ಚನ್ನಪಟ್ಟಣದಲ್ಲಿ ಯಾವ ರಣನೂ ಇಲ್ಲ, ರಂಗವೂ ಇಲ್ಲ: DCM DK Shivakumar

DK Shivakumar
Published on

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಾಕಷ್ಟು ಹೈಪ್​ ಪಡೆದಿದ್ದು, ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದೆ. ಈ ಪೈಕಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಮಾತ್ರ ಹೆಚ್ಚು ಸುದ್ದಿಯಲ್ಲಿದ್ದು, ಬಿಜೆಪಿ-ಜೆಡಿಎಸ್ (BJP-JDS)​ ಹಾಗೂ ಕಾಂಗ್ರೆಸ್​ (Congress) ನಾಯಕರ ನಡುವಿನ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಪರ ಎನ್​ಡಿಎ ನಾಯಕರು (NDA Leaders) ಭರ್ಜರಿ ಪ್ರಚಾರ ನಡೆಸುತ್ತಿದ್ದು, ಅತ್ತ ಕಾಂಗ್ರೆಸ್​ ನಾಯಕರು ಕೂಡ ನಾವು ಯಾರಿಗೂ ಕಮ್ಮಿ ಇಲ್ಲವೆಂದು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ್​ ಅವರನ್ನು ಗೆಲ್ಲಿಸುವುದಾಗಿ ಪಣತೊಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar)​ ಈ ಬಗ್ಗೆ ಮಾತನಾಡಿದ್ದು, ಜೆಡಿಎಸ್​ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ಚನ್ನಪಟ್ಟಣದ ರಣರಂಗದಲ್ಲಿ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ. ನಾವು ಮಾಡಿದ ಕೆಲಸವನ್ನು ಜನರು ಪಟ್ಟಿ ಮಾಡಿ ಮಾರ್ಕ್ಸ್ ಕೊಡುತ್ತಾರೆ. ನನ್ನ ಪ್ರಕಾರ ಚನ್ನಪಟ್ಟಣದಲ್ಲಿ ಯಾವ ರಣನೂ ಇಲ್ಲ, ರಂಗವೂ ಇಲ್ಲ. ಮತದಾರನ ಹೃದಯ ಗೆಲ್ಲಬೇಕು. ನಾವು ಮಾಡಿರುವ ಮತ್ತು ಮಾಡುತ್ತಿರುವ ಕೆಲಸಕ್ಕೆ ಜನ ಗುರುತಿಸಿ ಎಂದು ಕೇಳಲು ಹೋಗುತ್ತಿದ್ದೇವೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಯಕ ಆದವನು ಮತದಾರರಿಗೆ ಏನು ಕೊಡುತ್ತಾನೆ, ಯಾವ ರೀತಿ ಸಹಾಯ ಮಾಡುತ್ತಾನೆ ಅವರ ಬದುಕನ್ನು ಯಾವ ರೀತಿ ಬದಲಾವಣೆ ಮಾಡುತ್ತಾನೆ ಅದು ಬಹಳ ಮುಖ್ಯ. ಯಾರು ಏನೇನು ಮಾಡಿದ್ದಾರೆ ಅನ್ನೋ ಪಟ್ಟಿ ಈ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುತ್ತದೆ. ಜನ ತೀರ್ಮಾನ ಮಾಡುತ್ತಾರೆ. ಡಿಕೆ ಸುರೇಶ್, ಡಿಕೆ ಶಿವಕುಮಾರ್, ಕುಮಾರಸ್ವಾಮಿ, ಯೋಗೇಶ್ವರ್ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಜನರು ಪಟ್ಟಿ ಹಾಕುತ್ತಾರೆ. ಅದು ಬಿಟ್ಟರೆ ಯಾವ ರಣನೂ ಇಲ್ಲ, ರಂಗವೂ ಇಲ್ಲ ಏನು ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ (DCM DK Shivakumar) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net