ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಒದ್ದಾಡ್ತಿದ್ದಾರೆ: ಡಾ.ಜಿ.ಪರಮೇಶ್ವರ್​

parameshwara dks
Published on

ತುಮಕೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿ.ಕೆ. ಶಿವಕುಮಾರ್ ಒದ್ದಾಡುತ್ತಾರೆ. ನಾವೆಲ್ಲಾ ಜೊತೆಗಿದ್ದೇವೆ ಎಂದು ಡಿಕೆಶಿಗೆ ಧೈರ್ಯ ತುಂಬುತ್ತಿದ್ದೇವೆ ಎಂದು ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಕೊರಟಗೆರೆ ತಾಲೂಕಿನ ವಡ್ಡಗೆರೆಯಲ್ಲಿ ಮಾತನಾಡಿದ ಪರಮೇಶ್ವರ್​, ಯಾವುದೇ ವ್ಯಕ್ತಿ ಮತ್ತು ಪಕ್ಷ ಅಧಿಕಾರಕ್ಕೆ ಬರಬೇಕಾದ್ರೆ ನಮ್ಮ ಉದ್ದೇಶ ಏನು? ಆ ಕೆಲಸ ಮಾಡುವ ಸಾಮರ್ಥ್ಯ ಇದೆಯಾ ಎಂಬುದು ಮುಖ್ಯ. ಆ ಸಾಮರ್ಥ್ಯ ನನಗಿದೆ. ಬೇರೆಯವರಿಗೆ ಇದೆಯೋ, ಇಲ್ಲವೋ ಅದು ಅವರಿಗೆ ಬಿಟ್ಟದ್ದು. ಈ ಬಗ್ಗೆ ಟೀಕೆ ಟಿಪ್ಪಣಿ ಮಾಡೋಕ್ಕೆ ಹೋಗಲ್ಲ. ಈ ರಾಜ್ಯದಲ್ಲಿ ಒಬ್ಬ ಸಮರ್ಥ ನಾಯಕ ಅಂತ ನನ್ನನ್ನು ಕಾಂಗ್ರೆಸ್ ಗುರುತಿಸಿದೆ ಎಂದರು.

8 ವರ್ಷ ಪಕ್ಷದ ಅಧ್ಯಕ್ಷನಾಗಿ ನನ್ನನ್ನು ಇಟ್ಟಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಯಾರ್​ ಯಾರನ್ನೂ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲ್ಲ. ಒಂದರಿಂದ ಎರಡು ವರ್ಷ ಇರೋದೆ ಕಷ್ಟ, ಆದರೆ 8 ವರ್ಷ ಅಧ್ಯಕ್ಷರಾಗಿ ಇಟ್ಟಿದ್ದರು. ಪರವಾಗಿಲ್ಲ, ಈತ ಮ್ಯಾನೇಜ್ ಮಾಡ್ತಾನೆ ಅಂತ ಅಧ್ಯಕ್ಷನನ್ನಾಗಿ ಮಾಡಿದ್ರು. ಬೆಳಗ್ಗೆ ಎದ್ರೆ ನಮ್ಮ ಶಿವಕುಮಾರಣ್ಣ ಒದ್ದಾಡ್ತಾನೆ, ಹೇ ನಾವು ಜೊತೆಗಿದ್ದೇವೆ ಸುಮ್ನೆ ಧೈರ್ಯವಾಗಿರಪ್ಪ ಅಂತ ಹೇಳ್ತೀವಿ. ಅಂತ ಸ್ಥಾನ ಅದು, ಪಕ್ಷವನ್ನು ಎರಡು ಬಾರಿ ಚುನಾವಣೆಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆಯಲ್ಲಾ ಅದು ಸುಮ್ಮನೆ ಅಲ್ಲ. 224 ಜನರಿಗೆ ಟಿಕೆಟ್ ಕೊಡ್ಬೇಕು, ಗೆಲ್ಲಿಸಬೇಕು, ಸರ್ಕಾರ ಮಾಡ್ಬೇಕು. ಇದೆಲ್ಲ ಸಾಮಾನ್ಯ ಅಲ್ಲ. ಆದ್ದರಿಂದ ನಿಮ್ಮ ಆರ್ಶೀವಾದ ಎಲ್ಲಿಯವರೆಗೆ ಇರುತ್ತೋ ಅಲ್ಲಿವರೆಗೂ ನನಗೆ ಸಾಮರ್ಥ್ಯ ಇರುತ್ತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net