"ಸಿದ್ದರಾಮಯ್ಯ ಎರಡೂವರೆ ವರ್ಷ, ಡಿಕೆ ಶಿವಕುಮಾರ್ ಎರಡೂವರೆ ವರ್ಷ ಸಿಎಂ" ಎಂಬ ಆರ್​​​ವಿ ದೇಶಪಾಂಡೆ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ

dk shivakumar
Published on

ಬೆಂಗಳೂರು: "ಎರಡುವರೆ ವರ್ಷ ಸಿದ್ದರಾಮಯ್ಯ ಸಿಎಂ, ನಂತರದ ಎರಡುವರೆ ವರ್ಷ ಡಿಕೆ ಶಿವಕುಮಾರ್ ಸಿಎಂ" ಎಂಬ ಆರ್​​​​​ವಿ ದೇಶಪಾಂಡೆ ಹೇಳಿಕೆ ಕುರಿತು ಡಿಕೆ ಶಿವಕುಮಾರ್ ದಿಗ್ವಿಜಯ ನ್ಯೂಸ್​​ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್ , "ನಾನು ಹೈಕಮಾಂಡ್ ವಿಚಾರ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಹೈಕಮಾಂಡ್ ಅವರು ನನಗೆ ಕೆಲಸ ಮಾಡುವುದಕ್ಕೆ ಹೇಳಿದ್ದಾರೆ. ಅವರು ಹಿರಿಯರು. ಅವರಿಗೆ ಕೆಲವು ವಿಚಾರಗಳು ಗೊತ್ತಿರಬಹುದು. ನಾನು ಅದನ್ನೆಲ್ಲ ಬಹಿರಂಗ ಮಾಡೋಕೆ ಹೋಗಲ್ಲ'' ಎಂದು ತಿಳಿಸಿದ್ದಾರೆ.

"ನಾನು, ಸಿದ್ದರಾಮಯ್ಯ ಮತ್ತು ವರಿಷ್ಠರು ಕೆಲವೊಂದು ವಿಚಾರಗಳನ್ನು ಮಾತನಾಡಿದ್ದೇವೆ. ಆದರೆ ಅದನ್ನು ಬಹಿರಂಗ ಮಾಡೋಕೆ ಹೋಗೋದಿಲ್ಲ" ಎಂದು ದಿಗ್ವಿಜಯ ನ್ಯೂಸ್​​ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net