More

    ಮಳೆ ಆರ್ಭಟಕ್ಕೆ ಮಾರಳ್ಳಿಯಲ್ಲಿ ಮನೆ ಛಾವಣಿಗೆ ಹಾನಿ

    ಹನೂರು: ತಾಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಮಾರಳ್ಳಿ ಗ್ರಾಮದಲ್ಲಿ ಮನೆ ಛಾವಣಿ ಹಾನಿಯಾಗಿದ್ದರೆ ಸತ್ತಿಮಂಗಲ ಗ್ರಾಮದಲ್ಲಿ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಬಾಳೆ ಫಸಲು ನೆಲಕ್ಕುರುಳಿದೆ.


    ಸಂಜೆ 5ರ ವೇಳೆಯಲ್ಲಿ ಈ ವ್ಯಾಪ್ತಿಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಮಳೆಯಾಯಿತು. ಇದರಿಂದ ಮಾರಳ್ಳಿ ಗ್ರಾಮದಲ್ಲಿ ಮೂರ್ತಿ ಅವರ ಹೆಂಚಿನ ಛಾವಣಿ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


    ಇನ್ನು ಸತ್ತಿಮಂಗಲ ಗ್ರಾಮದಲ್ಲಿ ಮುತ್ತುರಾಜು ಅವರ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಗೊನೆ ಬಿಟ್ಟಿದ್ದ ಬಾಳೆ ಫಸಲು ನೆಲಕ್ಕುರುಳಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಮೂರ್ತಿ ಹಾಗೂ ಮುತ್ತುರಾಜು ಒತ್ತಾಯಿಸಿದ್ದಾರೆ.


    ಟಿಸಿಗೂ ಹಾನಿ: ಸತ್ತಿಮಂಗಲ ಗ್ರಾಮದಲ್ಲಿ ಮಳೆ-ಗಾಳಿಗೆ ಮರಗಳು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದ ಪರಿಣಾಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ರಾತ್ರಿಯನ್ನು ಕತ್ತಲೆಯಲ್ಲೇ ಕಳೆಯಬೇಕಾಯಿತು. ಆದ್ದರಿಂದ ಸೆಸ್ಕ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಟಿಸಿ ರಿಪೇರಿ ಮಾಡಿಸುವುದರ ಜತೆಗೆ ವಿದ್ಯುತ್ ಪೂರೈಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts