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ನಿರ್ಮಿಸಿರುವ ಕೆಪಿಸಿಸಿ ನೂತನ ಕಟ್ಟಡದಲ್ಲೇ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

ಇದೇ ಕಾರಣದಿಂದಲೇ ಹೊಸ ಬಿಲ್ಡಿಂಗ್​ನಲ್ಲಿ ಇಂದು(ಭಾನುವಾರ) ಬೆಳಗ್ಗೆ ಲೋಕಕಲ್ಯಾಣಾರ್ಥವಾಗಿಯೂ ಕಾಂಗ್ರೆಸ್​ ನಾಯಕರು ಹಾಗೂ ಸಮಸ್ತ ಕಾರ್ಯಕರ್ತರ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್ ಹೋಮ-ಹವನ ನೆರವೇರಿಸಿದರು. ಇದನ್ನೂ ಓದಿರಿ ಕೆಪಿಸಿಸಿ ಕಟ್ಟಡದಲ್ಲಿ ಬೆಳ್ಳಂಬೆಳಗ್ಗೆ ಹೋಮ-ಹವನ, ಇದೋ ಡಿಕೆಶಿ ಸಂಕಲ್ಪ…

ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದ ನೂತನ ಕೆಪಿಸಿಸಿ ಕಟ್ಟಡದ ಆಡಿಟೋರಿಯಂನಲ್ಲೇ ಜು.2ರಂದು ಡಿಕೆಶಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಮೂರು ಬಾರಿ ಅನುಮತಿ‌ ನಿರಾಕರಿಸಿತ್ತು. ಈಗ ಹೋಮ ನಡೆದ ಸ್ಥಳದಿಂದಲೇ ಪ್ರತಿಜ್ಞಾವಿಧಿ ಸ್ವೀಕರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಡಿಯೋ ನೋಡಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net