ಮರುಮದುವೆಗೆ ಷರತ್ತು ವಿಧಿಸಿದ ಡಿವೋರ್ಸ್ ಪಡೆದ ಮಹಿಳೆ.. ಬೆಚ್ಚಿಬಿದ್ದ ಜನ!

Marriage
Published on

ಬೆಂಗಳೂರು : ತಾನು ಮದುವೆಯಾಗುವ ಹುಡುಗ ಸುಂದರಾಂಗನಾಗಿರಬೇಕು, ಉನ್ನತ ಮಟ್ಟದ ಶಿಕ್ಷಣ, ಸರ್ಕಾರಿ ಉದ್ಯೋಗ, ಲಕ್ಷಕ್ಕೆ ಮೇಲೆ ಸಂಬಳ, ಸಾಮಾಜಿಕ ಸ್ಥಾನಮಾನ, ಹಳ್ಳಿ ಕಡೆ ಹತ್ತಾರು ಎಕರೆ ಜಮೀನು, ಬೆಂಗಳೂರಿನಂಥ ನಗರದಲ್ಲಿ ಸ್ವಂತಮನೆ ಇರಬೇಕೆಂಬುದು ಈಗಿನ ಹುಡುಗಿಯರು ಇಡುವ ಬೇಡಿಕೆ. ಆದರೆ ಇಲ್ಲೊಬ್ಬ ಮಹಿಳೆ ವರನ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಎರಡನೆ ಮದುವೆಗೆ ಷರತ್ತು ಹಾಕಿದ್ದು ವೈರಲ್ ಆಗಿದೆ. ಆಕೆಯ ದೂಷಣೆ ಕಂಡು ಜನ ಬೆಚ್ಚಿಬಿದ್ದಿದ್ದಾರೆ.

ಡಿವೋರ್ಸ್​ ತೆಗೆದುಕೊಂಡ ಮಹಿಳೆ ಎರಡನೇ ಮದುವೆಗೆ ಹಾಕಿದ ಷರತ್ತುಗಳನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಇದು ದಿಢೀರ್ ಚರ್ಚೆಗೆ ಗ್ರಾಸವಾಗಿದೆ.

ತನ್ನ ವೈವಾಹಿಕ ಪ್ರೊಫೈಲ್‌ನಲ್ಲಿ, ತನ್ನ ನಿರೀಕ್ಷಿತ ಪತಿ ಹೊಂದಿರಬೇಕಾದ ಅರ್ಹತೆಗಳನ್ನು ಅವರು ಹಂಚಿಕೊಂಡಿದ್ದಾರೆ. ಆಕೆಯ ವಿವರಗಳ ಪ್ರಕಾರ, ಆಕೆಯ ಭಾವಿ ಸಂಗಾತಿಯು ವಾರ್ಷಿಕ 30 ಲಕ್ಷ ಸಂಬಳವನ್ನು ಹೊಂದಿರಬೇಕು. 3 ಬೆಡ್‌ರೂಮ್‌ಗಳ ಮನೆ ಇರಬೇಕು. ಆದರೆ ಅತ್ತಿಗೆ ಇರಬಾರದು ಎಂದು ಆಕೆ ತನ್ನ ಬೇಡಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸಿದ್ದಾರೆ.

ಭಾವಿಪತಿ ಕನಿಷ್ಠ ಎಂಬಿಎ ಹೊಂದಿರಬೇಕು ಮತ್ತು ಅವರು ಎನ್‌ಆರ್‌ಐ ಆಗಿದ್ದರೆ, ಅವರು ವಾರ್ಷಿಕವಾಗಿ ಕನಿಷ್ಠ 90 ಸಾವಿರ ಡಾಲರ್ ಗಳಿಸಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಮದುವೆಯಾದ ನಂತರ ಪತಿ ಹೆಚ್ಚಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು. ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಬೇಕು. ಆಕೆಯ ಪೋಷಕರು ಸಹ ಅವಳೊಂದಿಗೆ ಇರುತ್ತಾರಂತೆ. ಬ್ಯುಸಿ ಶೆಡ್ಯೂಲ್‌ನಿಂದಾಗಿ ಮನೆಗೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ತನಗೆ ಒಬ್ಬ ಸೇವಕಿ ಮತ್ತು ಅಡುಗೆಯ ಅಗತ್ಯವಿದೆ ಎಂದು ಅವಳು ಹೇಳಿಕೊಂಡಿದ್ದಾಳೆ.

ಆಕೆ ಡಿವೋರ್ಸ್​ ಪಡೆದವಳಾಗಿದ್ದು, ಆಕೆ ಸಂಬಳ ವಾರ್ಷಿಕ 1.3 ಲಕ್ಷ ರೂ. ಆದರೆ, ಆಕೆ ಬೇಡಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿವೆ.

ಮಹಿಳೆಯ ಮನಸ್ಥಿತಿ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇತ್ತೀಚೆಗೆ ಮದುವೆಗಳು ಪುರುಷರನ್ನು ಉಸಿರುಗಟ್ಟಿಸುತ್ತಿವೆ ಎಂದು ಕೆಲವರು ಹೇಳಿದರು. ತಿಂಗಳಿಗೆ 15 ಸಾವಿರ ರೂ. ಸಂಪಾದಿಸಲಾಗದ ಮಹಿಳೆ, ವಾರ್ಷಿಕ 30 ಲಕ್ಷ ರೂ.ಗಳಿಸುವ ಪುರುಷ ಬೇಕೇ? ಎಂದು ಪ್ರಶ್ನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net