ಕೆನೆಡಾದ ಹಿಂದೂ ದೇವಾಲಯದಲ್ಲಿದ್ದ Devotees ಮೇಲೆ ಖಲಿಸ್ತಾನಿಗಳಿಂದ ಹಲ್ಲೆ; Video Viral

Khalistani Attack
Published on

ಕೆನೆಡಾ: ಕೆನೆಡಾದಲ್ಲಿರುವ ಹಿಂದೂ ದೇವಾಲಯದ ಆವರಣದಲ್ಲಿದ್ದ ಭಕ್ತಾದಿಗಳ (Devotees) ಮೇಲೆ ಖಲಿಸ್ತಾನಿ ಪ್ರತ್ಯೇಕವಾದಿಗಳು (Khalistani separatists) ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಕೆನಡಾದ ಬ್ರಾಮ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ (BAPS) ಮೇಲೆ ದಾಳಿ ನಡೆದಿದ್ದು, ಪ್ರಧಾನಿ  ಜಸ್ಟಿನ್ ಟ್ರೂಡೋ ಪ್ರತಿಕ್ರಿಯಿಸಿದ್ದಾರೆ.

ಭಾನುವಾರ (ನವೆಂಬರ್​ 03) ಈ ಘಟನೆ ನಡೆದಿದ್ದು, ಇಲ್ಲಿ ಪೂಜೆಗೆ ಬಂದಿದ್ದ ಜನರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ದೇವಸ್ಥಾನದ ಮೇಲೆ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ (Video Viral) ಆಗಿದ್ದು, ಖಲಿಸ್ತಾನಿ ಪ್ರತ್ಯೇಕವಾದಿಗಳು ಧ್ವಜ ಹಿಡಿದು, ಅಲ್ಲಿರುವ ಭಕ್ತಾದಿಗಳನ್ನು ನಿಂದಿಸುತ್ತಾ ಹಲ್ಲೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಘಟನೆ ಸಂಬಂಧ ಟ್ವೀಟ್​​ ಮಾಡಿರುವ ಕೆನೆಡಾದ ಪ್ರಧಾನಿ ಜಸ್ಟಿನ್​ ಟ್ರೂಡೋ, ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರ ಕೃತ್ಯವನ್ನು ಒಪ್ಪಲಾಗದು. ಕೆನಡಾದ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಮುಕ್ತಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕು ಇದೆ. ಹಾಗೆಯೇ, ಸಮುದಾಯದ ರಕ್ಷಣೆ ಹಾಗೂ ಪ್ರಕರಣದ ತನಿಖೆ ನಿಟ್ಟಿನಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಿದ ಪೊಲೀಸರಿಗೆ ಧನ್ಯವಾದಗಳು ಎಂದು ಟ್ವೀಟ್​ ಮಾಡಿದ್ದಾರೆ.

ಕರ್ನಾಟಕ ಮೂಲದ  ಕೆನೆಡಾ ಸಂಸದ ಚಂದ್ರ ಆರ್ಯ ಅವರು ಹಲ್ಲೆಯ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ಕೆನೆಡಾದಲ್ಲಿ ಖಲಿಸ್ತಾನಿ ಉಗ್ರರ ಅಟ್ಟಹಾಸ ಮಿತಿಮೀರಿದ್ದು, ನಡಾದಲ್ಲಿ ಖಲಿಸ್ತಾನಿ ಹಿಂಸಾತ್ಮಕ ಉಗ್ರಗಾಮಿತ್ವವು ಎಷ್ಟು ಆಳವಾಗಿ ಮತ್ತು ಲಜ್ಜೆಗೆಟ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಇದೇ ಮೊದಲಲ್ಲ 

ಜುಲೈ 23, 2024 ರ ಬೆಳಗ್ಗೆ, ಎಡ್ಮಂಟನ್‌ನಲ್ಲಿರುವ BAPS ಶ್ರೀ ಸ್ವಾಮಿನಾರಾಯಣ ದೇವಸ್ಥಾನದ ಹೊರಭಾಗದಲ್ಲಿ ಹಿಂದೂ ವಿರೋಧಿ ಚಿತ್ರಗಳು ಮತ್ತು ಘೋಷಣೆಗಳನ್ನು ಬರೆದಿರುವುದು ಕಂಡುಬಂದಿತ್ತು.  2022 ರಿಂದ ಇದು ನಾಲ್ಕನೇ ಬಾರಿ ಕೆನಡಾದಲ್ಲಿ BAPS ದೇವಾಲಯವನ್ನು ಗುರಿಯಾಗಿಸಿಕೊಂಡಿದೆ. 2022ರಿಂದೀಚೆಗೆ ಕೆನಡಾದಲ್ಲಿರುವ 20ಕ್ಕೂ ಹೆಚ್ಚು ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿರುವ ಘಟನೆಗಳು ವರದಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net