ಯೇಸು ಪ್ರತಿಮೆ ವಿಚಾರದಲ್ಲಿ ಬಿಜೆಪಿ ಸರ್ಕಾರಕ್ಕೆ ಸವಾಲೆಸೆದ ಮಾಜಿ ಸಚಿವ ಡಿಕೆಶಿ

DKS 2Dec 19
Published on

ಬೆಂಗಳೂರು: ದಾಖಲೆಗಳನ್ನು ಪರಿಶೀಲಿಸಿ ಜಮೀನನ್ನು ವಾಪಸ್ಸು ಪಡೆಯಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಯೇಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಸವಾಲೆಸೆದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ದಾಖಲೆಗಳನ್ನು ಪರಿಶೀಲಿಸಲಿ, ಹಾಗೆಯೇ ‌ಮಠಗಳಿಗೆ, ಸಂಘ-ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ನೀಡಿರುವ ಸರ್ಕಾರಿ ಜಮೀನಿನ ಬಗ್ಗೆಯೂ ಬಿಎಸ್​ವೈ ಸರ್ಕಾರ ನೋಡಲಿ, ಬೇರೆ ಯಾರು ಯಾರಿಗೆ ಜಮೀನು ನೀಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಬಿಜೆಪಿ ನಾಯಕರು ಬಣ್ಣ ಹಚ್ಚಿಕೊಂಡು ನಾಟಕ ಮಾಡುತ್ತಿದ್ದಾರೆ. ಅವರು ನಾಟಕ ಮಾಡಲಿ ಎಂದು ತಿರುಗೇಟು ನೀಡಿದರು.

ನಾನು ಕಾನೂನು ಬದ್ಧವಾಗಿ ಜಮೀನು ನೀಡಿದ್ದೇನೆ. ಜಮೀನು ನೀಡಿರುವ ಆದೇಶವನ್ನು ವಜಾ ಮಾಡುವಂತೆ ತಹಸೀಲ್ದಾರ್​ಗೆ ಹೇಳಿದ್ದಾರೆ. ಅವರು ನಿರಾಕರಿಸಿದ್ದರಿಂದ ವರ್ಗಾವಣೆ ಮಾಡಿದ್ದಾರೆ. ಅಶೋಕಚಕ್ರವರ್ತಿ ಸೇರಿದಂತೆ ಯಾರು ಯಾರು ಮಾತನಾಡಿದ್ದಾರೆ ಎಲ್ಲವೂ ಗೊತ್ತಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಅಯ್ಯೋ ದಿನಾಲೂ ಐಟಿ ನೋಟಿಸ್​ಗೆ ಉತ್ತರ ಕೊಡುವುದಕ್ಕೆ ಸಾಕಾಗಿದೆ. ಇನ್ನೂ ಭೇಟಿ ಯಾವಾಗ ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿರುವ ವಿಚಾರವಾಗಿ ಅವರಿಗೆ ಸ್ವಾಗತ ರಾಜ್ಯಕ್ಕೆ ಮಹದಾಯಿ ಗಿಫ್ಟ್​ ಕೊಡಲಿ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net