Diwali 2024: ಬಾಲಿವುಡ್​ನಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಜನತೆಗೆ ಶುಭಾಶಯ ಕೋರಿದ ನಟಿಯರು..

bollywood
Published on

ಮುಂಬೈ: ಬೆಳಕಿನ ಹಬ್ಬ ದೀಪಾವಳಿ(Diwali 2024) ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳಲ್ಲೂ ದೀಪಾವಳಿ ತಯಾರಿ ನಡೆಯುತ್ತಿದೆ. ಬಿ-ಟೌನ್‌ನಲ್ಲಿ ದೀಪಾವಳಿ ಪಾರ್ಟಿಗಳಲ್ಲದೆ, ತಾರೆಯರು ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುತ್ತಾರೆ. ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರರಂಗದ ತಾರೆಯರು ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ.

ಸಿಂಗಮ್ ಯಗೇನ್ ನಟಿ ಕರೀನಾ ಕಪೂರ್ ತಮ್ಮ ಕುಟುಂಬದ ಜೊತೆ ಇಲ್ಲದಿರುವುದರಿಂದ ದೀಪಾವಳಿಯನ್ನು ಮಿಸ್​ ಮಾಡಿಕೊಂಡಿದ್ದು, ವಿದೇಶದಿಂದ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕಳುಹಿಸಿದ್ದಾರೆ. ನಟಿ ಗುರುವಾರ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶುಭ ಹಾರೈಸುವ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕೆಂಪು ಬಣ್ಣದ ಕಫ್ತಾನ್ ಧರಿಸಿ ವೆಕೇಶನ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಪ್ ಮತ್ತು ಕಪ್ಪು ಕನ್ನಡಕಗಳನ್ನು ಧರಿಸಿ ಅದ್ಭುತವಾದ ಉಡುಪಿನಲ್ಲಿ ಸಮುದ್ರ ತೀರದಲ್ಲಿ ಪೋಸ್ ನೀಡಿದ್ದಾಳೆ.

ಕಂಗುವ ತಾರೆ ದಿಶಾ ಪಟಾನಿ ಸಹ ದೀಪಾವಳಿಯಂದು ತಮ್ಮ ಕುಟುಂಬದಿಂದ ದೂರವಿದ್ದು, ಈ ವರ್ಷ ಆಕೆ ತನ್ನ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ಕೋರುತ್ತಾ, "ಹ್ಯಾಪಿಯೆಸ್ಟ್ ದೀಪಾವಳಿ. ನಾನು ಮನೆ ಮತ್ತು ಸಿಹಿತಿಂಡಿಗಳನ್ನು ಕಳೆದುಕೊಂಡಿದ್ದೇನೆ. ಈ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಮತ್ತು ಬೆಳಕನ್ನು ತರಲಿ ಮತ್ತು ನಾವು ನಮ್ಮೊಂದಿಗೆ ಮತ್ತು ಇತರರೊಂದಿಗೆ ಹೆಚ್ಚು ಇರಬೇಕೆಂದು ನಾನು ಭಾವಿಸುತ್ತೇನೆ" ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಾಕಿದ್ದಾರೆ.

ಇನ್ನು ಮದುವೆಯ ನಂತರ ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಇಕ್ಬಾಲ್ ಅವರೊಂದಿಗೆ ಮೊದಲ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ನಟಿ ತನ್ನ ಪತಿಯೊಂದಿಗೆ ರೊಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ಪ್ರತಿ ಮನೆಯಲ್ಲಿ ಬೆಳಕು, ಸಂತೋಷ, ತರಲಿ ಎಂದು ನಮ್ಮ ಪ್ರಾರ್ಥನೆ" ಎಂದು ತನ್ನ ಇನ್​ಸಟಾಗ್ರಾಮ್​ ಖಾತೆಯಲ್ಲಿ ಬರೆದಿದ್ದಾರೆ.

ಸೋನಾಕ್ಷಿ ಸಿನ್ಹಾ ಹಸಿರು ಬಣ್ಣದ ಸೂಟ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ತೆರೆದ ಕೂದಲು, ಕಿವಿಯೋಲೆಗಳು ಮತ್ತು ಬಿಂದಿಯೊಂದಿಗೆ ಸರಳವಾಗಿ ಕಾಣಿಸಿಕೊಂಡಿದ್ದು, ಜಹೀರ್ ಕಪ್ಪು ಕುರ್ತಾ ಮತ್ತು ಬೂದು ಬಣ್ಣದ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾನೆ.

ಕರೀನಾ, ದಿಶಾ ಮತ್ತು ಸೋನಾಕ್ಷಿ ಮಾತ್ರವಲ್ಲದೆ, ಮಲೈಕಾ ಅರೋರಾ ಮತ್ತು ನಿಮ್ರತ್ ಕೌರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net