

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ಭೈರಸಂದ್ರ ಗಲಭೆ ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ವಾಜಿದ್ನನ್ನು ಬಂಧನಕ್ಕೆ ಸುಳಿವು ಕೊಟ್ಟದ್ದು ಮೊಬೈಲ್ ರಿಂಗ್ ಟೋನ್!
ಆರೋಪಿ ವಾಜೀದ್ನನ್ನು ಬಂಧಿಸಲು ಮಂಗಳವಾರ ಆತನ ಮನೆಗೆ ಸಿಸಿಬಿ ಪೊಲೀಸರು ಹೋಗಿದ್ದರು. ಆ ವೇಳೆ ಮನೆಯಲ್ಲಿ ಯಾರೂ ಇಲ್ಲ ಎಂಬಂತೆ ಬಿಂಬಿಸಲು ಹೊರಗಡೆಯಿಂದ ಆರೋಪಿ ಬೀಗ ಹಾಕಿದ್ದ. ಮೊದಲು ಸುಮ್ಮನಾದ ಅಧಿಕಾರಿಗಳು, ಅನುಮಾನದ ಮೇರೆಗೆ ಆತನ ಮೊಬೈಲ್ಗೆ ಕರೆ ಮಾಡಿದಾಗ ಮನೆಯೊಳಗೆ ಮೊಬೈಲ್ ರಿಂಗ್ ಆಗುವುದು ಕೇಳಿಸಿತ್ತು. ಬಾಗಿಲು ತೆಗೆಯದಿದ್ದರೆ, ಬಾಗಿಲು ಒಡೆಯುವುದಾಗಿ ಪೊಲೀಸರು ಎಚ್ಚರಿಸಿದ್ದರು. ಆತಂಕಗೊಂಡ ವಾಜೀದ್ ಬಾಗಿಲು ತೆಗೆದಿದ್ದಾನೆ ಎನ್ನಲಾಗಿದೆ. ವಾಜೀದ್ನನ್ನು ಬಂಧಿಸಿದ ಬೆನ್ನಲ್ಲೇ ರಹಸ್ಯ ಸ್ಥಳದಲ್ಲಿ ಅವಿತುಕೊಂಡಿದ್ದ ಆತನ ನಾಲ್ವರು ಸಹಚರರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಸಿಬಿ ಬಲೆಗೆ ಬಿದ್ದಿದ್ದ ವಾಜೀದ್ನನ್ನು ತೀವ್ರ ವಿಚಾರಣೆ ನಡೆಸಿದಾಗ ತನ್ನ ಸಹಚರರ ಬಗ್ಗೆ ಈತ ಸುಳಿವು ನೀಡಿದ್ದ. ಈ ಆಧಾರದ ಮೇಲೆ ನಗರದ ರಹಸ್ಯ
ವಾಜೀದ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಂಧಿತ ನಾಲ್ವರು ಆರೋಪಿಗಳು ನಗರದ ವಿವಿಧೆಡೆಯಿಂದ ಗಲಭೆ ನಡೆಸಲು ಹಲವು ಜನರನ್ನು ಕರೆ ತಂದಿದ್ದರು. ಒಂದೇ ಸಮುದಾಯದ ನೂರಾರು ಜನರನ್ನು ಸಂಪರ್ಕಿಸಿ ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ಭೈರಸದಂದ್ರದ ಬಳಿ ಬರುವಂತೆ ಸೂಚಿಸಿದ್ದರು. ಗಲಭೆಯಲ್ಲಿ ಭಾಗಿಯಾದರೆ ಆಥಿರ್ಕ ನೆರವು ನೀಡಿ, ಪೊಲೀಸರಿಂದ ಬಂಧನಕ್ಕೊಳಗಾದರೆ ಜಾಮೀನು ಕೊಡಿಸುವುದಾಗಿ ಇವರಿಗೆ ಭರವಸೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.