

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ 41ನೇ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಇಂದು ಪದಗ್ರಹಣ ಮಾಡಿದ್ದು, ಡಿಕೆಶಿ ಪಟ್ಟಾಭಿಷೇಕ ಸಮಾರಂಭವನ್ನು ರಾಜ್ಯದ ವಿವಿಧೆಡೆ 7,800 ಸ್ಥಳಗಳಲ್ಲಿ ಎಲ್ಇಡಿ ಮೂಲಕ ನೇರ ಪ್ರಸಾರದ ಕಾಂಗ್ರೆಸ್ ಕಾರ್ಯಕರ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಲವೆಡೆ ಡಿಕೆಶಿ ಅಭಿಮಾನಿಗಳು ಕೆಪಿಸಿಸಿ ನೂತನ ಸಾರಥಿಯ ಹೆಸರಲ್ಲಿ ಪೂಜೆ ಸಲ್ಲಿಸಿ ಅಭಿಮಾನ ಮೆರೆದರು. ಬೆಳಗ್ಗೆ 11ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಆರಂಭವಾದ ಡಿಕೆಶಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಝೂಮ್ ಕಾನ್ಫರೆನ್ಸ್, 100ಕ್ಕೂ ಹೆಚ್ಚು ಫೇಸ್ಬುಕ್ ಖಾತೆಗಳಿಂದ ಲೈವ್ನಲ್ಲಿ ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಅವರೂ ಪದಗ್ರಹಣ ಮಾಡಲಿದ್ದಾರೆ. ಇದನ್ನೂ ಓದಿರಿ ಇನ್ನೂ ಒಂದು ವಾರ ಮಾರುಕಟ್ಟೆಗಳು ಬಂದ್!
ನವ ದೃಷ್ಟಿಕೋನ, ನವ ಚೈತನ್ಯ, ನವ ಕರ್ನಾಟಕ ಮತ್ತು ಪರಿಕಲ್ಪನೆಯಲ್ಲಿ ಪದಗ್ರಹಣ ನಡೆಯಿತು. ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಜವಾಬ್ದಾರಿಯನ್ನು ಹೊಸ ತಂಡಕ್ಕೆ ಹಸ್ತಾಂತರಿಸುವರು.
ಡಿ.ಕೆ ಶಿವಕುಮಾರ್ ಅವರು ಪದಗ್ರಹಣ ಕಾರ್ಯಕ್ರಮಕ್ಕೂ ಮುನ್ನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಿದರು.