ಕೆಪಿಸಿಸಿ ಕಟ್ಟಡದಲ್ಲಿ ಬೆಳ್ಳಂಬೆಳಗ್ಗೆ ಹೋಮ-ಹವನ, ಇದೋ ಡಿಕೆಶಿ ಸಂಕಲ್ಪ...

dks kpcc
Published on

ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಕೆಪಿಸಿಸಿ ಕಟ್ಟಡದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು(ಭಾನುವಾರ) ಬೆಳಗ್ಗೆ ಪೂಜೆ ನೆರವೇರಿಸಿದರು.

ಬೆಳಗಿನ ಜಾವ 5ರಿಂದಲೇ ಹೋಮ-ಹವನ ಆರಂಭವಾಗಿ ಸುಮಾರು 10 ಗಂಟೆಗೆ ಪೂರ್ಣಾವುತಿ ನೆರವೇರಿತು. ಲೋಕಕಲ್ಯಾಣಾರ್ಥವಾಗಿಯೂ ನಡೆದ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ ಮತ್ತಿತರ ಮುಖಂಡರು ಹಾಗೂ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಸಂಕಲ್ಪ ಮಾಡಿದರು.

ಪೂಜೆಯಲ್ಲಿ ಡಿಕೆಶಿ ಜತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕೂಡ ಭಾಗವಹಿಸಿದ್ದರು. ಹೋಮ‌ ಮುಗಿದ ಬಳಿಕ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿದರು. ಹೋಮ ಕಾರ್ಯಕ್ರಮ ವೇಳೆ ಕಾಂಗ್ರೆಸ್ ನಾಯಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಕರೊನಾ ಆತಂಕದ ನಡುವೆಯೂ ಗುಂಪು ಗುಂಪಾಗಿ ಸೇರಿದ್ದರು.

ಇನ್ನು ಹೋಮ-ಹವನ ಸ್ಥಳಕ್ಕೆ ಆಗಮಿಸಿದ ಮಂಗಳಮುಖಿಯರು ಡಿಕೆಶಿಗೆ ಆಶೀರ್ವಾದ ಮಾಡಿದರು. ಜೇಬಿನಿಂದ 500 ರೂ. ಮುಖ ಬೆಲೆಯ ದುಡ್ಡಿನ ಕಂತೆ ತೆಗೆದ ಡಿಕೆಶಿ, ಅದರಲ್ಲಿ ಮಂಗಳಮುಖಿಯರಿಗೆ ಮೂರು ಸಾವಿರ ರೂ. ಕೊಟ್ಟರು.

ಈ ವಿಡಿಯೋ ನೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net