More

    ರಾಜ್ಯದಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗುತ್ತಾ?

    ಬೆಂಗಳೂರು: “ರಾಜ್ಯಕ್ಕೆ ಮುಂಗಾರು ತಡವಾಗಿ ಎಂಟ್ರಿ ಕೊಟ್ಟ ಪರಿಣಾಮ ಬರಗಾಲ ಸ್ಥಿತಿ ಬರುತ್ತಾ”? ಈ ಪ್ರಶ್ನೆಗೆ ನೋ ಅಂತಾರೆ ಹವಾಮಾನ ತಜ್ಞರು. ಹೋದ ವರ್ಷಕ್ಕೆ ಹೋಲಿಕೆ ಮಾಡಿದರೆ ವಾಡಿಕೆಗಿಂತ ಈ ವರ್ಷ ಶೇ.25 ಮಳೆ ಕಡಿಮೆಯಾಗಿದೆ. ಕಳೆದ ಬಾರಿ ಇವತ್ತಿನ ದಿನಕ್ಕೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

    ಈ ಬಾರಿ ಮಳೆ ಕೊರತೆ ಶೇಕಡ 25ರಷ್ಟಿದೆ. ಕರಾವಳಿ ಭಾಗದಲ್ಲಿ ಇವತ್ತಿನ ದಿನದವರೆಗೆ ಮಳೆ ಕೊರತೆ ಶೇಕಡ 12 ರಷ್ಟಿದೆ. 14 ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 15 ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕೊಡಗು ವಿಜಯಪುರ ಧಾರವಾಡ ಈ ಭಾಗದಲ್ಲಿ ಶೇಕಡ 50ರಷ್ಟು ಮಳೆ ಕಡಿಮೆಯಾಗಿದೆ.

    ಇದನ್ನೂ ಓದಿ: ಥೇಟ್ ಪುಷ್ಪ ಸಿನಿಮಾ ಸ್ಟೈಲಲ್ಲೇ ಗಾಂಜಾ ಸರಬರಾಜು ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಕರಾವಳಿಯಲ್ಲಿ 4 ತಿಂಗಳಿಗೆ 309 ಸೆಂ.ಮೀ ವಾಡಿಕೆ ಮಳೆಯಾಗಬೇಕು. ಆದರೆ ಇವತ್ತಿನ ತಾರಿಖಿಗೆ 119 ಸೆಂ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿಗೆ 68 ಸೆಂ.ಮೀ. ಮಳೆ ಆಗಬೇಕು. ಇವತ್ತಿನ ದಿನಕ್ಕೆ 15 ಸೆಂ.ಮೀ. ಮಳೆ ಆಗಿದೆ. ಆದರೆ ಈ ಬಾರಿ ಇನ್ನೂ ಸಮಯ ಇರುವುದರಿಂದ ಮಳೆಯ ಪ್ರಮಾಣ ಹೆಚ್ಚುತ್ತದೆ. ರಾಜ್ಯದಲ್ಲಿ ಬರಗಾಲ ಸಂದರ್ಭ ನಿರ್ಮಾಣ ಆಗುವುದಿಲ್ಲ. ಮಳೆಯ ಪ್ರಮಾಣ ಕೂಡ ಸೆಪ್ಟೆಂಬರ್ ಕೊನೆ ಹೊತ್ತಿಗೆ ಏರಿಕೆ ಆಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts